ETV Bharat / state

ಮನೆ ಮನೆಗೆ ತೆರಳಿ ತಿರಂಗ ಹಂಚಿದ ದಾವಣಗೆರೆ ಮಾಜಿ ಮೇಯರ್ - Etv Bharat kannada

ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವ ಆಚರಿಸಲು ಪ್ರಧಾನಿ ಮೋದಿಯವರು ಹರ್ ಘರ್ ತಿರಂಗ ಅಭಿಯಾನಕ್ಕೆ ಕರೆಕೊಟ್ಟಿದ್ದಾರೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ದಾವಣಗೆರೆಯ ಮಾಜಿ ಮೇಯರ್ ಮನೆ ಮನೆಗೆ ತಿರಂಗ ಹಂಚಿದ್ದಾರೆ.

har-ghar-tiranga-abhiyana-ex-mayor-distributed-the-tiranga
ಹರ್ ಘರ್ ತಿರಂಗ : ಮನೆ ಮನೆಗೆ ತೆರಳಿ ತಿರಂಗ ಹಂಚಿದ ಮಾಜಿ ಮೇಯರ್
author img

By

Published : Aug 7, 2022, 11:49 AM IST

Updated : Aug 8, 2022, 6:39 PM IST

ದಾವಣಗೆರೆ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಸಂದಿವೆ. ಈ ಸಂಭ್ರಮವನ್ನು ದೇಶದಾದ್ಯಂತ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹರ್ ಘರ್ ತಿರಂಗ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಈ ಅಭಿಯಾನಯನ್ನು ಯಶಸ್ವಿಗೊಳಿಸಲು ದಾವಣಗೆರೆ ಪಾಲಿಕೆಯ ಸದಸ್ಯರು ಮನೆ‌ ಮನೆಗೂ ತೆರಳಿ‌ ರಾಷ್ಟ್ರ ಧ್ವಜ ಹಂಚಿದ್ದಾರೆ.

ಮಹಾನಗರ ಪಾಲಿಕೆ ಮಾಜಿ ಮೇಯರ್‌ ಹಾಗು ಪಾಲಿಕೆ ಸದಸ್ಯ ಬಿ.ಜಿ ಅಜಯ್ ಕುಮಾರ್ ಅವರು ಮನೆ‌ಮನೆಗೆ ತೆರಳಿ ತಿರಂಗ ವಿತರಿಸಿದ್ದಾರೆ. ಜತೆಗೆ ಪ್ರತೀ ಮನೆಯಲ್ಲೂ ತಿರಂಗ ಹಾರಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಸುಮಾರು 1,500ಕ್ಕೂ ಹೆಚ್ಚು ತಿರಂಗಾಗಳನ್ನು ಇವರು ನೀಡಿದ್ದಾರೆ.

ಮನೆ ಮನೆಗೆ ತೆರಳಿ ತಿರಂಗ ಹಂಚಿದ ದಾವಣಗೆರೆ ಮಾಜಿ ಮೇಯರ್

ತಿರಂಗಾ ಹಾರಿಸುವಂತೆ ಆಶಾ ಕಾರ್ಯಕರ್ತೆಯರು ಹರಿಹರ ತಾಲೂಕಿನ ಕುಂಬಳೂರಿನಲ್ಲಿ ಅಭಿಯಾನ ಮಾಡಿದರು. ಮೌಲಾನ ಅಬ್ದುಲ್ ಕಲಾಂ ಅಝಾದ್ ಶಾಲೆಯ ಮಕ್ಕಳು ಜಾಥಾ ಹಮ್ಮಿಕೊಂಡು ತಿರಂಗಾ ಅಭಿಯಾನ ಕೈಗೊಂಡರು. ಈ ಬಗ್ಗೆ ಮಾತನಾಡಿದ ಬಿಜೆಪಿ ಕಾರ್ಯಕರ್ತ ಶಿವನಗೌಡ ಪಾಟೀಲ್, "ಬಿಜೆಪಿ ವತಿಯಿಂದ ಎಲ್ಲ ಮನೆಗಳಿಗೆ ತಿರಂಗ ಹಂಚಲಾಗಿದೆ. ಅಂಗಡಿಗಳಿಗೂ ನೀಡಲಾಗಿದೆ. ಮನೆ ಅಥವಾ ಅಂಗಡಿ ಬಳಿ ತಿರಂಗ ಹಾರಿಸಿ ಅಭಿಯಾನ ಯಶಸ್ವಿಗೊಳಿಸಬೇಕು" ಎಂದು ಮನವಿ ಮಾಡಿರುವುದಾಗಿ ಹೇಳಿದರು.

ಇದನ್ನೂ ಓದಿ : ವಿಜಯಪುರ: ಮುಳುಗಿದ ಸೇತುವೆ ಮೇಲೆ ಬಸ್ ಸಂಚಾರ; ಚಾಲಕ, ನಿರ್ವಾಹಕ ಅಮಾನತು

Last Updated : Aug 8, 2022, 6:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.