ETV Bharat / state

ಟಿಪ್ಪುವಿನ ಹೆಸರೇ ಗೊಂದಲದಲ್ಲಿದೆ ಅವನ ಸಾಧನೆಗಳೂ ಚರ್ಚೆಯಲ್ಲಿವೆ ಅಂತಹ ಹೆಸರು ಬಳಕೆಗೆ ಸೂಕ್ತವಲ್ಲ: ಕಟೀಲ್​

ಒಡೆಯರ್ ಅವರ ಕೊಡುಗೆ ಈ ರಾಜ್ಯಕ್ಕೆ ಅಪಾರವಿದೆ, ಶ್ರೇಷ್ಠ ಅಭಿವೃದ್ಧಿ ಹರಿಕಾರರು ಒಡೆಯರ್ ಹಾಗಾಗಿ ಬೆಂಗಳೂರು ಮೈಸೂರು ರೈಲಿಗೆ ಒಡೆಯರ್​​ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಕಟೀಲ್​ ಹೇಳಿದರು.

Kn_dvg_04_08
ನಳೀನ್​ ಕುಮಾರ್​ ಕಟೀಲ್​
author img

By

Published : Oct 8, 2022, 5:48 PM IST

Updated : Oct 8, 2022, 8:01 PM IST

ದಾವಣಗೆರೆ: ಟಿಪ್ಪು ಹೆಸರೇ ಗೊಂದಲದಲ್ಲಿದೆ, ಅವನ ಸಾಧನೆಗಳು ಚರ್ಚೆಯಲ್ಲಿವೆ, ಹಾಗಾಗಿ ಚರ್ಚೆಯಲ್ಲಿ ಇರುವ ಹೆಸರು ಬಳಕೆಗೆ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು‌, ಒಡೆಯರ್ ಅವರ ಕೊಡುಗೆ ಈ ರಾಜ್ಯದಲ್ಲಿ ಅಪಾರವಿದೆ, ಶ್ರೇಷ್ಠ ಅಭಿವೃದ್ಧಿ ಹರಿಕಾರರು ಒಡೆಯರ್. ಮೋದಿಯವರು ಈಗ ಏನ್ ಮಾಡಿದ್ದಾರೋ ಅದನ್ನು ಒಡೆಯರ್ ಆಗಿನ ಕಾಲದಲ್ಲಿ ಮಾಡಿದ್ದಾರೆ. ಅದಕ್ಕಾಗಿ ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಮರು ನಾಮಕರಣ ಮಾಡಲಾಗಿದೆ ಎಂದರು.

ಎಸ್ಸಿ ಎಸ್​ಟಿ ಮೀಸಲಾತಿ ಬೇಡಿಕೆ ಈಡೇರಿಕೆ: ಎಸ್​.ಸಿ, ಎಸ್.​ಟಿ ಮೀಸಲಾತಿ ಬೇಡಿಕೆ ಈಡೇರಿಕೆ ಮಾಡಿದ್ದೇವೆ, ಅದಕ್ಕಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ, ಎಲ್ಲಾ ಜನರ ಜನತೆಗೆ ಬೆಂಬಲವಾಗಿ ನಿಲ್ಲುವ ಪಾರ್ಟಿಯಾಗಿ ನಾವು ಗುರುತಿಸಿಕೊಂಡಿದ್ದೇವೆ. ಎರಡು ಸಮುದಾಯಕ್ಕೆ ನ್ಯಾಯ ಸಿಕ್ಕಿದೆ, ಎಲ್ಲ ಕಾನೂನು ವಿವರಗಳನ್ನು ಪಡೆದು ಹೆಚ್ಚಳ ಮಾಡಿದ್ದಾರೆ. ಸಾಂವಿಧಾನಿಕವಾಗಿ ತಯಾರಿ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.

ಇನ್ನು ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಗೆ ಅಸಮಾಧಾನ ಇಲ್ಲ. ಖಾಲಿ ಇರುವ ಸಚಿವ ಸ್ಥಾನಗಳನ್ನು ತುಂಬಿಸಲು ಹೇಳಿದ್ದಾರೆ. ಅವರು ನಿರಂತರವಾಗಿ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಸಂಪುಟ ವಿಸ್ತರಣೆಗೆ ಸಲಹೆ ನೀಡಿದ್ದಾರೆ, ಅದು ಸಿಂ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.

ನಳೀನ್​ ಕುಮಾರ್​ ಕಟೀಲ್ ಹೇಳಿಕೆ​

ಭಾರತ್ ಜೋಡೋ ಹಾಗೂ ಎಸ್ಸಿ ಎಸ್ಟಿ ಮೀಸಲಾತಿಗೆ ಸಂಬಂಧ ಇಲ್ಲ: ಕಾಂಗ್ರೆಸ್ ಸರ್ಕಾರ ಇದ್ದಾಗ ಅವರ ನಾಯಕರು ಕಣ್ಮುಚ್ಚಿ ಕುಳಿತಿದ್ದರು, ಅವರ ಬಗ್ಗೆ ಕಾಳಜಿ ಇದ್ದಿದ್ದರೆ ಅವರ ಕಾಲಘಟ್ಟದಲ್ಲಿ ಮಾಡಬಹುದಿತ್ತು. ಅವರು ಕಮಿಟಿ ಮಾಡಿ ಕಮಿಟಿಯನ್ನು ಮುಚ್ಚಿ ಹಾಕುವ ಪ್ರಯತ್ನ ಸಿದ್ದರಾಮಣ್ಣ ಮಾಡಿದ್ರು.

ನಮ್ಮ ಸರ್ಕಾರ ಮಾತು ತಪ್ಪದೇ ನುಡಿದಂತೆ ನಡೆದಿದೆ. ಭಾರತ್ ಜೋಡೋ ಭಾರತದಿಂದ ಓಡುವಂತಹ ಯಾತ್ರೆ, ಮಕ್ಕಳು ಕೂಡ ಈಗ ಕೇಳ್ತಾ ಇದಾರೆ, ಗಾಂಧಿಗೂ ಈಗಿರುವ ಗಾಂಧಿ ಕುಟುಂಬಕ್ಕೂ ಏನ್ ಸಂಬಂಧ. ಭಾರತ ವಿಭಜನೆಗೆ, ಎಲ್ಲ ಗೊಂದಲಕ್ಕೂ ಕಾಂಗ್ರೆಸ್ ಕಾರಣ, ಧರ್ಮ ಹಾಗೂ ಜಾತಿಗಳ ನಡುವಿನ ಸಂಘರ್ಷಕ್ಕೆ ಕಾಂಗ್ರೆಸ್​ನ ತೀರ್ಮಾನವೇ ಕಾರಣ ಎಂದರು.

ಮುಸ್ಲಿಂ ಸಮುದಾಯದಲ್ಲಿ ಜಯಂತಿ ಆಚರಣೆ ಪದ್ದತಿ ಇಲ್ಲ: ಮುಸ್ಲಿಂ ಸಮುದಾಯದಲ್ಲಿ ಜಯಂತಿ ಆಚರಣೆ ಪದ್ದತಿ ಇಲ್ಲ, ಸಿದ್ದರಾಮಣ್ಣ ಸರ್ಕಾರ ಬಂದಾಗ ಟಿಪ್ಪು ಜಯಂತಿ ತಂದು ದುರಂತಕ್ಕೆ ಕಾರಣರಾದರು ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು. ಮುಸ್ಲಿಮರ ಭಾವನೆಗಳನ್ನು ಹೊಡೆದು ಹಾಕಿ ಭಾವನೆಗಳನ್ನು ಕೆರಳಿಸಿದರು, ಮತ ಬ್ಯಾಂಕ್​ಗಾಗಿ ಸಣ್ಣತನದ ರಾಜಕಾರಣ ಮಾಡಿದರು.

ಭಾರತವನ್ನು ಜಾತಿ, ಮತ, ಪಂಥ, ಪಂಗಡಗಳನ್ನ ವಿಭಜನೆ ಮಾಡಿದವರು ಎಲ್ಲಿ ಜೋಡೋ ಮಾಡುತ್ತಾರೆ. ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದವರು, ಪಾಕಿಸ್ತಾನದ ಪರ ಮಾತನಾಡಿದರನ್ನು ಜೋಡಿಸಿಕೊಂಡು ಹೋಗ್ತಾರೆ ಎಂದು ಆರೋಪಿಸಿದರು.

ಈ ದೇಶವನ್ನು ಜೋಡಿಸಿದವರು ಅಟಲ್ ಬಿಹಾರಿ ವಾಜಪೇಯಿ: ಈ ದೇಶವನ್ನು ಜೋಡಿಸಿದವರು ಯಾರಾದರೂ ಇದ್ದರೆ ಅದು ಅಟಲ್ ಬಿಹಾರಿ ವಾಜಪೇಯಿ. ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೆ ಚತುಷ್ಪಥ ರಸ್ತೆ ಮಾಡಿ ಜೋಡಿಸಿದ್ದಾರೆ,‌ ಆ ರಸ್ತೆಯ ‌ಮೇಲೆ ನಮಸ್ಕಾರಿಸಿ, ವಾಜಪೇಯಿ ಅವರನ್ನ ಸ್ಮರಿಸಿ ಅವರು ಹೋಗಬೇಕಿದೆ ಎಂದರು.

ಇನ್ನು ಅಕ್ಟೋಬರ್ 11 ರಿಂದ ಸಿಎಂ ನೇತೃತ್ವದಲ್ಲಿ ಕರ್ನಾಟಕ ಯಾತ್ರೆ ಶುರುವಾಗುತ್ತದೆ. ಅರ್ಕಾವತಿ ಬಡಾವಣೆ ಹಗರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅರ್ಕಾವತಿ ಹಗರಣವನ್ನು ಮುಚ್ವಿಡುವ ಪ್ರಯತ್ನ ಸಿದ್ದರಾಮಯ್ಯ ಮಾಡಿದ್ದಾರೆ, ದಾಖಲೆಗಳನ್ನು ಮುಚ್ವಿಟ್ಟಿದ್ದಾರೆ, ನಮ್ಮ ಸರ್ಕಾರ ದಾಖಲೆಗಳನ್ನು ಹೊರ ತೆಗೆಯುವ ಕೆಲಸ ಮಾಡುತ್ತಿದೆ, ಫಲಿತಾಂಶ ಕ್ಕಾಗಿ ಕಾದು ನೋಡಿ ಎಂದು ತಿಳಿಸಿದರು.

ಇದನ್ನೂ ಓದಿ: ಈಡೇರಿದ ಮೀಸಲಾತಿ ಬೇಡಿಕೆ.. ನನ್ನನ್ನು ಗೇಲಿ ಮಾಡುತ್ತಿದ್ದವರಿಗೆ ಈಗ ನೆಮ್ಮದಿ ಸಿಕ್ಕಿದೆ.. ಸಚಿವ ಶ್ರೀರಾಮುಲು

Last Updated : Oct 8, 2022, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.