ದಾವಣಗೆರೆ : ಬೆಣ್ಣೆನಗರಿ ದಾವಣಗೆರೆ ದುಗ್ಗಮ್ಮ ದೇವಿ, ಆಂಜನೇಯ, ಕರಿಯಮ್ಮ, ಹರಿಹರೇಶ್ವರ ದೇವಾಲಯಗಳಿಂದ ಕೂಡಿರುವ ಜಿಲ್ಲೆ. ದಾವಣಗೆರೆ ತಾಲೂಕಿನ ಹಳೇಬಾತಿ ಎಂಬ ಗ್ರಾಮ ಇದೀಗ ಹೆಸರುವಾಸಿ. ಇಡೀ ಜಿಲ್ಲೆಯ ಸುತ್ತಮುತ್ತಲ ಭಕ್ತರನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಹನುಮ ಕಾಯುತ್ತಿದ್ದಾನೆ.
ವಿವಿಧ ಸಮಸ್ಯೆಗಳನ್ನು ಹೊತ್ತು ಈ ದೇವಾಲಯಕ್ಕೆ ಬರುವ ಭಕ್ತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಅಚ್ಚರಿ ಅಂದ್ರೆ ಹರಕೆ ಮಾಡಿದ ಕೆಲವೇ ದಿನಗಳಲ್ಲಿ ಅ ಹರಕೆ ಪೂರ್ಣಗೊಳ್ಳುತ್ತದೆಯಂತೆ. ಆಂಜನೇಯ ಬ್ರಹ್ಮಚಾರಿಯಾಗಿದ್ದರೂ ಕೂಡ ಮಹಿಳೆಯರ ಇಷ್ಟಾರ್ಥಗಳನ್ನು ಪೂರ್ಣಗೊಳಿಸುವ ಮೂಲಕ ಭಕ್ತರನ್ನು ಸೆಳೆಯುತ್ತಿದ್ದಾನೆ.
ದಾವಣಗೆರೆ, ಹರಿಹರ, ಹೊನ್ನಾಳಿ, ಹಾವೇರಿ, ಬೆಂಗಳೂರು, ಹುಬ್ಬಳಿ-ಧಾರವಾಡ, ಬಳ್ಳಾರಿ ರಾಜ್ಯದ ಮೂಲೆ ಮೂಲೆಯಿಂದ ಈ ಗ್ರಾಮಕ್ಕೆ ಪ್ರತಿನಿತ್ಯ ಭಕ್ತರು ಭೇಟಿ ನೀಡ್ತಾರೆ. ತಮ್ಮ ಇಷ್ಟಾರ್ಥಗಳು ಪೂರ್ಣಗೊಂಡ ಬಳಿಕ ತಮ್ಮ ಕಿರು ಕಾಣಿಗಳನ್ನು ಹಣ ಹಾಗೂ ಬಂಗಾರದ ರೂಪದಲ್ಲಿ ಈ ದೇವಾಲಯಕ್ಕೆ ನೀಡ್ತಾರೆ.
ಈ ದೇವಾಲಯದಲ್ಲಿ ಯಾವೆಲ್ಲ ಇಷ್ಟಾರ್ಥಗಳು ಈಡೇರುತ್ತವೆ : ಪವಾಡ ಪುರುಷ ಎಂದೇ ಖ್ಯಾತಿಗಳಿಸಿರುವ ಹಳೇ ಬಾತಿ ಗ್ರಾಮದ ಆರಾಧ್ಯದೈವ ಆಂಜನೇಯ ಸ್ವಾಮಿ ಮಕ್ಕಳಾಗದವರಿಗೆ ಸಂತಾನ ಭಾಗ್ಯ ಕರುಣಿಸಿರುವುದು, ಯುವತಿಯರಿಗೆ ಮದುವೆ ಭಾಗ್ಯ ಕಲ್ಪಿಸಿರುವುದು, ಮಾಟ ಮಂತ್ರ, ಹಣಕಾಸು ವ್ಯವಹಾರ, ಕೆಲಸದ ಸಮಸ್ಯೆ ಹೀಗೆ ಮುಂತಾದ ಸಮಸ್ಯೆಗಳನ್ನು ಈ ಪವಾಡ ಪುರುಷ ಬಗೆಹರಿಸಿದ್ದಾನಂತೆ
ಇನ್ನು ರಾಜಕೀಯ ನಾಯಕರು ಚುನಾವಣೆ ಸಮಯದಲ್ಲಿ ಗೆಲುವು ನೀಡೆಂದು ಆಂಜನೇಯನ ಮೊರೆ ಹೋಗ್ತಾರಂತೆ. ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರನಾಥ್, ಹರಿಹರದ ಮಾಜಿ ಶಾಸಕ ಬಿಪಿ ಹರೀಶ್ ಮುಂತಾದವರು ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಹರಕೆ ಕಟ್ಟಿಕೊಂಡ ಬಳಿಕ, ಅವರು ಚುನಾವಣೆಗಳಲ್ಲಿ ಜಯಭೇರಿ ಬಾರಿಸಿರುವುದು ಉದಾಹರಣೆ ಕಣ್ಮುಂದೆ ಇದೆ.
ಇದನ್ನೂ ಓದಿ:'ಹೋರಾಟ ರೂಪಿಸುವ ಮೊದಲು ಸಿದ್ದರಾಮಯ್ಯ ಭೇಟಿಯಾಗಿ ಬಳಿಕ ಈಶ್ವರಪ್ಪರನ್ನು ಕರೆದವು'
ಆಂಜನೇಯ ಸ್ವಾಮಿಯ ಪಾದರಕ್ಷೆಗಳ ಮಹತ್ವ : ಇನ್ನು ಈ ಆಂಜನೇಯ ಸ್ವಾಮೀ ದೇವಾಲಯದ ಕೂಗಳತೆಯಲ್ಲಿರುವ ಆಂಜನೇಯ ಸ್ವಾಮಿಯ ಪಾದರಕ್ಷೆಗಳು ಕೂಡ ಅಷ್ಟೇ ವಿಶೇಷತೆಯಿಂದ ಕೂಡಿವೆ. ಇಲ್ಲಿರುವ ಪಾದುಕೆಗಳನ್ನು ಹಸು ಹಾಗು ಕರುಗಳ ಚರ್ಮದಿಂದ ನಿರ್ಮಿಸಲಾಗಿದೆಯಂತೆ. ಈ ಪಾದುಕೆಗಳ ಬಳಿ ತಮ್ಮ ಸಮಸ್ಯೆಗಳನ್ನು ಕೇಳಿಕೊಂಡರೆ ಕೆಲವೇ ದಿನಗಳಲ್ಲಿ ಬಗೆಹರಿಯುತ್ತವೆಯಂತೆ.
ಜ್ವರ, ಕೆಮ್ಮು,ನೆಗಡಿ, ಮಲೇರಿಯಾ, ಕಾಲರ, ಮೈ ಕೈ ನೋವು, ಸುಸ್ತು, ಈ ಎಲ್ಲಾ ಕಾಯಿಲೆಗಳಿಗೆ ಈ ಪಾದುಕೆಗಳಿಂದ ಬೆಚ್ಚುಗೆ ಮಾಡಿದರೆ ಸಾಕು ಕೆಲವೇ ಗಂಟೆಗಳಲ್ಲಿ ರೋಗಿಗಳು ಸರಿ ಹೋಗುತ್ತರಂತೆ. ಈ ಪಾದುಕೆಗಳ ಮುಂದೆ ನಿಂತು ಬೇಡಿಕೊಂಡರೆ ಸಾಕಂತೆ ತಮ್ಮ ಸಮಸ್ಯೆಗಳು ಕೂಡ ದೂರ ಆಗುತ್ತವೆ ಎಂಬುದು ಈ ಹಳೇಬಾತಿ ಗ್ರಾಮಸ್ಥರ ನಂಬಿಕೆ.
ಈ ಹಳೇ ಬಾತಿ ಗ್ರಾಮ ಹಲವು ವರ್ಷಗಳ ಹಿಂದೆ ಕಾಡಾಗಿದ್ದಾಗ, ದನ ಮೇಯಿಸುವ ವೇಳೆ ವ್ಯಕ್ತಿಯೊಬ್ಬನಿಗೆ ಈ ಆಂಜನೇಯ ಸ್ವಾಮಿಯ ಉದ್ಭವ ಮೂರ್ತಿ ಕಂಡಿತಂತೆ. ಆ ವ್ಯಕ್ತಿ ಗ್ರಾಮದ ಹಿರಿಯರಿಗೆ ತಿಳಿಸಿದ ಬಳಿಕ ಈ ದೇವಾಲಯ ನಿರ್ಮಾಣ ಮಾಡಿದರು ಎಂಬುದು ಇತಿಹಾಸ. ದೇವಾಲಯ ನಿರ್ಮಾಣದ ಬಳಿಕ ಈ ಗ್ರಾಮಕ್ಕೆ ಮಾತ್ರವಲ್ಲದೇ ಹೊರಜಿಲ್ಲೆಗಳಿಂದ ಬರುವ ಭಕ್ತರಿಗೂ ಒಳ್ಳೆಯದಾಗಿದೆ ಅಂತಾರೆ ಭಕ್ತರು.