ETV Bharat / state

ದಾವಣಗೆರೆ ಜಿಲ್ಲಾಡಳಿತಕ್ಕೆ ತಲೆನೋವಾದ SARI-  ILI ಕೇಸ್​​​​ಗಳು!

author img

By

Published : Jul 25, 2020, 1:08 PM IST

Updated : Jul 25, 2020, 1:32 PM IST

ದಾವಣಗೆರೆ ಜಿಲ್ಲೆಯಲ್ಲಿ ತೀವ್ರ ಉಸಿರಾಟ ಹಾಗೂ ಶೀತ, ಜ್ವರ, ಕೆಮ್ಮು, ಮೈ-ಕೈ ನೋವು ಸೇರಿದಂತೆ ಕೊರೊನಾ ಗುಣಲಕ್ಷಣಗಳುಳ್ಳ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದುವರೆಗೆ ಸಾರಿ ಪ್ರಕರಣಗಳಿಂದ ಬಳಲುತ್ತಿದ್ದ 53 ಹಾಗೂ ಐಎಲ್​​ಐ (ಇನ್ಫ್ಲೂಯೆಂಜಾ ಲೈಕ್ ಇಲ್​​ನೆಸ್​​​​​ (Influenza like Illnesses) ಸಂಬಂಧಿತ ಕಾಯಿಲೆಗೆ ತುತ್ತಾದ 162 ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

Increase in SARI, ILI cases in Davanagere
ದಾವಣಗೆರೆ ಜಿಲ್ಲಾಡಳಿತಕ್ಕೆ ತಲೆನೋವಾದ SARI, ILI ಕೇಸ್ ಗಳು...!

ದಾವಣಗೆರೆ: ತೀವ್ರ ಉಸಿರಾಟ ಹಾಗೂ ಶೀತ, ಜ್ವರ, ಕೆಮ್ಮು, ಮೈ-ಕೈ ನೋವು ಸೇರಿದಂತೆ ಕೊರೊನಾ ಗುಣಲಕ್ಷಣಗಳುಳ್ಳ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದುವರೆಗೆ "ಸಾರಿ'(ತೀವ್ರವಾದ ಉಸಿರಾಟದ ಸೋಂಕು(Severe acute respiratory infection )ಯಿಂದ ಬಳಲುತ್ತಿದ್ದ 53 ಹಾಗೂ ಐಎಲ್​ಐ ರೋಗ ಲಕ್ಷಣಗಳಿಗೆ ತುತ್ತಾದ 162 ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 834 ಮಂದಿ ಪೈಕಿ 774 ಸ್ಯಾಂಪಲ್‌ ನೆಗೆಟಿವ್ ಬಂದಿದೆ. ಇತ್ತ ಐಎಲ್ಐ ಕೇಸ್ ಗಳಲ್ಲಿ 4,531 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇದರಲ್ಲಿ 4266 ಮಂದಿಯದ್ದು ನೆಗೆಟಿವ್ ಬಂದಿದೆ. 103 ಜನರ ರಿಪೋರ್ಟ್ ಬಾಕಿ ಇದ್ದು, ಆತಂಕ ಮತ್ತಷ್ಟು ಹೆಚ್ಚಿಸಿದೆ.

ಈಗಾಗಲೇ ಖಾಸಗಿ ಆಸ್ಪತ್ರೆ ಕ್ಲಿನಿಕ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ನೂರಕ್ಕೆ ನೂರರಷ್ಟು ರೋಗಿಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಇನ್ನು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿರುವುದರಿಂದ ಸರ್ವೇ ಕಾರ್ಯ ಸಹ ಮಂದಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಪೀಡಿತರು ಹೆಚ್ಚಾಗುವ ಸಾಧ್ಯತೆ ಇದೆ. 215 ಪ್ರಕರಣಗಳಲ್ಲಿ ಸರ್ವೇ ನಡೆಸಿದ ಬಳಿಕ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 77 ಮಂದಿಯಲ್ಲಿ ವೈರಾಣು ಇರುವುದು ಖಚಿತವಾಗಿದ್ದರೂ ಕೇವಲ 115 ಸ್ಯಾಂಪಲ್ ಗಳನ್ನು ಪಡೆಯಲಾಗಿದೆ.

ಏರುತ್ತಲೇ ಇವೆ ಕಂಟೇನ್ಮೆಂಟ್ ಝೋನ್ ಗಳು...!

ಜಿಲ್ಲೆಯಲ್ಲಿ ಒಟ್ಟು 241 ಕಂಟೇನ್ಮೆಂಟ್ ಝೋನ್​​​​​ಗಳಿದ್ದು, ಈ ಪೈಕಿ ದಾವಣಗೆರೆಯಲ್ಲಿ 114 ವಲಯಗಳಿವೆ. ಹರಿಹರ 38, ಜಗಳೂರು 30, ಚನ್ನಗಿರಿ 21, ಹೊನ್ನಾಳಿ 38 ಝೋನ್ ಗಳಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಇನ್ನು ಜಿಲ್ಲಾಡಳಿತ ಕೂಡ ಸಾಕಷ್ಟು ಬಿಗಿ ಕ್ರಮ‌ ಕೈಗೊಳ್ಳುತ್ತಿದೆಯಾದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನು ಸಮಾಧಾನಕರ ಸಂಗತಿ ಎಂದರೆ ಶೇಕಡಾ 70 ರಷ್ಟು ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.

Last Updated : Jul 25, 2020, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.