ETV Bharat / state

ತವರಿಗೆ ಹೋಗುತ್ತೇನೆ ಎಂದ ಪತ್ನಿ ಕೊಂದ ಪತಿ: ನಂತರ ಆತ್ಮಹತ್ಯೆಗೆ ಶರಣು

ಬಾರುಕೋಲಿನಿಂದ ಪತ್ನಿಯ ಜೀವ ತೆಗೆದ ತಾನು ಆತ್ಮಹತ್ಯೆ ಮಾಡಿಕೊಂಡ ಕಿರಾತಕ ಪತಿ - ಜಮೀನಿನಲ್ಲಿ ದಂಪತಿ ನಡುವಿನ ಜಗಳ ಸಾವಿನಲ್ಲಿ ಅಂತ್ಯ - ಪೋಷಕರಿಗಾಗಿ ಎದುರು ನೋಡುತ್ತಿರುವ ಮೂರು ಅನಾಥ ಮಕ್ಕಳು

Husband suicide after wife  murder  in Davanagere
ನಂತರ ಆತ್ಮಹತ್ಯೆಗೆ ಶರಣು
author img

By

Published : Feb 13, 2023, 8:25 PM IST

ತವರಿಗೆ ಹೋಗುತ್ತೇನೆ ಎಂದ ಪತ್ನಿ ಕೊಂದ ಪತಿ

ದಾವಣಗೆರೆ: ದಂಪತಿಯಿಬ್ಬರು ದುರಂತ ಅಂತ್ಯಕಂಡಿದ್ದಾರೆ. ಕಳೆದ 12 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಮೂರು ಮಕ್ಕಳೊಂದಿಗೆ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಆದರೆ, ಆಗಾಗ ಚಿಕ್ಕಪುಟ್ಟ ವಿಚಾರಕ್ಕೆ ದಂಪತಿ ನಡುವೆ ಜಗಳವಾಗುತ್ತಿತ್ತು. ಕುಟುಂಬಸ್ಥರು ಕೂಡ ಆ ದಂಪತಿಗೆ ರಾಜಿ ಪಂಚಾಯಿತಿ ಮಾಡಿದ್ದರು. ಇದೀಗ ಪತಿ-ಪತ್ನಿ ಜಗಳ ಸಾವಿನಲ್ಲಿ ಅಂತ್ಯವಾಗಿದೆ.

ಹನುಮಂತಪ್ಪ ಹಾಗೂ ಚೌಡಮ್ಮ ಇಬ್ಬರು ಕೂಡ ಭೂಮಿಯಲ್ಲಿ ಮೈ ಮುರಿದು ದುಡಿಯುತ್ತಿದ್ದರು. ಆದರೆ ಬಡತನದ ನಡುವೆ ಮನೆಯಲ್ಲಿ ಈ ದಂಪತಿಯ ನಡುವೆ ದಿನನಿತ್ಯ ಜಗಳವಾಗುತ್ತಿತ್ತು. ಇದೇ ರೀತಿ ಕಳೆದ ದಿನ ಸಂಜೆ ಚೌಡಮ್ಮ ಹಾಗೂ ಹನಮಂತಪ್ಪ ನಡುವೆ ಜಗಳವಾಗಿದೆ. ಹೀಗೆ ಜಗಳವಾದ ಬಳಿಕ ಜಮೀನಿನಲ್ಲೇ ಬಾರುಕೋಲಿನಿಂದ ಪತ್ನಿ ಚೌಡಮ್ಮನ ಮೇಲೆ ಪತಿ ಹನುಮಂತಪ್ಪ ಹಲ್ಲೆ ಮಾಡಿದ್ದಾನೆ.

ಹಲ್ಲೆ ಮಾಡುತ್ತಿದ್ದ ವೇಳೆ ಬಾರುಕೋಲಿನಿಂದ ಕುತ್ತಿಗೆ ಬಿಗಿದು ಉಸಿರು ಗಟ್ಟಿಸಿ ಚೌಡಮ್ಮನ ಕೊಲೆ ಮಾಡಿದ್ದಾನೆ. ಅವಳ ಸತ್ತಳು ಎಂದು ಗೊತ್ತಾದ ಬಳಿಕ ಹೇದರಿ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿ ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.

ಮಕ್ಕಳು ಅನಾಥವಾಗಿವೆ: ಘಟನೆ ಬಗ್ಗೆ ಮೃತ ಹನುಮಂತಪ್ಪನ ಸಹೋದರ ಶಿವಪ್ಪ ಮಾತನಾಡಿ,"ಸಾಕಷ್ಟು ವರ್ಷಗಳಿಂದ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು. ನಾವು ಸಾಕಷ್ಟು ಬಾರಿ ರಾಜಿ ಪಂಚಾಯಿತಿ ಮಾಡಿದ್ದೆವು, ನನ್ನ ತಮ್ಮ ಸಾಯಬಾರದಿತ್ತು. ಚಿಕ್ಕ ಮಕ್ಕಳಿದ್ದು, ಅವು ಅನಾಥವಾಗಿವೆ. ಹನುಮಂತಪ್ಪ ತನ್ನ ಮಡದಿಯನ್ನು ಮನೆಗೆ ಕರೆದಿದ್ದಾನೆ, ಮನೆಗೆ ಬಾರದ ಹಿನ್ನಲೆಯಲ್ಲಿ ಜಮೀನ ಬಳಿ ಬಾರುಕೋಲಿನಿಂದ ಹಲ್ಲೆ‌ ಮಾಡಿ ಕೊಲೆ‌ ಮಾಡಿದ್ದಾನೆ" ಎಂದು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಮುಂದಾದ ಪೊಲೀಸರು: ಹನಮಂತಪ್ಪ ಬೇರೆಯವರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನು ಪತ್ನಿ ಬಲವಾಗಿ ವಿರೋಧಿಸಿದ್ದಳು. ಪತ್ನಿ ವಿರೋಧಿಸಿದ್ದಕ್ಕೆ ಕೊಪಗೊಂಡು ಹನಮಂತಪ್ಪ ಅವಳ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ಪತ್ನಿಯ ಶವ ತೆಲಗಿ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಹಾಗೂ ಪತ್ನಿ ಶವವನ್ನ ಹರಪನಹಳ್ಳಿ ತಾಲೂಕಿನ ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳುಸಿದ್ದಾರೆ.

ಈ ವೇಳೆ ಮೃತ‌ ಚೌಡಮ್ಮಳ ಸಹೋದರ ಪರಶುರಾಮ್ ಪ್ರತಿಕ್ರಿಯಿಸಿ, "ನನ್ನ ಸಹೋದರಿ ಚೌಡಮ್ಮಳಿಗೆ ಮನೆಯಲ್ಲಿ ಕಿರಿಕಿರಿ ಹೆಚ್ಚಿತ್ತು, ಕಳೆದ ದಿನ ಹನುಮಂತಪ್ಪ ಮದ್ಯಪಾನ ಮಾಡಿ ಜಗಳ‌ ಮಾಡಿದ್ದಾನೆ. ಬಳಿಕ ಬಾರು ಕೋಲಿನಿಂದ ಹಲ್ಲೆ‌ ಮಾಡಿ ಜೀವ ತೆಗೆದಿದ್ದಾನೆ" ಎಂದು ಆರೋಪಿಸಿದ್ದಾನೆ.

ಪತ್ನಿ ಕಡೆಯ ಆರೋಪ ಸಂಬಂಧ ದೂರು ದಾಖಲು: ಈ ಬಗ್ಗೆ ವಿಜಯನಗರ ಜಿಲ್ಲೆಯ ಎಸ್​ಪಿ ಶ್ರೀಹರಿಬಾಬು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, "ಮೃತ‌ ಹನುಮಂತಪ್ಪ ತನ್ನ ಪತ್ನಿ ಚೌಡಮ್ಮಳನ್ನು ಜಮೀನಿನಲ್ಲಿ ಉಸಿಗಟ್ಟಿಸಿ ಸಾಯಿಸಿದ್ದು, ಬಳಿಕ ತಾನು ಕೂಡ ಪ್ಲಾಸ್ಟಿಕ್ ಹಗ್ಗ ಬಳಕೆ‌ ಮಾಡಿ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರ ಸಂಬಂಧ ಹಗಲವಾಗಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ" ಎಂದು ಮಾಹಿತಿ ನೀಡಿದರು.

ಒಟ್ಟಾರೆ ಈ ಬಗ್ಗೆ ಹಲವಾಗಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹರಪನಹಳ್ಳಿ ಡಿವೈಎಸ್ಪಿ ರಾಮಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿಕಾಟಕ್ಕೆ ಬೇಸತ್ತು ತವರಿಗೆ ಹೋಗಲು ಚೌಡಮ್ಮ ನಿರ್ಧರಿಸಿದ್ದಳು. ಈ ವಿಚಾರ ಪತಿಯ ಮುಂದೆ ಹೇಳಿದಾಗ ಜಗಳ ಶುರುವಾಗಿದೆ. ಇಬ್ಬರ ನಡುವಿನ ಜಗಳಕ್ಕೆ ಮೂರು ಜನ ಮಕ್ಕಳು ಅನಾಥವಾಗಿವೆ.

ಇದನ್ನೂ ಓದಿ: ಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರು ಬಲಿ: ಆಘಾತದಿಂದ ವೃದ್ಧೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.