ETV Bharat / state

ಸಿಎಂ ಯಡಿಯೂರಪ್ಪ ಪರ್ಸಂಟೇಜ್ ಲೆಕ್ಕದಲ್ಲಿ ಕೆಲಸ ಮಾಡ್ತಿದ್ದಾರೆ: ಶಾಸಕ ರಾಮಪ್ಪ - ಸಿಎಂ ವಿರುದ್ಧ ಶಾಸಕ ರಾಮಪ್ಪ ವಾಗ್ದಾಳಿ

ಕಾಂಗ್ರೆಸ್​ ಶಾಸಕ ಎಸ್.ರಾಮಪ್ಪ ಅವರು ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಎಸ್​ವೈ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸರುವ ಅವರು, ಸಿಎಂ ಮತ್ತು ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.

Harihar MLA Ramppa statement
ಹರಿಹರ ಶಾಸಕ ಎಸ್.ರಾಮಪ್ಪ
author img

By

Published : Jul 6, 2021, 2:22 PM IST

ದಾವಣಗೆರೆ: ಹರಿಹರ ಕ್ಷೇತ್ರಕ್ಕೆ ನೀಡಿದ್ದ ಅನುದಾನಕ್ಕೆ ಸರ್ಕಾರ ಕಡಿವಾಣ ಹಾಕಿದೆ, ಪಕ್ಕದ ಕ್ಷೇತ್ರದ ಶಾಸಕ ಎಂ.ಪಿ ರೇಣುಕಚಾರ್ಯ ಅವರಿಗೆ ಕೋಟಿ ಕೋಟಿ ಅನುದಾನ ನೀಡಿದೆ. ಯಡಿಯೂರಪ್ಪನವರು ಯಾವುದಕ್ಕೂ ಪ್ರಯೋಜನ ಇಲ್ಲದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹರಿಹರ ಶಾಸಕ ಎಸ್.ರಾಮಪ್ಪ ವಾಗ್ದಾಳಿ ನಡೆಸಿದ್ದಾರೆ.

ಹರಿಹರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಪರ್ಸಂಟೇಜ್ ಲೆಕ್ಕದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಮಗನನ್ನು ಮುಂದೆ ಬಿಟ್ಕೊಂಡು ದಿನಕ್ಕೆ ಕೋಟಿಗಟ್ಟಲೆ ಹಣ ಹೊಡೆಯುತ್ತಿದ್ದಾರೆ ಎಂದು ಅವರದ್ದೇ ಶಾಸಕ ಯತ್ನಾಳ್ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಬಂದಿದ್ದರೂ ಏನೂ ಮಾತನಾಡದೆ ಹಣ ಪಡೆದು ತೆರಳಿದ್ರು ಎಂದು ರಾಮಪ್ಪ ದೂರಿದರು.

ಹರಿಹರ ಶಾಸಕ ಎಸ್.ರಾಮಪ್ಪ ಗಂಭೀರ ಆರೋಪ

15ರಷ್ಟು ಪರ್ಸಂಟೇಜ್ ನೀಡಿದ್ರೆ ಮಾತ್ರ ಕ್ಷೇತ್ರಕ್ಕೆ ಅನುದಾನ ಬರುತ್ತದೆ, ಕೆಲಸ ಆಗ್ತದೆ ಹರಿಹರ ಶಾಸಕ ಆರೋಪಿಸಿದರು.

ನಮ್ಮ ಪಕ್ಷದಲ್ಲಿ ಎಲ್ಲವೂ ಸರಿ ಇದೆ : ನಮ್ಮಲ್ಲಿ ಎಲ್ಲಾ ನಾಯಕರು ಚೆನ್ನಾಗಿದ್ದಾರೆ, ಅದೃಷ್ಟ ಯಾರಿಗೆ ಬರುತ್ತೋ ಅವರು ಮುಖ್ಯಮಂತ್ರಿ ಆಗ್ತಾರೆ. ನಮ್ಮ ಮಗಳ ಮದುವೆಗೆ ಆಗಮಿಸಿದ್ದಾಗ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದೂ ಕೂಗಿದ್ದರು. ಅದು ಅವರ ಅಭಿಮಾನಿಗಳು ಕೂಗಿರಬಹುದು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕೂಗದಂತೆ ನಾನು ಕೂಡ ತಡೆದಿದ್ದೇನೆ ಎಂದು ಹೇಳಿದರು.

ಮಾಜಿ ಶಾಸಕರ ವಿರುದ್ಧ ರಾಮಪ್ಪ ಗರಂ : ಸರ್ಕಾರ ಇದೆ ಎಂದು ಅಧಿಕಾರಿಗಳನ್ನು ಉಪಯೋಗಿಸಿಕೊಂಡು ಆಗುವಂತ ಕೆಲಸಕ್ಕೆ ಬಿ.ಪಿ ಹರೀಶ್ ಅಡ್ಡಿ ಪಡಿಸುತ್ತಿದ್ದಾರೆ. ಟಿಕೆಟ್ ಸಿಗಲ್ಲ ಎಂದು ಹರೀಶ್ ಹತಾಶರಾಗಿ ಮಾತನಾಡಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅನುದಾನ, ಅಭಿವೃದ್ಧಿ ಕಾರ್ಯಕ್ಕೂ ಕೊಕ್ಕೆ ಹಾಕಿಸಿದ್ದಾರೆ. ಅಲ್ಲದೆ, ಮಾಜಿ ಶಾಸಕರು ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ. ನಾವು ವರ್ಗಾವಣೆಗೆ ಮುಂದಾದ್ರೆ, ನಮ್ಮ ಕಾಂಗ್ರೆಸ್ ಲೆಟರ್ ನೋಡಿ ಮಾಜಿ ಶಾಸಕ ಬಿ.ಪಿ ಹರೀಶ್​​ರವರ ಲೆಟರ್ ತನ್ನಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಓದಿ : ಸಿಎಂ ವಿರುದ್ಧ ಹೇಳಿಕೆ: ಚಾಮರಾಜನಗರದಲ್ಲಿ ಶಾಸಕ ಯತ್ನಾಳ್​ಗೆ ಬಿಎಸ್​ವೈ ಅಭಿಮಾನಿಗಳಿಂದ ಘೇರಾವ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.