ETV Bharat / state

ದಾವಣಗೆರೆಯಲ್ಲಿ ನಾಲ್ಕು ಮದುವೆಯಾಗಿ ವಂಚಿಸಿದ ಆರೋಪ.. ಪತ್ನಿಯರ ಕೈಗೆ ಸಿಕ್ಕಿಬಿದ್ದ ಸಲ್ಮಾನ್ ಖಾನ್​ಗೆ ರಸ್ತೆಯಲ್ಲೇ ಧರ್ಮದೇಟು

author img

By

Published : Aug 1, 2023, 8:52 PM IST

Updated : Aug 2, 2023, 11:40 AM IST

ನಾಲ್ಕು ಮದುವೆಯಾಗಿ ವಂಚನೆ‌ ಮಾಡಿದ ಆರೋಪದ ಹಿನ್ನೆಲೆ ಆಕ್ರೋಶಗೊಂಡು ಪತ್ನಿಯರು, ಸಿಕ್ಕಿಬಿದ್ದ ಪತಿ ಮೇಲೆ ಹಲ್ಲೆ ಮಾಡಿದ್ದಾರೆ.

Husband who cheated on four marriages
ನಾಲ್ಕು ಮದುವೆಯಾಗಿ ವಂಚನೆ‌ ಮಾಡಿದ ಆರೋಪ: ಪತ್ನಿಯರ ಕೈಗೆ ಸಿಕ್ಕಿಬಿದ್ದ ಪತಿರಾಯನಿಗೆ ಧರ್ಮದೇಟು..!

ದಾವಣಗೆರೆ: ನಾಲ್ಕು ಮದುವೆಯಾಗಿ ವಂಚನೆ‌ ಮಾಡಿರುವುದಾಗಿ ಆರೋಪಿಸಿದ ಪತ್ನಿಯರು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯನಿಗೆ ರಸ್ತೆಯಲ್ಲೇ ಧರ್ಮದೇಟು ನೀಡಿರುವ ಘಟನೆ ಬೆಣ್ಣೆನಗರಿಯಲ್ಲಿ ನಡೆದಿದೆ. ತಮಗೆ ನ್ಯಾಯ ಕೊಡಿಸಿ ಎಂದು ಪತಿ ವಿರುದ್ಧ ನಾಲ್ವರು ಪತ್ನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮೊಹಮ್ಮದ್ ವಾಸೀಂ ಅಲಿಯಾಸ್ ಸಲ್ಮಾನ್ ಖಾನ್ ಸಾದೀಕ್ ಎಂಬ ವ್ಯಕ್ತಿ ನಾಲ್ಕು ಮದುವೆ ಆಗಿಯಾಗಿದ್ದಾನೆ. ದಾವಣಗೆರೆಯ ಆಜಾದ್ ನಗರದ ನಿವಾಸಿಯಾಗಿರುವ ಈತ, ಗಂಡ ಸತ್ತವರು ಹಾಗೂ ಗಂಡ ಬಿಟ್ಟಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಹೆಣ್ಣು ಮಕ್ಕಳನ್ನು ನಂಬಿಸಿ ಮದುವೆಯಾಗಿ ಮೋಸ ಮಾಡಿದ್ದಾನೆ. ಇದಲ್ಲದೇ ಮದುವೆಯಾಗಿ ಮಹಿಳೆಯರಿಗೆ ಸೇರಿದ ಬಂಗಾರ, ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಮೋಸ ಹೋದ ಪತ್ನಿಯರು ಆರೋಪ ಮಾಡಿದರು.

''ವಾಸೀಂ ಒಳ್ಳೆಯ ಬಾಳು ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾನೆ. ಇವನೊಬ್ಬ ದೊಡ್ಡ ವಂಚಕನಾಗಿದ್ದು, ಈತನಿಗೆ ಕುಟುಂಬದ ಸದಸ್ಯರು ಬೆಂಬಲ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮೊದಲ ಮದುವೆ, ಮಲೇಬೆನ್ನೂರಿನಲ್ಲಿ ಎರಡನೇ ಮದುವೆ ಹಾಗೂ ದಾವಣಗೆರೆಯ ಆಜಾದ್ ನಗರದಲ್ಲಿ ಮೂರನೇ ಹಾಗೂ ಭಾಷಾ ನಗರದಲ್ಲಿ ನಾಲ್ಕನೇ ವಿವಾಹವಾಗಿದ್ದಾನೆ'' ಎಂದು ದೂರಿದರು.

ಪತಿಗೆ ಧರ್ಮೇಟು ನೀಡಿ ಪೊಲೀಸರಿಗೊಪ್ಪಿಸಿದ ಪತ್ನಿಯರು: ''ದಾವಣಗೆರೆ ನಗರದ ಬೂದಳ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಾಲ್ಕನೇ ಪತ್ನಿಯೊಂದಿಗೆ ಮನೆ ಸಂಸಾರ ಮಾಡ್ತಿದ್ದ. ನಿನ್ನೆ ಆರೋಪಿ ಪತಿ ಆರ್​ಟಿಓ ಕಚೇರಿ ಬಳಿಯ ಬೂದಾಳ್ ರಸ್ತೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ನಾವೇ ಆತನಿಗೆ ಧರ್ಮದೇಟು ಕೊಟ್ಟಿದ್ದೇವೆ. ಈತನ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ. 2009ರಲ್ಲಿ ಮೊದಲನೇ ಹೆಂಡತಿ ಮದುವೆಯಾಗಿ ಕಿರುಕುಳ ನೀಡ್ತಿದ್ದನಂತೆ. ಹದಿನೈದು ತೊಲ ಒಡವೆಗಳನ್ನು ಮಾರಾಟ ಮಾಡಿದ್ದ. ಮನೆಯೊಂದನ್ನು ಸೇಲ್ ಮಾಡಿದ್ದಾನೆ. ನನ್ನನ್ನು ಮಕ್ಕಳನ್ನು ಬೀದಿಪಾಲು ಮಾಡಿದ್ದಾನೆ ಎಂದು ಮೊದಲನೇ ಹೆಂಡತಿ ಆರೋಪಿದರು.

ಹಣ ಕೊಡಿಸುವುದಾಗಿ ವಂಚನೆ ಮಾಡಿದ್ದನಂತೆ ಈ ಭೂಪ: ದಾವಣಗೆರೆ ಆಜಾದ್ ನಗರದ ಮೊಹ್ಮದ್ ವಾಸೀಂ ವಿವಿಧ ಸಂಘಟನೆಗಳನ್ನು ಮಾಡಿಕೊಂಡು ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿ, ಹಣ ಕೊಡಿಸುವುದಾಗಿ ವಂಚನೆ ಮಾಡಿದ್ದಾ‌ನೆ‌ ಎಂದು ಪತ್ನಿಯರು ಹೇಳಿದರು. ಸಂಘದಲ್ಲಿ ಹಣ ಕೊಡಿಸುವುದಾಗಿ 70ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾನೆ. ಕಮಿಷನ್ ಪಡೆದು, ಮನೆ ಲೀಜ್ ಹಾಕುವುದಾಗಿ ನಂಬಿಸಿ ಹಣ ವಂಚನೆ ಮಾಡಿದ್ದಾನೆ. ಲಕ್ಷಾಂತರ ರೂಪಾಯಿ ತಮಗೆ ಕೊಡಬೇಕಿದೆ ಎಂದು ದೂರಿದರು. ಮೋಸದ ಕುರಿತಂತೆ ಈ ಹಿಂದೆಯೇ ಮಹಿಳೆಯರು ನೀಡಿದ ದೂರಿನಂತೆ ಗಾಂಧಿನಗರ ಹಾಗೂ ಅಜಾದ್​​ನಗರ ಪೊಲೀಸ್​​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಈ ಬಗ್ಗೆ ಹಿಂದೆಯೇ ಗಾಂಧಿನಗರ ಹಾಗೂ ಅಜಾದ್​​ನಗರ ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಮತ್ತೊಮ್ಮೆ ಇದೇ ಘಟನೆಗೆ ಪ್ರಕರಣ ದಾಖಲು ಮಾಡಲು ಬರುವುದಿಲ್ಲ ಎಂದು ಆಜಾದ್ ನಗರ ಠಾಣೆಯ ಸಿಪಿಐ ಇಮ್ರಾನ್ ಬೇಗ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇದಲ್ಲದೆ ಜುಲೈ 31ರಂದು ಎಸ್​​ಪಿ ಡಾ. ಅರುಣ್ ಕೆ ಅವರಿಗೆ ವಾಸೀಂ ವಿರುದ್ಧ ಕ್ರಮ ಕೈಗೊಳ್ಳಲು ಪತ್ನಿಯರು ಲಿಖಿತ ದೂರು ನೀಡಿದ್ದಾರೆ.

ಇದನ್ನೂ ಓದಿ: Bengaluru crime: ವಿದ್ಯುತ್ ಬಿಲ್ ಹೆಸರಿನಲ್ಲಿ 2 ಲಕ್ಷ ರೂ. ವಂಚನೆ.. ಪ್ರಕರಣ ದಾಖಲು

Last Updated : Aug 2, 2023, 11:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.