ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಕುಸ್ತಿ ಒಳಾಂಗಣ ಕ್ರೀಡಾಂಗಣದಲ್ಲಿ ದಾವಣಗೆರೆ ವಿವಿ ಅಂತರ್ಕಾಲೇಜು ಮಟ್ಟದ ಕುಸ್ತಿ- ಜುಡೋ ಪಂದ್ಯಾವಳಿ ಹಾಗೂ ಆಯ್ಕೆ ನಡೆಯಿತು.
ಎಜಿಬಿ ಕಾಲೇಜು ನೇತೃತ್ವದಲ್ಲಿ ನಡೆದ ಕುಸ್ತಿ ಪಂದ್ಯಾವಳಿಗೆ ಮಾಜಿ ಶಾಸಕ ಕೆ ಮಲ್ಲಪ್ಪ, ಬಿ. ವೀರಣ್ಣ, ಕ್ರೀಡಾಕೂಟದ ನಿರ್ದೇಶಕ ರಾಜಕುಮಾರ್ ಚಾಲನೆ ನೀಡಿದರು. ಕುಸ್ತಿ ಆಯ್ಕೆಯಲ್ಲಿ 50ಕ್ಕೂ ಹೆಚ್ಚು ಕುಸ್ತಿಪಟುಗಳ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ ಮಲ್ಲಪ್ಪ ಅವರು, ದಾವಣಗೆರೆ ಕುಸ್ತಿಪಟುಗಳು ಒಳ್ಳೆಯ ಹೆಸರು ಪಡೆಯುತ್ತಿದ್ದಾರೆ. ಉತ್ತಮ ಅಭ್ಯಾಸ ಮಾಡಿ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ದಾವಣಗೆರೆಗೆ ಒಳ್ಳೆಯ ಹೆಸರು ತನ್ನಿ ಎಂದು ಕುಸ್ತಿಪಟುಗಳಿಗೆ ಕಿವಿಮಾತು ಹೇಳಿದರು.