ETV Bharat / state

ಆಯೋಗ ಸೂಚಿಸಿದರೆ ಗ್ರಾ.ಪಂ ಚುನಾವಣೆ ನಡೆಸಲು ಸಿದ್ಧ: ಕೆ.ಎಸ್.ಈಶ್ವರಪ್ಪ

ಕೊರೊನಾ ಹಿನ್ನೆಲೆ ಗ್ರಾ.ಪಂ ಚುನಾವಣೆ ನಡೆಸುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿದೆ. ಕಾಂಗ್ರೆಸ್, ಜೆಡಿಎಸ್ ಕೂಡ ಸದ್ಯಕ್ಕೆ ಚುನಾವಣೆ ಬೇಡ ಎನ್ನುತ್ತಿದ್ದಾರೆ. ಆದಾಗ್ಯೂ ನ್ಯಾಯಾಲಯ, ಚುನಾವಣಾ ಆಯೋಗ ಸೂಚನೆ ನೀಡಿದರೆ ನಾವು ಚುನಾವಣೆ ನಡೆಸಲು ಸಿದ್ಧ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Eshwarappa
Eshwarappa
author img

By

Published : Oct 24, 2020, 5:21 PM IST

ಹರಿಹರ : ನ್ಯಾಯಾಲಯ ಮತ್ತು ಚುನಾವಣಾ ಆಯೋಗ ಸೂಚನೆ ನೀಡಿದರೆ ರಾಜ್ಯದಲ್ಲಿ ಗ್ರಾ.ಪಂ ಚುನಾವಣೆ ನಡೆಸಲು ಸಿದ್ಧವೆಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಹೊರವಲಯದ ಕಾಗಿನೆಲೆ ಕನಕ ಗುರುಪೀಠ ಬೆಳ್ಳೂಡಿ ಶಾಖಾ ಮಠಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಹಾವಳಿ ರಾಜ್ಯದಲ್ಲಿ ಇನ್ನೂ ಇದೆ. ಶಾಲಾ ಕಾಲೇಜುಗಳನ್ನು ಯಾವಾಗ, ಹೇಗೆ ಆರಂಭಿಸಬೇಕೆಂದು ಚರ್ಚೆ ನಡೆಯುತ್ತಿದೆ ಎಂದರು.

ಕೊರೊನಾ ಹಿನ್ನೆಲೆ ಗ್ರಾ.ಪಂ ಚುನಾವಣೆ ನಡೆಸುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿದೆ. ಕಾಂಗ್ರೆಸ್, ಜೆಡಿಎಸ್ ಕೂಡ ಸದ್ಯಕ್ಕೆ ಚುನಾವಣೆ ಬೇಡ ಎನ್ನುತ್ತಿದ್ದಾರೆ. ಆದಾಗ್ಯೂ ನ್ಯಾಯಾಲಯ, ಚುನಾವಣಾ ಆಯೋಗ ಸೂಚನೆ ನೀಡಿದರೆ ನಾವು ಚುನಾವಣೆ ನಡೆಸಲು ಸಿದ್ಧವೆಂದರು.

ರಾಜ ರಾಜೇಶ್ವರಿ, ಶಿರಾ ಉಪ ಚುನಾವಣೆ ಹಾಗೂ ಎಂಎಲ್‌ಸಿ ಚುನಾವಣಾ ಫಲಿತಾಂಶವನ್ನು ರಾಜ್ಯ ಬಿಜೆಪಿ ಸರ್ಕಾರ ದಿಕ್ಸೂಚಿಯಾಗಿ ಸ್ವೀಕರಿಸಬೇಕೆಂದು ವಿಪಕ್ಷದವರು ನೀಡಿರುವ ಸವಾಲನ್ನು ನಾವು ಸ್ವೀಕರಿಸುತ್ತೇವೆ. ಈ ಬಾರಿ ಕೂಡ ಜನತೆ ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬಿಹಾರ ಸರ್ಕಾರ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಣೆ ಮಾಡಲು ನಿರ್ಧರಿಸಿದೆ. ರಾಜ್ಯದಲ್ಲಿ ಕೂಡ ಲಸಿಕೆ ಉಚಿತವಾಗಿ ನೀಡಬೇಕೇ, ಯಾವಾಗ ವಿತರಣೆ ಮಾಡಬೇಕೆಂಬ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.