ETV Bharat / state

ದಾವಣಗೆರೆಯಲ್ಲಿ ವರುಣಾರ್ಭಟ: ರಸ್ತೆಗಳು ಜಲಾವೃತ - ಜನಜೀವನ ಅಸ್ತವ್ಯಸ್ತ! - ದಾವಣಗೆರೆಯಲ್ಲಿ ಸಂಚಾರ ಸ್ಥಗಿತ

ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತವಾಗಿ ಸಂಚಾರಕ್ಕೆ ಅಡ್ಡಿಯಾಗಿದೆ.

heavy rain leads to problem in davanagere
ದಾವಣಗೆರೆಯಲ್ಲಿ ವರುಣಾರ್ಭಟ
author img

By

Published : Jul 12, 2022, 2:46 PM IST

ದಾವಣಗೆರೆ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ತುಂಗಭದ್ರಾ ನದಿ ತುಂಬಿದ ಪರಿಣಾಮ ಪ್ರವಾಹ ಸೃಷ್ಟಿಯಾಗಿದೆ. ಹರಿಹರ ತಾಲೂಕಿನ ಫತೇಪುರ್​ ಹಾಗೂ ಉಕ್ಕಡಗಾತ್ರಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಜಲಾವೃತವಾಗಿ ಗ್ರಾಮಸ್ಥರು ಸಂಚಾರಕ್ಕೆ ಪರದಾಡುವಂತಾಗಿದೆ.

ಇಲ್ಲಿ ಒಂದು ದೊಡ್ಡ ಮಟ್ಟದ ಸೇತುವೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಜನರು ಗಮನಕ್ಕೆ ತಂದಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ. ಪ್ರತಿ ಮಳೆಗಾಲದಲ್ಲಿ ತುಂಗಾಭದ್ರಾ ನದಿ ಉಕ್ಕಿ ಹರಿಯುದರಿಂದ ಉಕ್ಕಡ ಗಾತ್ರಿ ಗ್ರಾಮದಿಂದ ಫತೇಪುರ್ ಗ್ರಾಮ ಹಾಗೂ ಹರಿಹರ - ದಾವಣಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗುತ್ತದೆ.

ದಾವಣಗೆರೆಯಲ್ಲಿ ವರುಣಾರ್ಭಟ

ನದಿ ತುಂಬಿ ಫತೇಪುರ್ ಹಾಗೂ ಉಕ್ಕಡಗಾತ್ರಿ ಗ್ರಾಮದ ರೈತರು ಬೆಳೆಯುವ ತರಕಾರಿ, ಮೆಕ್ಕೆಜೋಳ, ಇನ್ನಿತರ ಬೆಳೆಗಳು ನೀರಿನಲ್ಲಿ ಮುಳುಗುವುದು ಸಾಮಾನ್ಯವಾಗಿ ಬಿಟ್ಟಿದೆ. ರೈತ ಮಂಜುನಾಥ್ ದೊಡ್ಡಮನಿ ಅವರು ಪ್ರತಿಕ್ರಿಯಿಸಿ, ನಾವು ಬೆಳೆದ ತರಕಾರಿ ಕೊಚ್ಚಿ ಹೋಗಿದೆ. ಜಮೀನಿನಲ್ಲಿ ಹಾಕಿಸಿದ್ದ ಬೋರ್ ವೆಲ್ ಹಾಳಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಳಲು ತೋಡಿಕೊಂಡರು.

ಬರಪೀಡಿತ ಗ್ರಾಮಗಳಾಗಿದ್ದರಿಂದ ಕೃಷಿಗೆ ಮಳೆಯನ್ನೇ ನಂಬಿಕೊಂಡಿದ್ದಾರೆ. ಬೇಸಿಗೆ ಕಾಲದಲ್ಲಿ ಸಹಾಯಕ್ಕೆ ಬರುವ ಬೋರ್ ವೆಲ್​ಗಳು ಇಲ್ಲದಂತಾಗಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ. ಇನ್ನು ಸೇತುವೆ ನಿರ್ಮಾಣಕ್ಕೆ ಹರಿಹರ ತಹಶೀಲ್ದಾರ್ ಅಶ್ವಥ್ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅವರು ರಸ್ತೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಈಗಾಗಲೇ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಸಮಸ್ಯೆ ಪರಿಹಾರಕ್ಕೆ ಪರಿಶೀಲನೆ ನಡೆಸಿ ಪಿಆರ್​ಡಿ ಅವರ ಗಮನಕ್ಕೆ ತರುತ್ತೇನೆ ಬಳಿಕ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವ ಮೂಲಕ ಸಮಸ್ತೆ ಬಗೆಹರಿಸುತ್ತೇನೆ ಎಂದು ಜನರಿಗೆ ಆಶ್ವಾಸನೆ ನೀಡಿದ್ರು.

ಇದನ್ನೂ ಓದಿ: ಆಲಮಟ್ಟಿಯ 18 ಗೇಟ್‌ಗಳ ಮೂಲಕ ನೀರು ಬಿಡುಗಡೆ; ಹೆಚ್ಚಿದ ಪ್ರವಾಹ ಭೀತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.