ದಾವಣಗೆರೆ: ಆಪರೇಷನ್ ಕಮಲದ ಜನಕ ಯಡಿಯೂರಪ್ಪ. ಚೆಕ್ ಮೂಲಕ ಯಡಿಯೂರಪ್ಪ ಲಂಚ ಪಡೆಯುತ್ತಿದ್ದ. ಆದರೆ, ಇದೀಗ ಆರ್ಟಿಜಿಎಸ್ ಮೂಲಕ ಮಗ ವಿಜಯೇಂದ್ರ ಲಂಚ ತೆಗೆದುಕೊಳ್ಳುತ್ತಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಒಬ್ಬರು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ, ಇನ್ನೊಬ್ಬರು ಅವರ ಮಗ ವಿಜಯೇಂದ್ರ ಡಿಫ್ಯಾಕ್ಟ್ ಮುಖ್ಯಮಂತ್ರಿ. ಬಿಎಎಸ್ವೈ ಅವರಂತಹ ದುರ್ಬಲ, ಭ್ರಷ್ಟ, ಕೆಟ್ಟ ಮುಖ್ಯಮಂತ್ರಿ ಇತಿಹಾಸದಲ್ಲಿ ಎಲ್ಲೂ ಸಿಕ್ಕಿಲ್ಲ. ಇನ್ನು ವಿಜಯೇಂದ್ರ ಆರ್ಟಿಜಿಎಸ್ ಗಿರಾಕಿ ಎಂದು ವ್ಯಂಗ್ಯವಾಡಿದರು.
ಎಸ್ಟಿ ಹೋರಾಟದ ಬಗ್ಗೆ ನನಗೆ ಪಾಠ ಮಾಡಲು ಈಶ್ವರಪ್ಪ ಬರ್ತಾರೆ. ಎಸ್ಟಿ ಮೀಸಲಾತಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಅಹಿಂದ ಸಿದ್ದರಾಮಯ್ಯ ಪರ ಇದೆ ಅಂತ ಸಿದ್ದರಾಮಯ್ಯನನ್ನ ಮುಗಿಸಲು ಮೀಸಲಾತಿ ಹೆಸರಲ್ಲಿ ಈಶ್ವರಪ್ಪ ಅವರನ್ನು ಮುಂದೆ ಬಿಟ್ಟಿದೆ. ನಾನು ಎಸ್ಟಿ ಮೀಸಲಾತಿ ವಿರೋಧಿಯಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಈಶ್ವರಪ್ಪ ಧಮ್ ಇದ್ರೆ, ಮುಂದಿನ ಮುಖ್ಯಮಂತ್ರಿ ಅಂತ ಹೇಳಲಿ ನೋಡೋಣ. ನಾಟಕ ಆಡ್ತೀರೇನ್ರೀ.. ಮೀಸಲಾತಿಗೆ ಕಾಂಗ್ರೆಸ್ ವಿರೋಧವಿಲ್ಲ ಎಂದರು.