ETV Bharat / state

ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಬಳಿಕವೂ ನೋಂದಣಿ ಪ್ರಮಾಣ ಹೆಚ್ಚಳ: ಇಷ್ಟಿದೆ ಬೆಣ್ಣೆ ನಗರಿ ರಾಜಸ್ವ ಸಂಗ್ರಹದ ಗುರಿ - Aim of revenue collection

ಗರಿಷ್ಠ ರಾಜಸ್ವ ಸಂಗ್ರಹದ ಗುರಿ ಇಟ್ಟುಕೊಂಡಿರುವ ರಾಜ್ಯ ಸರ್ಕಾರ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡಿದೆ.

ಕಂದಾಯ ಇಲಾಖೆ
ಕಂದಾಯ ಇಲಾಖೆ
author img

By ETV Bharat Karnataka Team

Published : Dec 1, 2023, 3:03 PM IST

Updated : Dec 1, 2023, 10:45 PM IST

ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡುತ್ತಿರುವುದು

ದಾವಣಗೆರೆ: ಅಕ್ಟೋಬರ್‌ 1ರಿಂದ ಜಾರಿಗೆ ಬರುವಂತೆ ನಿವೇಶನ, ಕಟ್ಟಡ, ಭೂಮಿ ಮತ್ತಿತರ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದೆ. ಈ ಹೊಸ ನಿಯಮ ಈಗಾಗಲೇ ಜಾರಿಯಲ್ಲಿದೆ.

ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಜಸ್ವ ಸಂಗ್ರಹಕ್ಕೆ ಗುರಿ ನೀಡಿಲಾಗಿದ್ದು, ಸರ್ಕಾರದ ಬೊಕ್ಕಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಜನವರಿ 2019ರಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆಯಾಗಿತ್ತು. ಕಂದಾಯ ಇಲಾಖೆಯಿಂದ ಅಧಿಕ ಪ್ರಮಾಣದ ರಾಜಸ್ವ ಸಂಗ್ರಹಕ್ಕೆ ಗುರಿ ನೀಡಿದ್ದರಿಂದ ಇದೀಗ ಮತ್ತೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗಿದೆ.

ಹೊಸ ನಿಯಮ ಜಿಲ್ಲೆಗೂ ಅನ್ವಯವಾಗಿದೆ. ನಗರದ ಶಾಮನೂರು, ಕುಂದವಾಡ, ಯರಗುಂಟೆ, ಶಿರಮಗೊಂಡನಹಳ್ಳಿ ಇಷ್ಟು ಭಾಗದಲ್ಲಿ ಭೂಮಿಗೆ ಚಿನ್ನದಂತಹ ಬೇಡಿಕೆ ಇದ್ದು, ಈ ಹೊಸ ಮಾರ್ಗಸೂಚಿ ದರ ಹೆಚ್ಚು ಹೊರೆಯಾಗುತ್ತಿದ್ದರೂ ಕೂಡ ನೋಂದಣಿಗಳ ಪ್ರಮಾಣ ಮಾತ್ರ ಕುಗ್ಗಿಲ್ಲ. ಕಟ್ಟಡ, ಜಮೀನು, ನಿವೇಶನ, ಸೇರಿದಂತೆ ಉಳಿದ ಇನ್ನಿತರೆ ಸ್ಥಿರಾಸ್ತಿಗೆ ಶೇ. 30 ರಷ್ಟು ಮಾರ್ಗಸೂಚಿ ದರ ಹೆಚ್ಚಾಗಲಿದೆ. ಸರ್ಕಾರದ ಬೊಕ್ಕಸ ಹೆಚ್ಚಿಸಲು ದಾವಣಗೆರೆ ಉಪನೋಂದಣಿ ಅಧಿಕಾರಿಗಳಿಗೆ ಸರ್ಕಾರ ಒಂದು ವರ್ಷಕ್ಕೆ 167 ಕೋಟಿ ಗುರಿ ನೀಡಿದರೆ, ಜಿಲ್ಲೆಗೆ 245 ಕೋಟಿ ರಾಜಸ್ವ ಸಂಗ್ರಹಕ್ಕೆ ಗುರಿ ನೀಡಲಾಗಿದೆ. ಏಪ್ರಿಲ್​ನಿಂದ ಮಾರ್ಚ್​ಗೆ ಶೇ 167.61ರಷ್ಟು ಒಟ್ಟಾರೆ ಟಾರ್ಗೆಟ್ ನೀಡಲಾಗಿದ್ದು, ಉಪನೋಂದಣಾಧಿಕಾರಿಗಳಿಗೆ ತಲೆಬಿಸಿಯಾಗಿ ಪರಿಣಮಿಸಿದೆ ಎಂದು ಉಪನೋಂದಣಿ ಅಧಿಕಾರಿ ರಾಮಕೃಷ್ಣ ಮಾಹಿತಿ ನೀಡಿದರು.‌

ಈಟಿವಿ ಭಾರತದ ಜೊತೆಗೆ ಮಾತನಾಡಿದ ಅವರು, ಈ ಹೊಸ ದರದ ನಿಯಮ ಅಕ್ಟೋಬರ್ 01ರಿಂದ ಜಾರಿಯಾಗಿದ್ದರೆ, ಹಳೆ ದರ ಸೆಪ್ಟೆಂಬರ್ 29ಕ್ಕೆ ಕೊನೆಗೊಳಿಸಿದೆ. ಈಗ ಪ್ರತಿದಿನ 120 ಆಸ್ತಿ ಪತ್ರಗಳು ನೋಂದಣಿ ಆಗುತ್ತಿವೆ. ಈ ಹಿಂದೆ 100 ರಷ್ಟು ಪತ್ರಗಳು ನೋಂದಣಿಯಾಗುತ್ತಿದ್ದವು. ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಳ ಮಾಡಿದರೂ ಸಹ ನೋಂದಣಿ ಪ್ರಮಾಣದಲ್ಲಿ ಮಾತ್ರ ಕಡಿಮೆ ಆಗಿಲ್ಲ. ಐದು ವರ್ಷಗಳ ಬಳಿಕ ಈ ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಳ ಮಾಡಲಾಗಿದೆ ಎಂದರು.

ಸರ್ಕಾರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಮಾಡಿರುವುದಕ್ಕೆ ದಾವಣಗೆರೆಯಲ್ಲಿ ಒಳ್ಳೆ ಅಭಿಪ್ರಾಯ ಇದೆ. ಕಟ್ಟಡ, ಜಮೀನು, ನಿವೇಶನ, ಇತರ ಎಲ್ಲ ಆಸ್ತಿಗಳು ಶೇ. 30% ರಷ್ಟು ನಡೆಯುತ್ತಿವೆ. ಈ ಹಿಂದೆ 100 ಪತ್ರಗಳು ನೋಂದಣಿ ಆಗುತ್ತಿದ್ದವು. ದರ ಪರಿಷ್ಕರಣೆ ಬಳಿಕವೂ 100 ರಿಂದ‌120 ಪತ್ರಗಳು ನೋಂದಣಿ ಆಗುತ್ತಿವೆ. - ರಾಮಕೃಷ್ಣ

ಇದನ್ನೂ ಓದಿ: ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಬಳಿಕವೂ ಕುಗ್ಗದ ನೋಂದಣಿ: ಗೋಕುಲ್ ರೋಡ್​​ ಹುಬ್ಬಳ್ಳಿಯ ದುಬಾರಿ ಪ್ರದೇಶ

Last Updated : Dec 1, 2023, 10:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.