ದಾವಣಗೆರೆ: ನಗರದಲ್ಲಿ ಹಾಡುಹಗಲೆ ಯುವತಿಯ ಮರ್ಡರ್ ಮಾಡಲಾಗಿತ್ತು, ಯುವಕನನ್ನು ನಡುರಸ್ತೆಯಲ್ಲೇ ಚೂರಿಯಿಂದ ಕತ್ತು ಸೀಳಿದ ಹಲ್ಲೆ ಮಾಡಲಾಗಿತ್ತು. ಈ ರೀತಿಯ ಘಟನೆಯಿಂದ ಇಡೀ ದಾವಣಗೆರೆಯ ಯುವ ಸಮುದಾಯ ಬೆಚ್ಚಿಬಿದ್ದಿತ್ತು. ನಮಗೆ ರಕ್ಷಣೆನೇ ಇಲ್ವಾ ಎಂದು ಭಯದ ವಾತಾವರಣದಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಈಗ ತಮ್ಮನ್ನ ತಾವೇ ರಕ್ಷಣೆ ಮಾಡಿಕೊಳ್ಳಲು ಯುವತಿಯರಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ತಮ್ಮನ್ನ ತಾವೇ ರಕ್ಷಣೆ ಮಾಡಿಕೊಳ್ಳುವ ಕರಾಟೆ ತರಬೇತಿ ನೀಡಲಾಗುತ್ತಿದೆ.
ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಯುವತಿ ಹಾಗೂ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿ ದೌರ್ಜನ್ಯಗಳು ಅಪಾರ, ನಡು ರಸ್ತೆಯಲ್ಲೇ ಯುವತಿಯರು ಭೀಕರವಾಗಿ ಹತ್ಯೆ ಮಾಡಲಾಗುತ್ತಿದೆ. ಇದನ್ನು ಮನಗಂಡ ಕರಾಟೆ ಮಾಸ್ಟರ್ ರಾಜು ಅವರು ಯುವತಿಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಕರಾಟೆ ತರಬೇತಿ ನೀಡುತ್ತಿದ್ದಾರೆ.
ದಾವಣಗೆರೆಯ ಚರ್ಚ್ ಬಳಿ ನಡುರಸ್ತೆಯಲ್ಲಿ ಯುವತಿಯ ಹತ್ಯೆಯಿಂದ ಬೇಸರಗೊಂಡ ರಾಜು ಅವರು ಉಚಿತವಾಗಿ ಯುವತಿಯರಿಗೆ ಕರಾಟೆ ಕಲಿಸುವ ಚಿಂತನೆ ಮಾಡುತ್ತಾರೆ. ಪ್ರತಿ ಸರ್ಕಾರಿ ಖಾಸಗಿ ಹಾಗೂ ಶಾಲೆಗೆ ತೆರಳಿ ಐದು ದಿನಗಳ ಕಾಲ ಮಕ್ಕಳು ತಾವೇ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವಂತೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲದೇ ಯುವತಿಯರಿಗೆ ಹಾಗೂ ಮಹಿಳೆಯರಿಗೆ ತಮ್ಮ ತರಬೇತಿ ಕೇಂದ್ರದಲ್ಲಿ ಶಿಕ್ಷಣ ನೀಡುತ್ತಿದ್ದಾರೆ.
ದಾವಣಗೆರೆ ನಗರದ ನಿಟ್ಟುವಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಕರಾಟೆ ಮಾಸ್ಟರ್ ರಾಜುರವರಿಂದು ಶಾಲೆಯ ಮಕ್ಕಳಿಗೆ ತರಬೇತಿ ನೀಡಿದರು. ಯಾರಾದರೂ ದಾಳಿ ಮಾಡಿದರೆ ಹೇಗೆ ಆತ್ಮ ರಕ್ಷಣೆ ಮಾಡಿಕೊಳ್ಳಬೇಕು, ಲಾಟಿ ಹಾಗು ಚೈನ್ ತರಬೇತಿ, ಪಂಚಸ್, ಕಿಕ್ಸ್ ಫೈಟ್ ಮಾಡೋದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡುತ್ತಿದ್ದೇನೆ ಎಂದು ರಾಜು ತಿಳಿಸಿದರು.
ಐದು ದಿನ ಪ್ರತಿ ಶಾಲೆಯಲ್ಲಿ ತರಬೇತಿ ನೀಡುವಾಗ ಮಕ್ಕಳು ಅಷ್ಟೇ ಧ್ಯಾನ ನೀಡಿ ಕಲಿಯುತ್ತಿದ್ದಾರೆ. ಸಾಮಾನ್ಯವಾಗಿ ಕರಾಟೆ ತರಬೇತಿ ಪಡೆಯಬೇಕಾದರೆ ಹಣ ಸಂದಾಯ ಮಾಡಬೇಕಾಗುತ್ತದೆ. ಸಣ್ಣ ಮಕ್ಕಳ ಮೇಲೆ ಅತ್ಯಾಚಾರಗಳು ಅಗುತ್ತಿರುವುದು ಬೇಸರ ತಂದಿದೆ. ಇದಕ್ಕಾಗಿ ಮಕ್ಕಳು ಸ್ವ ರಕ್ಷಣೆ ಕಲಿತು ಕೊಳ್ಳುವುದು ಉತ್ತಮ ಎಂದು ಟ್ರೈನಿಂಗ್ ಕೊಡುತ್ತಿದ್ದೇನೆ. ಸರ್ಕಾರ ಶಾಲೆಗಳಲ್ಲಿ ಕರಾಟೆಗಾಗಿ ಒಂದು ತರಗತಿ ಸೀಮಿತ ಮಾಡಿ ಆದೇಶ ಹೊರಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಶಾಲೆಯ ವಿದ್ಯಾರ್ಥಿನಿ ಶಾಹಿಸ್ತಾ ಮಾತನಾಡಿ, ಮಾಸ್ಟರ್ ಅವರು ಮೂರು ದಿನಗಳಿಂದ ತರಬೇತಿ ನೀಡುತ್ತಿದ್ದಾರೆ. ಯಾರಾದರೂ ದಾಳಿ ಮಾಡಿದರೆ ನಮ್ಮನ್ನು ನಾವೇ ರಕ್ಷಿಸಿಕೊಳ್ಳಲು ರಾಜು ಸರ್ ಎಲ್ಲಾ ರೀತಿ ಹೇಳಿಕೊಡುತ್ತಿದ್ದಾರೆ. ಫೇಸ್ ಪಂಚ್, ಸ್ಟಮಕ್ ಪಂಚ್, ಅಟ್ಯಾಕಿಂಗ್ ಕಲಿಸುತ್ತಿದ್ದಾರೆ. 6 ಹಾಗೂ 7ನೇ ತರಗತಿಯ ಮಕ್ಕಳು ಕಲಿಯುತ್ತಿದ್ದೇವೆ ಎಂದರು.
ಒಟ್ಟಾರೆ ಯುವತಿಯರು ಮಹಿಳೆ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ದೃಷ್ಠಿಕೋನವಾಗಿಟ್ಟುಕೊಂಡು ರಾಜುರವರು ಬಡಮಕ್ಕಳಿಗೆ ಕರಾಟೆ ಕಲಿಸುತ್ತಿದ್ದಾರೆ. ಆದರೆ ದುಬಾರಿ ದಿನಗಳಲ್ಲಿ ಹಣ ಇಲ್ಲದೆ ತರಬೇತಿ ನೀಡದ ಮಾಸ್ಟರ್ಗಳು ಸಾಲಿಗೆ ಸೇರ ರಾಜುರವರು ಪುಗಸಟ್ಟೆ ಕರಾಟೆ ತರಬೇತಿ ನೀಡ್ತಿರುವುದು ಮಾತ್ರ ವಿಶೇಷವೆ ಸರಿ.
ಇದನ್ನೂ ಓದಿ: ಜನವರಿ 1 ರಿಂದ ಸರ್ಕಾರಿ ಶಾಲೆಗಳಿಗೆ ಚಳಿಗಾಲದ ರಜೆ