ಬೆಳಗಾವಿ/ದಾವಣಗೆರೆ/ಮೈಸೂರು: ಕೊರೊನಾ ಎಫೆಕ್ಟ್ನಿಂದ ಚೇತರಿಕೆ ಕಾಣುವ ಸಮಯ ಬಂತು ಎನ್ನುವಷ್ಟರಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಬೆಳಗಾವಿ, ದಾವಣಗೆರೆ, ಮೈಸೂರು ಜನತೆ ಹೈರಾಣಾಗಿದ್ದು, ಸರ್ಕಾರಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಅನ್ನದಾತ ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾರಿಗೆ ವ್ಯವಸ್ಥೆ ಬೇಕೇ ಬೇಕು. ಆದ್ರೆ ದಿನೇ-ದಿನೆ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ತರಕಾರಿ ಸಾಗಿಸಲು ಹರಸಾಹಸ ಪಡುವಂತಾಗಿದೆ. ತರಕಾರಿಗಳನ್ನು ದುಪ್ಪಟ್ಟು ಹಣ ತೆತ್ತು ಸಾಗಿಸೋತ್ತಿರೋದ್ರಿಂದ ಮಾರುಕಟ್ಟೆಯಲ್ಲೀಗ ತರಕಾರಿ ಬೆಲೆ ಗಗನಕ್ಕೇರಿದೆ.
ದಾವಣಗೆರೆ ಜಿಲ್ಲೆಯಿಂದ ತರಕಾರಿಗಳನ್ನು ರಫ್ತು ಮಾಡೋದು ಮತ್ತು ಜಿಲ್ಲೆಗೆ ಆಮದು ಮಾಡಿಕೊಳ್ಳೋದು ಸರ್ವೇ ಸಾಮಾನ್ಯ. ಆದ್ರೀಗ ಇಂಧನ ಬೆಲೆ ಏರಿಕೆಯಿಂದ ತರಕಾರಿ ಸಾಗಾಟಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದರ ಹೊರೆ ಈಗ ನೇರವಾಗಿ ಗ್ರಾಹಕರ ಮೇಲೆ ಬೀಳುತ್ತಿದೆ.
ನೆರೆಯ ಮಹಾರಾಷ್ಟ್ರ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳಗಾವಿಗೆ ಅಗತ್ಯ ವಸ್ತುಗಳು ಪೂರೈಕೆಯಾಗುತ್ತವೆ. ಆದ್ರೆ ಇಂಧನ ಬೆಲೆ ಏರಿಕೆ ಆದ ಪರಿಣಾಮ ನಾವು ಅನ್ನ ಬಿಟ್ಟು ಮಣ್ಣು ತಿನ್ನುವ ಪರಿಸ್ಥಿತಿ ಬಂದಿದೆ ಎಂದು ಕುಂದಾನಗರಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ: ದುಬಾರಿ ದುನಿಯಾದಲ್ಲಿ ಬದುಕುವುದೇ ಕಷ್ಟ ಎನ್ನುತ್ತಾರೆ ಕುಂದಾನಗರಿ ಜನತೆ!
ಈ ರೀತಿ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಹೋದ್ರೆ ಜನಸಾಮಾನ್ಯರು ಜೀವನ ನಡೆಸಲು ಹೆಣಗಾಡಬೇಕಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಇಂಧನದ ಬೆಲೆ ಏರಿಸುವುದನ್ನು ಈ ಕೂಡಲೇ ನಿಲ್ಲಿಸಬೇಕೆಂದು ಮೈಸೂರು ಜನತೆ ಒತ್ತಾಯಿಸಿದ್ರು.