ದಾವಣಗೆರೆ: ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬೆಣ್ಣೆನಗರಿ ದಾವಣಗೆರೆಯಲ್ಲಿ ಸುಸಜ್ಜಿತವಾದ ಆಟದ ಮೈದಾನ/ಕ್ರೀಡಾಂಗಣಗಳಿವೆ. ಯಾವುದೇ ಮೈದಾನ ಒತ್ತುವರಿಯಾಗದೆ ಜನಸಾಮಾನ್ಯರ ಬಳಕೆಗೆ ಪೂರಕವಾಗಿವೆ. ಇಲ್ಲಿರುವ ಮೂರು ಕ್ರೀಡಾಂಗಣಗಳನ್ನು ಯುವ ಸಬಲೀಕರಣ ಕ್ರೀಡಾ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ಕೆಲ ಕ್ರೀಡಾಂಗಣಗಳನ್ನು ನಿರ್ವಹಣೆ ಮಾಡಲು ಜಿಪಂ ಕೊಂಚ ಮಟ್ಟಿಗೆ ಅನುದಾನ ನೀಡುತ್ತಿದೆ.
ಪ್ರತಿ ಪ್ರದೇಶಗಳಲ್ಲೂ ಕ್ರೀಡಾ ಚಟುವಣೆಕೆಗೆ, ಜನಸಾಮಾನ್ಯರಿಗೆ ಪೂರಕವಾದ ಆಟದ ಮೈದಾನಗಳಿರಬೇಕು. ಅವುಗಳ ನಿರ್ವಹಣೆ ಕೂಡ ಉತ್ತಮ ರೀತಿಯಲ್ಲಾಗಬೇಕು. ಆಗ ಮಾತ್ರ ಅವುಗಳ ಸದ್ಭಳಕೆ ಸಾಧ್ಯ.
ದಾವಣಗೆರೆಯಲ್ಲಿ ಸುಸಜ್ಜಿತವಾದ ಕ್ರೀಡಾಂಗಣಗಳಿದ್ದು, ಒತ್ತುವರಿಯಾಗದೆ ಜನ ಸಾಮಾನ್ಯರ ಬಳಕೆಗೆ ಪೂರಕವಾಗಿವೆ. ದಾವಣಗೆರೆ ಹೃದಯಭಾಗದಲ್ಲಿರುವ ಜಿಲ್ಲಾ ಕ್ರೀಡಾಂಗಣ, ದೇವರಾಜ್ ಅರಸ್ ಬಡಾವಣೆಯಲ್ಲಿರುವ ಕ್ರೀಡಾಂಗಣ ಹಾಗು ಒಳಾಂಗಣ ಕ್ರೀಡಾಂಗಣ ಸೇರಿ ಒಟ್ಟು ಮೂರು ಕ್ರೀಡಾಂಗಣಗಳು ಜನರಿಗೆ ಹಾಗು ಮಕ್ಕಳಿಗೆ ಆಟವಾಡಲು ಸುಸಜ್ಜಿತವಾಗಿವೆ.
ಜಿಲ್ಲಾ ಕ್ರೀಡಾಂಗಣ ನಿರ್ವಹಣೆ ಮಾಡಲು ಜಿ.ಪಂ.ಯಿಂದ ಅನುದಾನ ಬಿಡುಗಡೆಯಾಗುತ್ತಿದ್ದು, ಅದೇ ಅನುದಾನದಿಂದ ಈ ಕ್ರೀಡಾಂಗಣದ ನಿರ್ವಹಣೆ ಮಾಡಲಾಗುತ್ತಿದೆ. ಇನ್ನುಳಿದ ಒಳಾಂಗಣ ಕ್ರೀಡಾಂಗಣ ಹಾಗು ದೇವರಾಜ್ ಅರಸ್ ಬಡಾವಣೆಯ ಕ್ರೀಡಾಂಗಣವನ್ನು ಯುವ ಸಬಲಿಕರಣ ಹಾಗು ಕ್ರೀಡಾ ಇಲಾಖೆ ನಿರ್ವಹಿಸುತ್ತಿದೆ. ಇನ್ನು ಒಳಾಂಗಣ ಕ್ರೀಡಾಂಗಣವನ್ನು ಜನ್ರ ಉಪಯೋಗಕ್ಕಾಗಿಯೇ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೆಲ ರಿಪೇರಿ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿಗಳಲ್ಲಿ ಅದು ಕೂಡ ಜನರ ಬಳಕೆಗೆ ಸಿದ್ಧವಾಗಲಿದೆ.
ಇದನ್ನೂ ಓದಿ: ಅವಳಿನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸಜ್ಜು
ಜಿಲ್ಲೆಯಲ್ಲಿ ಜನಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಕ್ರೀಡಾಂಗಣಗಳ ಸಂಖ್ಯೆ ಹೆಚ್ಚಾಗಬೇಕಾಗಿದ್ದು, ಕ್ರೀಡಾ ಇಲಾಖೆ ಸಕಲ ಸೌಲಭ್ಯ ನೀಡಬೇಕಾಗಿದೆ. ಜಿಲ್ಲೆಯಲ್ಲಿರುವ ತಾಲೂಕುವಾರು ಕ್ರೀಡಾಂಗಣಗಳನ್ನು ಆಯಾ ತಾಲೂಕು ಪಂಚಾಯತ್ ನಿರ್ವಹಣೆ ಮಾಡುತ್ತಿದೆ. ದಾವಣಗೆರೆ ನಗರದ ಹಳೇ ದಾವಣಗೆರೆ ಭಾಗಕ್ಕೆ ಒಂದು ಆಟದ ಮೈದಾನ ಬೇಕಾಗಿದ್ದರಿಂದ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕ್ರೀಡಾಂಗಣ ಕಾಮಗಾರಿ ಆರಂಭಿಸಲಾಗಿದೆ.
ಇನ್ನೂ ಹೆಚ್ಚಿನ ಕ್ರೀಡಾಂಗಣಗಳ ಅವಶ್ಯಕತೆ ಇದೆ. ಇನ್ನೂ ಈ ತನಕ ಯಾವುದೇ ಕ್ರೀಡಾಂಗಣದ ಮೇಲೆ ಭೂಗಳ್ಳರ ಕಣ್ಣು ಬಿದ್ದಿಲ್ಲ ಎಂಬುದು ಸಂತಸದ ವಿಚಾರವಾಗಿದೆ. ಮತ್ತೆ ಕೆಲವೆಡೆಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಿಕೊಡಿ ಎಂಬುದು ಸ್ಥಳೀಯರ ಒತ್ತಾಯವಾಗಿದೆ.