ದಾವಣಗೆರೆ: ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕರಿಗೆ ಚನ್ನಗಿರಿ ಪೊಲೀಸರು ವಿನೂತನವಾದ ಶಿಕ್ಷೆ ವಿಧಿಸಿ ಬೀದಿಗಿಳಿಯದೆ ಮನೆಯಲ್ಲೇ ಇರುವಂತೆ ಬುದ್ಧಿವಾದ ಹೇಳಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಯುವಕರಿಗೆ ಕಪ್ಪೆ ಓಟ ಓಡಿಸಿ ಶಿಕ್ಷೆ ನೀಡುವ ಮೂಲಕ ಪಾಠ ಹೇಳಿದ್ದಾರೆ. ವೀಕೆಂಡ್ ಕರ್ಫ್ಯೂ ಇದ್ದರೂ ಬೀದಿಗಿಳಿದು ಸುತ್ತಾಡುತ್ತಿದ್ದ ಯುವಕರಿಗೆ ವಿನೂತನ ಶಿಕ್ಷೆ ನೀಡಿದ್ದಾರೆ.
ಪಿಎಸ್ಐ ಜಗದೀಶ್ ಅವರು ಅನಾವಶ್ಯಕವಾಗಿ ಓಡಾಡಿದ ಯುವಕರನ್ನು ಕರೆದು ಶಿಕ್ಷೆ ವಿಧಿಸಿದ್ದು, ಎಲ್ಲೆಂದರಲ್ಲಿ ವಿನಾಕಾರಣ ಸಂಚಾರ ಮಾಡದಂತೆ ಸೂಚನೆ ನೀಡಿದರು. ಕೊರೊನಾ ಕಡಿಮೆಯಾಗಲಿ ಎಂಬ ಉದ್ದೇಶದಿಂದ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದ್ದು, ನೀವು ಈ ರೀತಿ ಮನೆಯಿಂದ ಹೊರಗೆ ಬಂದರೆ ವೈರಸ್ ಹೆಚ್ಚಾಗಲಿದೆ ಎಂದು ಮನವರಿಕೆ ಮಾಡಿಸಿದರು.
ಓದಿ: ಹಂಪಿಯ ಬಡವಿಲಿಂಗ ದೇವರ ಅರ್ಚಕ ಕೆ ಎನ್ ಕೃಷ್ಣ ಭಟ್ ನಿಧನ.. ಸಚಿವ ಶ್ರೀರಾಮುಲು ಸಂತಾಪ