ETV Bharat / state

ಭಾರಿ ಮಳೆಗೆ ಜಲಾವೃತವಾದ ಜಮೀನು, ಮುಳುಗಡೆಯಾದ ಜಾಗದಲ್ಲಿ ಮೀನು ಹಿಡಿಯುತ್ತಿರುವ ಜನರು - ಭಾರಿ ಮಳೆಗೆ ಜಲಾವೃತವಾದ ಜಮೀನು

ದಾವಣಗೆರೆಯಲ್ಲಿ ಭಾರಿ ಮಳೆಯಿಂದಾಗಿ ಇಲ್ಲಿನ ದೇವರಬೆಳಕೆರೆ ಪಿಕಪ್ ಡ್ಯಾಂನ ಹಿನ್ನೀರಿನ ಪ್ರದೇಶಕ್ಕೆ ಅಂಟಿಕೊಂಡಿರುವ ರೈತರ ಜಮೀನು ಜಲಾವೃತವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

heavy-rain-in-davanagere
ಭಾರೀ ಮಳೆಗೆ ಜಲಾವೃತವಾದ ಜಮೀನು, ಮುಳುಗಡೆಯಾದ ಜಮೀನಿನಲ್ಲಿ ಮೀನು ಹಿಡಿಯುತ್ತಿರುವ ಜನರು
author img

By

Published : Sep 6, 2022, 4:26 PM IST

ದಾವಣಗೆರೆ : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಮಳೆಯಿಂದಾಗಿ ರೈತರ ಭತ್ತದ ಗದ್ದೆಗಳು ಜಲಾವೃತವಾಗಿದೆ. ಇನ್ನು ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಗದ್ದೆಯಲ್ಲಿ ತೆಪ್ಪದ ಮೂಲಕ ಮೀನು ಹಿಡಿಯಲು ಸ್ಥಳೀಯರು ಮುಂದಾಗಿದ್ದಾರೆ.

ಇಲ್ಲಿನ ಮುದಹದಡಿಯ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದಿದ್ದ ಬೆಳೆ ನೀರು ಪಾಲಾಗಿದೆ. ಗ್ರಾಮದ ಗದ್ದೆಗಳು ಹತ್ತಿರದ ದೇವರಬೆಳಕೆರೆ ಪಿಕಪ್ ಡ್ಯಾಂ ನ ಹಿನ್ನೀರಿಗೆ ಅಂಟಿಕೊಂಡಿರುವುದರಿಂದ, ಡ್ಯಾಂನ ಹಿನ್ನೀರು ಗದ್ದೆಗಳಿಗೆ ನುಗ್ಗಿ ಬೆಳೆಗಳು ನಾಶವಾಗಿದೆ. ಒಟ್ಟು 60 ಎಕರೆ ಭತ್ತದ ಗದ್ದೆ ಮತ್ತು ಅಡಕೆ ತೋಟಗಳಿಗೆ ಡ್ಯಾಂನ ಹಿನ್ನೀರು ನುಗ್ಗಿದ್ದು, ಫಸಲು ನೆಲಕಚ್ಚಿವೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ರೈತರು ಹೇಳಿದ್ದಾರೆ.

ಇನ್ನು ಭದ್ರಾ ಡ್ಯಾಂ ಹಾಗೂ ಸೂಳೆಕೆರೆ ಕೋಡಿ ಬಿದ್ದ ಬೆನ್ನಲ್ಲೇ ಆ ಭಾಗದ ನೀರು ಬೆಳಕೆರೆ ಡ್ಯಾಂಗೆ ಹೆಚ್ಚು ಪ್ರಮಾಣದ ನೀರು ಹರಿದು ಬರುತ್ತಿರುವುದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ. ಪ್ರತೀ ವರ್ಷವೂ ಇಲ್ಲಿನ ಗದ್ದೆ ಮತ್ತು ತೋಟಗಳಿಗೆ ನೀರು ನುಗ್ಗುವುದರಿಂದ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಎಂದು ರೈತ ಹರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರೀ ಮಳೆಗೆ ಜಲಾವೃತವಾದ ಜಮೀನು, ಮುಳುಗಡೆಯಾದ ಜಮೀನಿನಲ್ಲಿ ಮೀನು ಹಿಡಿಯುತ್ತಿರುವ ಜನರು

ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಇಲ್ಲಿನ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ರೈತರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ದಾವಣಗೆರೆಯಲ್ಲಿ ನಿರಂತರ ಮಳೆಗೆ ಮನೆ ಕುಸಿತ.. ಆಸ್ಪತ್ರೆ ಸೇರಿದ ದಂಪತಿ, ಶಿವಮೊಗ್ಗದಲ್ಲಿ ವೃದ್ಧೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.