ETV Bharat / state

ಹೆಬ್ಬಾಳು ಗ್ರಾಮದಲ್ಲಿ ಮತದಾರರ ಪಟ್ಟಿಯಲ್ಲಿ ಗೊಂದಲ: ಜಿಲ್ಲಾಧಿಕಾರಿ ಸಭೆ - Davanagere latest news

ಹೆಬ್ಬಾಳು ಗ್ರಾಮದಲ್ಲಿ ಒಂದು ಮತ್ತು ಎರಡನೇ ವಾರ್ಡಿನ ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟಾಗಿದ್ದು, ಮತದಾನ ಸ್ಥಗಿತಗೊಳಿಸಲಾಗಿದೆ.

Mahantesh beelagi
ಮಹಾಂತೇಶ್ ಬೀಳಗಿ
author img

By

Published : Dec 22, 2020, 4:23 PM IST

ದಾವಣಗೆರೆ: ಮತದಾರರ ಪಟ್ಟಿ ಅದಲು ಬದಲು ವಿಚಾರವಾಗಿ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಸಾಕಷ್ಟು ಗೊಂದಲ ಮನೆ ಮಾಡಿದೆ. ಈಗಾಗಲೇ ಮತದಾನ ಸ್ಥತಗಿತಗೊಳಿಸಲಾಗಿದ್ದು, ಒಂದನೇ ವಾರ್ಡಿನ ಮತದಾರರ ಪಟ್ಟಿಯಲ್ಲಿ ಹಾಗೂ ಎರಡನೇ ವಾರ್ಡಿನ ಮತದಾರರ ಪಟ್ಟಿಯಲ್ಲಿ ಗೊಂದಲ ಕಂಡುಬಂದ ಕಾರಣ ಜಿಲ್ಲಾಧಿಕಾರಿ‌ ಮಹಾಂತೇಶ್ ಬೀಳಗಿ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದರು.

ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ

ಸಭೆ ನಡೆಸಿದ ಬಳಿಕ ಮತದಾರ ಪಟ್ಟಿ ಅದಲು ಬದಲಾಗಿರುವುದನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಒಪ್ಪಿಕೊಂಡರು. ಈ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಗಿರೋ ಎಡವಟ್ಟಿನ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರುತ್ತೇನೆ. ಈ ಬಗ್ಗೆ ಚುನಾವಣಾ ಅಯೋಗದಿಂದ ಎರಡು ಗಂಟೆಯಲ್ಲಿ ಮಾಹಿತಿ ಬರುತ್ತೆ. ಬಳಿಕ ಇದರ ಬಗ್ಗೆ ಸ್ಪಷ್ಟಪಡಿಸಲಾಗುವುದೆಂದು ತಿಳಿಸಿದರು.

ಬಳಿಕ ಚುನಾವಣಾ ಆಯೋಗ ಏನು ನಿರ್ದೇಶನ‌ ನೀಡುತ್ತದೆಯೋ ಆ ರೀತಿ ಚುನಾವಣೆ ನಡೆಸೋದಾ ಬಿಡೋದಾ ಎಂದು ಹೇಳುತ್ತೇವೆ ಎಂದರು. ಇನ್ನು ಈ ಗ್ರಾಮದ ಗ್ರಾಮಸ್ಥರು ಮತದಾರರ ಪಟ್ಟಿ ಗೊಂದಲ‌ ನಿವಾರಣೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡ್ತೀವಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಓದಿ...ಮತಗಟ್ಟೆ ಎದುರೇ ಎರಡು ಗುಂಪುಗಳ ಮಧ್ಯೆ ಗಲಾಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.