ETV Bharat / state

ದಾವಣಗೆರೆ: ಕುಡಿದ ಅಮಲಿನಲ್ಲಿ ಪತ್ನಿಯ ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಪತಿ - ಪತಿಯಿಂದ ಪತ್ನಿಯ ಹತ್ಯೆ

Husband kills wife: ಪತಿಯೋರ್ವ ತನ್ನ ಪತ್ನಿಯನ್ನೇ ಹತ್ಯೆ ಮಾಡಿ ಬಳಿಕ ಪೊಲೀಸ್​ ಠಾಣೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

husband-killed-wife-in-davanagere
ದಾವಣಗೆರೆ : ಪತ್ನಿಯ ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಪತಿ
author img

By

Published : Aug 19, 2023, 9:10 PM IST

ದಾವಣಗೆರೆ: ಕುಡಿದ ಅಮಲಿನಲ್ಲಿ ಪತಿಯೋರ್ವ ತನ್ನ ಪತ್ನಿಯನ್ನು ಹತ್ಯೆ ಮಾಡಿ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಲೋಚನಾ(45) ಕೊಲೆಯಾದ ಮಹಿಳೆ. ನಾಗರಾಜಪ್ಪ ಹತ್ಯೆಗೈದ ಆರೋಪಿ.

ಘಟನೆಯ ಹಿನ್ನಲೆ: ಆರೋಪಿ ನಾಗರಾಜಪ್ಪ ಪ್ರತಿ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ತನ್ನ ಪತ್ನಿ ಸುಲೋಚನಾ ಜೊತೆ ಜಗಳವಾಡುತ್ತಿದ್ದನು. ಕಳೆದ ಶುಕ್ರವಾರವೂ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸುಲೋಚನಾಗೆ ಮನಬಂದಂತೆ ಥಳಿಸಿದ್ದು, ಸುಲೋಚನಾ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಬಳಿಕ ದಿಕ್ಕು ತೋಚದೆ ಸಂತೇಬೆನ್ನೂರು ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಪತ್ನಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಸಂತೇಬೆನ್ನೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುಲೋಚನಾಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ನಿಯನ್ನು ಹತ್ಯೆಗೈದು ಠಾಣೆಗೆ ಶರಣಾಗಿದ್ದ ಪತಿ: ಇತ್ತೀಚೆಗೆ ಪತಿಯೋರ್ವ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದು ಬೆಂಗಳೂರು ನಗರದ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ಶರಣಾಗಿದ್ದ ಘಟನೆ ನಡೆದಿತ್ತು. ಇಲ್ಲಿನ ಪೊಲೀಸ್​ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ ಘಟನೆ ನಡೆದಿತ್ತು. ಸರಿತಾ(35) ಮೃತ ದುರ್ದೈವಿ. ತಾರಾನಾಥ್​ ಕೊಲೆಗೈದ ಆರೋಪಿ. ಪತ್ನಿ ಸರಿತಾಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಪತಿ ಹತ್ಯೆಗೈದಿದ್ದ.

ಮೂಲತಃ ಮಂಗಳೂರಿನವರಾದ ದಂಪತಿ ಬೆಂಗಳೂರಿನಲ್ಲಿ ಪಾನೀಪುರಿ ಅಂಗಡಿ ನಡೆಸುತ್ತಿದ್ದರು. ಆಗಸ್ಟ್​ 6ರಂದು ಆರೋಪಿ ತಾರಾನಾಥ್​ ಪತ್ನಿಯನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಆದರೆ ಧೈರ್ಯ ಸಾಲದೇ ಪೊಲೀಸರಿಗೆ ಶರಣಾಗಿದ್ದ.ಮೃತ ಸರಿತಾ ವಿರುದ್ಧ ಈ ಹಿಂದೆ ಮಂಗಳೂರಿನ ಮೂಲ್ಕಿ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆ "ಪರಿಚಿತರು ಆಕೆಯನ್ನು ಕಳ್ಳಿ‌ ಕಳ್ಳಿ ಎನ್ನುತ್ತಿದ್ದರು. ಇದನ್ನು ಸಹಿಸಲಾರದೇ ಆರೋಪಿ ತಾರಾನಾಥ್​​ ಸರಿತಾಳನ್ನು ಹತ್ಯೆಗೈದಿರುವುದಾಗಿ ಆರೋಪಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿದ್ದ ವೈಟ್ ಫೀಲ್ಡ್ ವಿಭಾಗ ಡಿಸಿಪಿ ಎಸ್.ಗಿರೀಶ್, ಮಂಗಳೂರು ಮೂಲದ ತಾರಾನಾಥ್​ ಎಂಬವರು ಇಲ್ಲಿನ ವೈಟ್ ಫೀಲ್ಡ್​ ಠಾಣಾ ವ್ಯಾಪ್ತಿಯಲ್ಲಿ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದರು. ಕಳೆದ 11 ವರ್ಷಗಳ ಹಿಂದೆ ತಾರಾನಾಥ್​ ಅವರಿಗೆ ಮದುವೆಯಾಗಿತ್ತು. ಕಳೆದ ಆಗಸ್ಟ್​ 6 ಭಾನುವಾರ ತಾರಾನಾಥ್​ ಏಕಾಏಕಿ ತನ್ನ ಹೆಂಡತಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆತನೇ ಬಂದು ವೈಟ್​ಫೀಲ್ಡ್​ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ ಎಂದು ತಿಳಿಸಿದ್ದರು.

ಇದನ್ನೂ ಓದಿ : ಚೀನಾದವನೆಂದು ನಿಂದಿಸಿ ಸಿಕ್ಕಿಂ ಮೂಲದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ: ಪೊಲೀಸರಿಂದ ತನಿಖೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.