ದಾವಣಗೆರೆ: ಪರಿಹಾರ ವರದಿ ತಿರಸ್ಕಾರ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ. ರಾಜೀನಾಮೆ ಕೊಡುವ ಪ್ರಸಂಗ ಬಂದರೆ ಕೊಡುತ್ತೇವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ನಗರದಲ್ಲಿ ಮಾತನಾಡಿದ ಜಿ.ಎಂ.ಸಿದ್ದೇಶ್ವರ್, ವರದಿ ತಿರಸ್ಕಾರದ ಬಗ್ಗೆ ಡಿಸಿಎಂ ಹೇಳಿಕೆ ಕೊಟ್ಟಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಹಾಗೇನಾದರೂ ಆದರೆ ರಾಜೀನಾಮೆ ಕೊಡೋಣ ಬಿಡಿ. ಎಲ್ಲಾ ಸಂಸದರು ಪ್ರಧಾನ ಮಂತ್ರಿಯವರಿಗೆ, ಗೃಹ ಸಚಿವರಿಗೆ ಒತ್ತಡ ಹೇರಿದ್ದೇವೆ. ಯಾವ ರಾಜ್ಯಕ್ಕೂ ಪರಿಹಾರ ಬಿಡುಗಡೆಯಾಗಿಲ್ಲ. 2-3 ದಿನದಲ್ಲಿ ಪರಿಹಾರ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾರೋ ಹೇಳಿದಾಕ್ಷಣ ರಾಜೀನಾಮೆ ಕೊಡಲು ಬರುವುದಿಲ್ಲ. ಪ್ರತಿಪಕ್ಷ ಅವರ ಕೆಲಸ ಮಾಡುತ್ತಾರೆ. ಯಾರು ಹೇಗೆ ಎಂದು ಜನರಿಗೆ ಗೊತ್ತಿದೆ. ನಾವು ಸಹ ಕೇಳುತ್ತೇವೆ, ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.