ದಾವಣಗೆರೆ : ಉಜ್ಜಿನಿ ಜಗದ್ಗುರುಗಳನ್ನು ಪೀಠದಿಂದ ಕೆಳಗಿಳಿಸುವ ಚಿಂತನೆ ಇಲ್ಲ, ಉಜ್ಜಿನಿ ಪೀಠಾಧಿಪತಿ ವಿಚಾರದಲ್ಲಿ ನಾವು ಯಾರಿಂದಲೂ ಹಣ ಪಡೆದಿಲ್ಲ. ಹಣ ಪಡೆದಿರುವುದು ಸಾಬೀತು ಮಾಡಿದ್ರೆ, ನಾವು ಮತ್ತು ರಂಭಾಪುರಿ ಶ್ರೀಗಳು ಕೈ ಕಡಿದುಕೊಳ್ಳುತ್ತೇವೆ ಎಂದು ಕೇದಾರ ಜಗದ್ಗುರು ಪ್ರತಿಜ್ಞೆ ಮಾಡಿದರು.
ಕಾಶಿ ಜಗದ್ಗುರು ವಿರುದ್ಧ ಕೇದಾರ ಜಗದ್ಗುರು ವಾಗ್ದಾಳಿ :
ಈ ಕುರಿತು ಮಾತನಾಡಿದ ಅವರು, ಕಾಶಿ ಪೀಠದ ಜಗದ್ಗುರು ಹೇಳಿದ್ದು ಸುಳ್ಳಾದರೆ ನಾಲಿಗೆ ಕತ್ತರಿಸಿಕೊಳ್ಳಲಿ, ಇಲ್ಲವಾದರೆ ತೆಪ್ಪಗೆ ಇರಲಿ ಎಂದು ಎಚ್ಚರಿಕೆ ನೀಡಿದರು. ಪಂಚ ಪೀಠದ ಪರಂಪರೆ, ನಿಯಮಾವಳಿಯಂತೆ ನಡೆದುಕೊಳ್ಳುವುದು ಸಮಸ್ಯೆ ಪರಿಹಾರಕ್ಕೆ ಏಕೈಕ ಮಾರ್ಗವಾಗಿದೆ. ನಿಯಮ ಕಲಿಯದ ಪರಿಣಾಮ ಇಂಥಹ ಪರಿಸ್ಥಿತಿ ಎದುರಾಗಿದೆ. ಗುರುವಿಗೆ ಕೊಟ್ಟ ವಚನವನ್ನು ಯಾರೂ ಮೀರಬಾರದು. ಅವರ ವಚನವನ್ನು ಮೀರಿದರೆ, ಈ ರೀತಿಯ ರಾಜಕೀಯ ಬೆಳವಣೆಗೆಯಾಗುತ್ತದೆ. ಉಜ್ಜಿನಿ ಪೀಠದ ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವ ವಿಚಾರ ಕಾಶಿ ಪೀಠದ ಜಗದ್ಗುರುಗಳಿಂದಾಗಿ ಬಹಿರಂಗವಾಗಿದ್ದು, ಇದರಿಂದ ನಾವು ಕೂಡ ಮಾಧ್ಯಮದ ಮುಂದಿನ ಬರಬೇಕಾಯಿತು ಎಂದರು.
ಓದಿ: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ: ದಯಾನಂದ ಪುರಿ ಸ್ವಾಮೀಜಿ ಒತ್ತಾಯ
ಪಂಚ ಪೀಠಗಳು ಶಾಶ್ವತ, ಅದರೆ ಪೀಠಗಳನ್ನು ಅಲಂಕರಿಸುವ ವ್ಯಕ್ತಿಗಳು ಶಾಶ್ವತವಲ್ಲ. ಪೀಠದ ಪರಂಪರೆ ಎಂದಿಗೂ ಅಮರವಾಗಿರುತ್ತದೆ. ವ್ಯಕ್ತಿಗತ ದೋಷಗಳನ್ನು ವ್ಯಕ್ತಿಗಳೇ ತಿದ್ದಿಕೊಳ್ಳಬೇಕು, ಪಂಚ ಪೀಠಗಳಲ್ಲಿ ಯಾವುದೇ ದೋಷಗಳಿಲ್ಲ ಎಂದು ಹೇಳಿದರು.