ದಾವಣಗೆರೆ : ವಯಸ್ಸಾದ ಮತ್ತು ರೋಗಗಳಿಗೆ ತುತ್ತಾಗಿರುವ ಗೋವುಗಳಿಗೆ ದಾವಣಗೆರೆಯ ಆವರಗೆರೆ ಬಳಿಯ ಹೈಟೆಕ್ ಮಹಾವೀರ ಗೋಶಾಲೆ ಆಸರೆಯಾಗಿದೆ. ಈ ಗೋಶಾಲೆ, ಕಸಾಯಿ ಖಾನೆಗಳಿಗೆ ಹೋಗ್ಬೇಕಾಗಿದ್ದ ಧನಗಳಿಗೆ ಆಶ್ರಯ ತಾಣವಾಗಿದೆ.
ಈ ಗೋಶಾಲೆಯಲ್ಲಿ 600ಕ್ಕೂ ಹೆಚ್ಚು ಗೋವುಗಳನ್ನು ಪೋಷಣೆ ಮಾಡಲಾಗುತ್ತಿದೆ. ಗೋವುಗಳ ಪೋಷಣೆ ಮಾಡಲು ಒಟ್ಟು 24 ಜನ ಕೆಲಸಗಾರರಿದ್ದು, ಸರಿಯಾದ ಸಮಯಕ್ಕೆ ಹಸಿರು ಹುಲ್ಲು ಹಾಗೂ ಒಣ ಮೇವು ಹಾಕಲಾಗುತ್ತದೆ. ಸ್ವಚ್ಛ ಸುಂದರವಾಗಿರುವ ಈ ಮಹಾವೀರ ಗೋಶಾಲೆಯನ್ನು ಜೈನ್ ಸಮುದಾಯದವರು ನಡೆಸುತ್ತಿದ್ದಾರೆ.
ಗೋವುಗಳಿಗೆ ಸೊಳ್ಳೆ ಕಚ್ಚಬಾರದೆಂದು ಪ್ರತಿ ಕೋಣೆಗಳಲ್ಲಿ ಎರಡು ಫ್ಯಾನ್ಗಳನ್ನು ಅಳವಡಿಸಲಾಗಿದೆ. ಸಿಸಿ ಕ್ಯಾಮೆರಾ, ಹೈಟೆಕ್ ನೀರು ಕುಡಿಯುವ ಪಾಯಿಂಟ್, ನೀರು ಕುಡಿಯುವ ತೊಟ್ಟಿಗಳು ಹಾಗೂ ಗೋಶಾಲೆಗೆ ಆಗಮಿಸುವ ಜನ್ರಿಗೆ ಕೂರಲು ಸುಸಜ್ಜಿತವಾದ ಆಸನಗಳು ಸೇರಿದಂತೆ ಮಕ್ಕಳಿಗೆ ಆಟವಾಡಲು ಉದ್ಯಾನವನ ಕೂಡ ನಿರ್ಮಾಣ ಮಾಡಲಾಗಿದೆ. ಸಾಕಷ್ಟು ಜನರು ಇಲ್ಲಿಗೆ ಬಂದು ಕಾಲ ಕಳೆದು ಹೋಗುತ್ತಾರೆ.
ಇದನ್ನೂ ಓದಿ: ಬಲೆಗೆ ಬಿತ್ತು 'ವ್ಯಕ್ತಿಯ ಮುಖ' ಹೋಲಿಕೆಯ ಮೀನು.. ಇದು ಮನುಷ್ಯನನ್ನೇ ಕೊಲ್ಲುವಷ್ಟು ವಿಷಕಾರಿ!
ಪ್ರತಿ ವಾರದಲ್ಲಿ ಎರಡು ಬಾರಿ ಇಡೀ ಗೋಶಾಲೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಸ್ವಚ್ಛಗೊಳಿಸಲು ಯಂತ್ರವನ್ನು ಬಳಕೆ ಮಾಡಲಾಗುತ್ತದೆ. ಪ್ರತಿಯೊಂದು ದನದ ಕೊಟ್ಟಿಗೆಯಲ್ಲಿ ಗೋವು ತನ್ನ ಬಾಯಿಯಿಂದ ಬಟನ್ ಪ್ರೆಸ್ ಮಾಡಿದ್ರೆ, ಕುಡಿಯುವ ನೀರು ಕುಣಿಯಲ್ಲಿ ಬಂದು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಗೋವುಗಳಿಗೆ ಕ್ಯಾರೆಟ್, ಸೌತೆಕಾಯಿಯಂತಹ ತರಕಾರಿಗಳನ್ನು ನೀಡುವುದು ವಿಶೇಷವಾಗಿದೆ.