ETV Bharat / state

ನಾನು ಬಯಸಿ ಸಿಎಂ ಆಗಿಲ್ಲ, ನರೇಂದ್ರ ಮೋದಿ ಅವರಿಂದಾಗಿ ಸಿಎಂ ಆದೆ: ಬೊಮ್ಮಾಯಿ - ಈಟಿವಿ ಭಾರತ ಕನ್ನಡ

ಹರಿಹರ ತಾಲೂಕಿನಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಮಾತನಾಡಿದರು.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Feb 9, 2023, 5:37 PM IST

ದಾವಣಗೆರೆ: ‌"ನಾನು ಬಯಸಿ ಸಿಎಂ ಆದವನಲ್ಲ, ನರೇಂದ್ರ ಮೋದಿ ಅವರಿಂದಾಗಿ ಸಿಎಂ ಆಗಿದ್ದೇನೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹರಿಹರ ತಾಲೂಕಿನಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಂಡು, ಎಸ್ಸಿ ಎಸ್ಟಿಗಳಿಗೆ ಮೀಸಲಾತಿ ವಿಚಾರ ಪ್ರಸ್ತಾಪಿಸಿದ ಅವರು, "ಈಗಾಗಲೇ ಹೊಸ ಮೀಸಲಾತಿ ನೀತಿ ಜಾರಿಗೆ ಬರಲಿದೆ. ಅದರ ಆದೇಶ ಪ್ರತಿಯನ್ನು ಸ್ವಾಮೀಜಿಗೆ ತೋರಿಸಿದ್ದೇವೆ. ಮೀಸಲಾತಿ ವಿಚಾರವನ್ನು 9ನೇ ಪರಿಚ್ಛೇದದಲ್ಲಿ ಸೇರಿಸುವ ಪ್ರಕ್ರಿಯೆ ಆರಂಭವಾಗಿದೆ" ಎಂದು ಹೇಳಿದರು.

"ಪರಿಶಿಷ್ಟರಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪರಿಶಿಷ್ಟ ಪಂಗಡದ ಮೇಲೆ ಪ್ರಧಾನಿಗೆ ಅಪಾರ ಗೌರವವಿದೆ. ರಾಷ್ಟ್ರಪತಿಯಂತಹ ಹುದ್ದೆಯನ್ನು ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರಿಗೆ ನೀಡಿದ್ದಾರೆ. ವಾಲ್ಮೀಕಿ ಸಮಾಜ ಒಂದು ರೀತಿಯಲ್ಲಿ ನನ್ನ ಸಮಾಜ ಇದ್ದಂತೆ. ನನ್ನ ಜೀವನದ ಕೊನೆಯುಸಿರು ಇರುವತನಕ ವಾಲ್ಮೀಕಿ ಸಮಾಜದ ಹಿತಕ್ಕೆ ಕೆಲಸ ಮಾಡುತ್ತೇನೆ" ಎಂದರು.

"ವಾಲ್ಮೀಕಿ ಜಾತ್ರೆಗೆ ಒಂದು ದೊಡ್ಡ ಶಕ್ತಿ ಬಂದಿದ್ದು, ಸಮಾಜವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ವಿಜಯ ನಗರ ಸಾಮ್ರಾಜ್ಯವನ್ನು ರಕ್ಷಣೆ ಮಾಡಿದ್ದು ವಾಲ್ಮೀಕಿ ಸಮಾಜದ ಹಕ್ಕಬುಕ್ಕರು. ಹೈದರಾಲಿ ಸೈನ್ಯ ಹಿಮ್ಮೆಟ್ಟಿಸಿ ಬುದ್ದಿ ‌ಕಲಿಸಿದ್ದು ಮದಕರಿ‌ ನಾಯಕ. ವಾಲ್ಮೀಕಿ ಅಂದ್ರೆ ಪರಿವರ್ತನೆ" ಎಂದು ಹೇಳಿದರು.

ಇದನ್ನೂ ಓದಿ: ಎಸ್​ಸಿ - ಎಸ್​ಟಿ ಮೀಸಲು ಹೆಚ್ಚಳ 9ನೇ ಪರಿಚ್ಛೇದಕ್ಕೆ ಸೇರ್ಪಡೆ: ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರದ ನಿರ್ಧಾರ?

"ನಮಗೆ ಬೇರೆಯವರ ರೀತಿ ಮಾತಿನಲ್ಲಿ ಮರುಳು ಮಾಡಲು ಬರುವುದಿಲ್ಲ. ಏಕಲವ್ಯನ ರೀತಿ ಕೆಲಸ ಮಾಡಲು ನಾವು ಸಿದ್ದರಿದ್ದೇವೆ" ಎನ್ನುತ್ತಾ ಮೀಸಲಾತಿ ವಿಚಾರದಲ್ಲಿ ನೀವು ಮೊದಲ ಹೆಜ್ಜೆಯನ್ನೇ ಇಟ್ಟಿಲ್ಲ, ಇನ್ನು ಮೀಸಲಾತಿ ಎಲ್ಲಿಂದ ಕೊಡ್ತೀರಿ ಎಂದು ಕೇಳಿದ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ನೀವು ಇದ್ದಾಗ ಮೀಸಲಾತಿ ಹೆಚ್ಚಳ ಮಾಡಿದ್ದರೆ ಇಷ್ಟೊತ್ತಿಗೆ 9ನೇ ಷೆಡ್ಯೂಲ್‌ಗೆ ಸೇರಿಸಬಹುದಿತ್ತು. ಜನವರಿ 10 ರಿಂದ ಮುಂಬರುವ ದಿನಗಳಲ್ಲಿ ಶಿಕ್ಷಣದಲ್ಲಿ ಮೀಸಲಾತಿ ನೀಡಲು ಅದೇಶಿಸಿದ್ದೇನೆ. ಬರುವ ದಿನಗಳಲ್ಲಿ‌ ನೇಮಕಾತಿಗಳು ಹೊಸ ಮೀಸಲಾತಿಯಿಂದ ಆಗುತ್ತದೆ. ಮೀಸಲಾತಿ ಅಷ್ಟೇ ಅಲ್ಲ, ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಇಲಾಖೆ ಮಾಡುವ ನಿರ್ಧಾರವನ್ನೂ ನಾವು ಮಾಡಿದ್ದೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.