ETV Bharat / state

ಪಿಪಿಇ ಕಿಟ್ ಹೋಲುವಂಥ ನೀಲಿ ಬಣ್ಣದ ಗೌನ್ ರಸ್ತೆಯಲ್ಲಿ ಪತ್ತೆ

author img

By

Published : Jun 6, 2020, 12:48 PM IST

ನೂರಾರು ಪಿಪಿಇ ಕಿಟ್​ಗಳಂತೆ ಕಾಣುವಂಥ ಗೌನ್ ಮಾದರಿಯ ನೀಲಿ ಬಣ್ಣದ ಬಟ್ಟೆಗಳು ಸಿಕ್ಕಿರುವುದು ಅನುಮಾನಕ್ಕೆ‌ ಕಾರಣವಾಗಿದೆ.‌ ಕೆಲವರು ಪ್ಯಾಕೆಟ್​ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹೋಗುವಾಗ ಈ ಪ್ಯಾಕೆಟ್​ಗಳು ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

gown cloth
ನೀಲಿ ಬಣ್ಣದ ಗೌನ್ ಮಾದರಿ ಬಟ್ಟೆಗಳು ರಸ್ತೆಯಲ್ಲಿ ಪತ್ತೆ

ದಾವಣಗೆರೆ : ಪಿಪಿಇ ಕಿಟ್​ಗಳನ್ನು ಹೋಲುವಂಥ ಗೌನ್ ಮಾದರಿಯ ಬಟ್ಟೆಗಳಿದ್ದ ಪಾಕೆಟ್​ಗಳು ನಗರದ ಹೊರವಲಯದ ಬನಶಂಕರಿ ಬಡಾವಣೆ ಬಳಿಯ ಬೈಪಾಸ್ ರಸ್ತೆಯಲ್ಲಿ‌ ಪತ್ತೆಯಾಗಿವೆ.

ನೂರಾರು ಪಿಪಿಇ ಕಿಟ್​ಗಳಂತೆ ಕಾಣುವಂಥ ಗೌನ್ ಮಾದರಿಯ ನೀಲಿ ಬಣ್ಣದ ಬಟ್ಟೆಗಳು ಸಿಕ್ಕಿರುವುದು ಅನುಮಾನಕ್ಕೆ‌ ಕಾರಣವಾಗಿದೆ.‌ ಕೆಲವರು ಪ್ಯಾಕೆಟ್​ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹೋಗುವಾಗ ಈ ಪ್ಯಾಕೆಟ್​ಗಳು ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ರಸ್ತೆಯ ಬದಿಯಲ್ಲಿ ಬಿದ್ದಿದ್ದ ಈ ಪ್ಯಾಕೆಟ್​​​​ಗಳನ್ನು ನೋಡಿದ ಸ್ಥಳೀಯರು ಕೂಡಲೇ ವಿದ್ಯಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇವುಗಳನ್ನು ಪರಿಶೀಲಿಸಿದಾಗ ಅಲ್ಲಿ ಸಿಕ್ಕಿರುವುದು ಪಿಪಿಇ ಕಿಟ್​ಗಳಲ್ಲ, ಗೌನ್​ಗಳಷ್ಟೇ ಎಂಬುದು ಗೊತ್ತಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸುಮಾರು 40 ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಧರಿಸುವ ಬಟ್ಟೆಗಳ ಈ ಪ್ಯಾಕೆಟ್​ಗಳು ಇಲ್ಲಿ ಬಿದ್ದಿದ್ದು ಹೇಗೆ, ಎಂಬ ಬಗ್ಗೆ ಆರೋಗ್ಯ ಇಲಾಖೆ ಆಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.