ETV Bharat / state

ಲೋಕಾ ದಾಳಿ.. ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದ ಹರಿಹರ ಬೆಸ್ಕಾಂ ಎಂಜನಿಯರ್ - ಚನ್ನಗಿರಿ ಪೋಲಿಸ್ ಠಾಣೆ

ಪ್ರತ್ಯೇಕ ಪ್ರಕರಣ-ಲೋಕಾಯುಕ್ತರ ದಾಳಿ, ಗುತ್ತಿಗೆದಾರನಿಗೆ ಕಾಮಗಾರಿ ಮಂಜೂರಾತಿ ನೀಡುವುದಕ್ಕೆ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದ ಹರಿಹರ ಬೆಸ್ಕಾಂ ಎಂಜಿನಿಯರ್. ಮಹಿಳೆ ಫೋಟೋ ತೆಗೆದು ಬ್ಲಾಕ್​ಮೇಲ್ ಮಾಡುತ್ತಿದ್ದ ಆರೋಪಿ ವಿರುದ್ಧ ದೂರು ದಾಖಲು

Harihar Bescom Engineer caught by Lokayukta
ಲೋಕಾ ದಾಳಿ, ಬಲೆಗೆ ಬಿದ್ದ ಹರಿಹರ ಬೆಸ್ಕಾಂ ಎಂಜನಿಯರ್ ಬಲಿ
author img

By

Published : Feb 23, 2023, 1:33 PM IST

ದಾವಣಗೆರೆ: ಗುತ್ತಿಗೆದಾರನಿಗೆ ಕಾಮಗಾರಿ ಮಂಜೂರಾತಿ ನೀಡುವುದಕ್ಕೆ ಲಂಚ ಪಡೆಯುತ್ತಿದ್ದ ವೇಳೆ ಹರಿಹರ ಬೆಸ್ಕಾಂ ಎಂಜಿನಿಯರ್ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕರಿಬಸಯ್ಯ ಲೋಕಾಯುಕ್ತರ ಬಲೆಗೆ ಬಿದ್ದವರು.

ಹರಿಹರದ ತುಂಗಭದ್ರಾ ನದಿ ರಸ್ತೆಯ ಬೆಸ್ಕಾಂ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಬಲೆಗೆ ಬೀಳಿಸಿದ್ದಾರೆ. ಒಂದು ಫೈಲ್​ಗೆ ಐದು ಸಾವಿರ ಅಂತಾ 15 ಸಾವಿರ ರೂ ಕರಿಬಸಯ್ಯನವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ ಒಂಬತ್ತು ಸಾವಿರ ರೂಪಾಯಿ ಪಡೆದಿದ್ದ ಇಂಜಿನಿಯರ್ ಕರಿಬಸಯ್ಯನವರು, ಇನ್ನುಳಿದ ಆರು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತ ದಿಢೀರ್ ದಾಳಿ: ಕೆಇಬಿ ಗುತ್ತಿಗೆದಾರ ಬೇವಿನಹಳ್ಳಿ ಮಹೇಶ್ವರಪ್ಪ ಅವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿ, ಭ್ರಷ್ಟ ಅಧಿಕಾರಿಯವರನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ ಆಂಜನೇಯ ತಂಡವೂ ದಾಳಿ ಮಾಡಿತ್ತು. ಎಂಜನಿಯರ್ ಕರಿಬಸಯ್ಯನನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ಲೋಕಾದಾಳಿ ಇನ್ನುಳಿದ ಇಲಾಖೆ ಅಧಿಕಾರಿಗಳಲ್ಲೂ ನಡುಕ: ಹರಿಹರ ಬೆಸ್ಕಾಂ ಎಂಜಿನಿಯರ್ ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಂತೆ ತಾಲೂಕಿನ ಇನ್ನುಳಿದ ಇಲಾಖೆಗಳ ಅಧಿಕಾರಿಗಳಲ್ಲಿ ನಡುಕು ಉಂಟಾಗಿದೆ. ತಾಲೂಕಿನ ಇನ್ನುಳಿದ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಹಿಳೆ ಪೊಟೋ ತೆಗೆದು ಬ್ಲಾಕ್​ಮೇಲ್ 10 ಲಕ್ಷ ರೂ ಬೇಡಿಕೆ:ದೂರು ದಾಖಲು

ದಾವಣಗೆರೆ: ಅನುಮತಿ ಇಲ್ಲದೆ ಮಹಿಳೆಯೊಬ್ಬರ ಫೋಟೋ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಹೆದರಿಸಿ 10 ಲಕ್ಷ ರೂ ಬೇಡಿಕೆ ಇಟ್ಟು ಬ್ಲಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿತ್ರದುರ್ಗದ ಗಾರೆಹಟ್ಟಿಯ ಸಿದ್ದಲಿಂಗೇಶ್ (34) ಆರೋಪಿ ಮಹಿಳೆಗೆ 10 ಲಕ್ಷ ರೂ ಬೇಡಿಕೆ ಇಟ್ಟಿದ್ದನು. ಬ್ಲಾಕ್​ಮೇಲ್ ಒಳಗಾದ ಮಹಿಳೆಯ ಪತಿ ಹೈನುಗಾರಿಕೆ ಕೆಲಸ ನಿರ್ವಹಿಸಲು ಆರೋಪಿ ಸಿದ್ದಲಿಂಗೇಶ್​ನನ್ನು ಮನೆಗೆ ಕೆಲಸಕ್ಕೆ ಕರೆದುಕೊಂಡು ಬಂದಿದ್ದನು.

ಮಹಿಳೆಯ ಮೊಬೈಲ್‌ನಿಂದ ಪತಿ ಕರೆ ಮಾಡಿದ್ದ ವೇಳೆ ಆ ನಂಬರ್ ಸೇವ ಮಾಡಿಕೊಂಡಿದ್ದ ಸಿದ್ದಲಿಂಗೇಶ್ ಆರೋಪಿ, ಮೊಬೈಲ್​ನಿಂದ ಮಹಿಳೆಗೆ ಕರೆ ಮಾಡಿ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದಕ್ಕೆ ಮಹಿಳೆ ಒಪ್ಪದಿದ್ದಾಗ ಈ ಹಿಂದೆ ತೆಗೆದಿದ್ದ ಮಹಿಳೆಯ ಫೋಟೋ ತೋರಿಸಿ, ಅದನ್ನು ಎಡಿಟ್ ಮಾಡಿ ಸಂಬಂಧಿಕರಿಗೆ ಕಳುಹಿಸುತ್ತೇನೆ. ಸಾಮಾಜಿಕ ಮಾಧ್ಯಮಗಳಿಗೆ ಅಪ್‌ಲೋಡ್ ಮಾಡುತ್ತೇನೆ. ಇಲ್ಲವಾದಲ್ಲಿ 10 ಲಕ್ಷ ಕೊಡಬೇಕು ಎಂದು ಮಹಿಳೆಗೆ ಚಾಕು ತೋರಿಸಿ ಬೆದರಿಸಿದ್ದಾನೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಬ್ಯಾಕ್​​ಮೇಲ್​ಗೆ ಬೇಸತ್ತ ಮಹಿಳೆ ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂಓದಿ:ಪೊಲೀಸ್​ ನೇಮಕಾತಿ ದೈಹಿಕ ಪರೀಕ್ಷೆ ಬಳಿಕ ಯುವಕ ಹೃದಯಾಘಾತದಿಂದ ಸಾವು

ಇದನ್ನೂ ಓದಿ: ದಾವಣಗೆರೆ: ದಂತ ವೈದ್ಯಾಧಿಕಾರಿ ಹುದ್ದೆಯ ಆಸೆ ತೋರಿಸಿ ವೈದ್ಯರಿಂದಲೇ ವಂಚನೆ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.