ದಾವಣಗೆರೆ: ಈಗಾಗಲೇ ರಾಜ್ಯಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಕೊರೊನಾ ಸೋಂಕಿತರು ಹಾಗೂ ಅವರನ್ನು ಆರೈಕೆ ಮಾಡುವ ಸಂಬಂಧಿಕರಿಗೆ ಆಹಾರದ ಅವಶ್ಯಕತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಆಹಾರದ ಅವಶ್ಯಕತೆ ಇರುವ ಕುಟುಂಬಗಳಿಗೆ ದಾವಣಗೆರೆ ನಗರದ ಪಿಯು ಅಸೋಸಿಯೇಷನ್, ಪ್ರೇರಣ ಯುವ ಸಂಸ್ಥೆ, ಸೇವಾ ಭಾರತಿ ಹಾಗೂ ಭಾರತೀಯ ಸೇವಾ ವಿಕಾಸ್ ಪರಿಷತ್ತಿನ ಖಾಸಗಿ ಸಂಸ್ಥೆಗಳು ಸಹಾಯಕ್ಕೆ ಟೊಂಕ ಕಟ್ಟಿ ನಿಂತಿವೆ.
ಈ ಸಂಸ್ಥೆಗಳ ಸಹಯೋಗದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಎಸ್.ಟಿ ವೀರೇಶ್ ಅವರು ಕೂಡ ತಮ್ಮ ಕೈ ಜೋಡಿಸಿದ್ದು, ಸೋಂಕಿತರ ಮನೆ ಬಾಗಿಲಿಗೆ ಆಹಾರ ಒದಗಿಸಲು ಆರಂಭಿಸಲಾಗಿದೆ. ಈಗಾಗಲೇ ಇದರ ಬಗ್ಗೆ ಮೇಯರ್ ಎಸ್ಟಿ ವೀರೇಶ್ರವರು ಸದ್ದಿಲ್ಲದೇ ಈ ಕಾರ್ಯಕ್ಕೆ ಕೈ ಜೋಡಿಸಿ ಲಾಕ್ಡೌನ್ ಆಗಿರುವುದ್ದರಿಂದ ಸಂಕಷ್ಟದಲ್ಲಿರುವ ಕೊರೊನಾ ಸೋಂಕಿತರ ಕುಟುಂಬಕ್ಕೆ ಆಹಾರ ಒದಗಿಸಲು ಆರಂಭಿಸಿದ್ದಾರೆ.
ಆಹಾರ ಪಡೆಯಲು ಏನ್ಮಾಡ್ಬೇಕು ಗೊತ್ತಾ...!
ಹೌದು, ಲಾಕ್ಡೌನ್ ಇರುವುದರಿಂದ ಕೊರೊನಾ ಸೋಂಕಿತರು ಸೇರಿದಂತೆ ಅವರ ಕುಟುಂಬಕ್ಕೆ ಆಹಾರ ಪಡೆಯಲು ಮೊದಲು ತಾವು ಇರುವ ಮನೆ ವಿಳಾಸವನ್ನು 9945977433 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡುವ ಮೂಲಕ ಮನೆಯಲ್ಲಿ ಹೋಂ ಐಸೊಲೇಷನ್ನಲ್ಲಿರುವರು ಹಾಗೂ ಅವರ ಕುಟುಂಬಕ್ಕೆ ಉಚಿತ ಆಹಾರವನ್ನು ಈ ಸಂಸ್ಥೆಗಳು ಒದಗಿಸಲಿವೆ. ಈಗಾಗಲೇ ಈ ಕಾರ್ಯಕ್ರಮವನ್ನು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿರುವ ಸೋಂಕಿತರಿಗೆ ಆಹಾರ ಒದಗಿಸುವ ಮೂಲಕ ಮೇಯರ್ ಎಸ್ ಟಿ ವೀರೇಶ್ ಅವರು ಆರಂಭಿಸಿದ್ದು, ಸಹಾಯದ ಹಸ್ತ ಚಾಚಿವೆ.
ಎಷ್ಟು ಗಂಟೆಗೆ ಆಹಾರ ನೊಂದಣಿ ಮಾಡ್ಬೇಕು...!
ದಾವಣಗೆರೆ ಕೆಲ ಸಂಸ್ಥೆಗಳು ಉಚಿತವಾಗಿ ಆಹಾರವನ್ನು ಮನೆ ಬಾಗಿಲಿಗೆ ನೀಡಲು ಆರಂಭಿಸಿವೆ. ಇದರಿಂದ ಆಹಾರದ ಅವಶ್ಯಕತೆ ಇರುವವರು ಬೆಳಗ್ಗೆಯ ಉಪಾಹಾರವನ್ನು ಬೆಳಗ್ಗೆ 9 ಗಂಟೆಯೊಳಗೆ, ಮಧ್ಯಾಹ್ನದ ಊಟಕ್ಕಾಗಿ ಬೆಳಗ್ಗೆ 11 ಹಾಗೂ ರಾತ್ರಿಯ ಊಟ ಅವಶ್ಯಕತೆ ಇರುವವರು ಸಂಜೆ 6 ಗಂಟೆಯೊಳಗೆ ದೂರವಾಣಿ ಕರೆಗೆ ಕರೆ ಮಾಡುವ ಮೂಲಕ ನೋಂದಣಿ ಮಾಡ್ಬೇಕಾಗಿದೆ.