ETV Bharat / state

ದಾವಣಗೆರೆಯ ಬಿಜೆಪಿ ಸಂಸದರು, ಶಾಸಕರು ಜೈಲಿಗೆ ಹೋಗಲು ಸಿದ್ಧರಾಗಿ: ದಿನೇಶ್ ಕೆ.ಶೆಟ್ಟಿ

ಬಿಜೆಪಿ ಅಧಿಕಾರದಲ್ಲಿದ್ದಾಗ ದಾವಣಗೆರೆಯಲ್ಲಿ ನಡೆದ ಎಲ್ಲ ಹಗರಣಗಳ ತನಿಖೆ ಮಾಡಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ

author img

By

Published : Aug 11, 2023, 10:15 PM IST

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಹೇಳಿಕೆ

ದಾವಣಗೆರೆ : ಬಿಜೆಪಿ ಸರ್ಕಾರದ ಮೂರೂವರೆ ವರ್ಷಗಳ ಆಡಳಿತಾವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಈಗಾಗಲೇ ರಾಜ್ಯ ಸರ್ಕಾರ ತನಿಖೆ ಮಾಡಿಸಲು ಸೂಚನೆ ಕೊಟ್ಟಿದೆ. ಹೀಗಾಗಿ, ದಾವಣಗೆರೆ ಬಿಜೆಪಿ ಮಾಜಿ ಶಾಸಕರುಗಳು, ಸಂಸದರು ಜೈಲಿಗೆ ಹೋಗಲು ಸಿದ್ಧರಾಗಿ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಎಚ್ಚರಿಕೆ ಕೊಟ್ಟರು.

ಜಿಲ್ಲಾ ವರದಿಗಾರರ ಕೂಟದಲ್ಲಿ ಮಾತನಾಡಿದ ದಿನೇಶ್, ದಾವಣಗೆರೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲೆಯ 40% ಕಮಿಷನ್​ಗಾಗಿ ಕೆಲವು ಇಲಾಖೆಗಳಲ್ಲಿ ಸಂಸದರು, ಮಾಜಿ ಶಾಸಕರು ಮಾಡಿರುವ ಹಗರಣಗಳನ್ನು ಬಯಲಿಗೆಳೆಯಲು ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್​.ಎಸ್.ಮಲ್ಲಿಕಾರ್ಜುನ ಅವರು ಈಗಾಗಲೇ ತನಿಖೆಗೆ ಸೂಚಿಸಿದ್ದು, ತನಿಖೆಯ ವರದಿ ಬಂದ ತಕ್ಷಣ ಭ್ರಷ್ಟಾಚಾರದಲ್ಲಿ ಭಾಗಿಗಳಾದ ಬಿಜೆಪಿ ಸಂಸದರು, ಶಾಸಕರನ್ನು ಜೈಲಿಗೆ ಕಳುಹಿಸುವುದು ಶತಸಿದ್ಧ ಎಂದರು.

ಕಳೆದ ಮೂರು ದಿನಗಳಿಂದ ನಡೆದ ಗೃಹಜ್ಯೋತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿಯವರು ಸಚಿವರನ್ನು ಸಲುಗೆಯಿಂದ ಮಲ್ಲಣ ಎಂದಿದ್ದು, ಬಿಜೆಪಿಯವರು ತಪ್ಪು ಎನ್ನುತ್ತಿದ್ದಾರೆ. ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಅಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗು ಅಂದಿನ ಎಸ್ಪಿ ಸಿಬಿ ರಿಷ್ಯಂತ್ ಅವರಿಲ್ಲದೇ ಮನೆಯಿಂದಲೇ ಹೊರ ಬರುತ್ತಿರಲಿಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದರ ಅಕ್ಕಪಕ್ಕ ಬಿಜೆಪಿ ಮುಂಖಡರಾದ ಯಶವಂತ್ ರಾವ್ ಜಾಧವ್ ಹಾಗು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಇಬ್ಬರನ್ನೂ ಕೂರಿಸಿಕೊಂಡಿದ್ದನ್ನು ನಾವು ನೋಡಿದ್ದೇವೆ. ಸಿದ್ದೇಶ್ವರ್ ಅವರು ಬಿಜೆಪಿ ಸರ್ಕಾರದ ಮೂರುವರೆ ವರ್ಷದಲ್ಲಿ ಇದೇ ಮಹಾಂತೇಶ್ ಬೀಳಗಿಯವರನ್ನು ಹೇಗೆಲ್ಲ ಉಪಯೋಗಿಸಿಕೊಂಡರು. ನಮಗೆ ಚೆನ್ನಾಗಿ ಗೊತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಸರ್ಕಾರ ವಿರೋಧಿ ಭಾಷಣ ಮಾಡಿದ್ದಕ್ಕಾಗಿ ನಮ್ಮ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಹರೀಶ್, ನಮ್ಮ ಕಾರ್ಯಕರ್ತರನ್ನು ಗೂಂಡಾ ಕಾರ್ಯಕರ್ತರೆಂದು ಕರೆದಿರುವುದು ಖಂಡನೀಯ. ಅವರು ಅನಾವಶ್ಯಕವಾಗಿ ಮಾತನಾಡುತ್ತಿದ್ದು, ಬಿಜೆಪಿ ಸರ್ಕಾರ ಇದ್ದಾಗ ಹರಿಹರದಲ್ಲಿ ಎಸ್.ರಾಮಪ್ಪ ಕಾಂಗ್ರೆಸ್ ಶಾಸಕರಾಗಿದ್ದರು. ಅಂದು ಏನೆಲ್ಲಾ ಭ್ರಷ್ಟಾಚಾರ ಮಾಡಿದ್ದಾರೆ ಎಂದು ನಮಗೆ ಗೊತ್ತಿದೆ. ಭ್ರಷ್ಟಾಚಾರ ನಡೆಸುವವರ ಕೈಗೊಂಬೆಯಾಗಿರುವ ಹರೀಶ್ ಹರಿಹರದಲ್ಲಿ ನಮ್ಮ ಶಾಸಕರಿದ್ದರೂ ಸಹ ಅಭಿವೃದ್ಧಿ ತಡೆದಿದ್ದರು. ಕೆಲವು ಭ್ರಷ್ಟ ಅಧಿಕಾರಿಗಳೊಂದಿಗೆ ಸೇರಿ ಭ್ರಷ್ಟಾಚಾರ ನಡೆಸಿರುವ ಬಗ್ಗೆಯೂ ನಮ್ಮ ಗಮನದಲ್ಲಿದ್ದು, ಇದರ ಬಗ್ಗೆಯೂ ಸ್ವಯಂ ತನಿಖೆಗೆ ಹರೀಶ್ ಮುಂದಾಗಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ : ನಾವು ಕಮಿಷನ್ ಹಿಂದೆ ಬಿದ್ದವರಲ್ಲ, ಕಮಿಷನ್ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.