ETV Bharat / state

ಕಾಂಗ್ರೆಸ್​ನ ಒಬ್ಬರು ಸಿಎಂ ಆಗುವ ತಿರುಕನ ಕನಸು ಕಾಣ್ತಿದ್ದಾರೆ: ಸಿದ್ದರಾಮಯ್ಯಗೆ ಬಿಎಸ್​ವೈ ಟಾಂಗ್ - ಎಸ್ ವಿ ರಾಮಚಂದ್ರಪ್ಪಗೆ ಟಿಕೆಟ್ ಫಿಕ್ಸ್

ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದರು. ಈ ವೇಳೆ ಸಿದ್ದರಾಮಯ್ಯ ವಿರುದ್ಧ ಅವರು ಕಿಡಿಕಾರಿದರು. ಅಲ್ಲದೇ ಅವರು ಸಿಎಂ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ. ಅದು ನನಸಾಗುವುದಿಲ್ಲ ಎಂದು ಟಾಂಗ್ ನೀಡಿದರು.

Former CM BS Yeddiyurappa
ಸಿದ್ದರಾಮಯ್ಯಗೆ ಬಿಎಸ್​ವೈ ಟಾಂಗ್
author img

By

Published : Nov 23, 2022, 1:38 PM IST

ದಾವಣಗೆರೆ: ಕಾಂಗ್ರೆಸ್​ನ ಯಾರೋ ಒಬ್ಬರು ಸಿಎಂ ಆಗಬೇಕೆಂಬ ತಿರುಕನ ಕನಸು ಕಾಣ್ತಿದ್ದಾರೆ. ಆದ್ರೆ ಆ ತಿರುಕನ ಕನಸು ನನಸಾಗುವುದಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಕಿದರು.

ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮುಂದಿನ ಚುನಾವಣೆಯಲ್ಲಿ 145ಕ್ಕೂ ಹೆಚ್ಚು ಸೀಟ್ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ, ಅಷ್ಟೇ ನಾವು ಅಧಿಕಾರಕ್ಕೆ ಬರುವುದು ಸತ್ಯ. ಆದ್ರೆ ಕಾಂಗ್ರೆಸ್​ನವರು ತಿರುಕನ ಕನಸನ್ನು ಕಾಣುತ್ತಿದ್ದಾರೆ. ಅವರು ಯಾವಾಗಲೂ ಅಧಿಕಾರಕ್ಕೆ ಬರೋದಿಲ್ಲ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್​ನವರು ಹೆಂಡ, ಹಣದ ಬಲದಿಂದ ಚುನಾವಣೆ ಮಾಡಲು ಹೊರಟಿದ್ದಾರೆ. ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ರಾಜ್ಯದ ಎಲ್ಲಾ ಕಡೆ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಸ್ ವಿ ರಾಮಚಂದ್ರರನ್ನು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ ಎಂದು ಬಿಎಸ್​ವೈ ಜಗಳೂರು ಜನರಿಗೆ ಕರೆ ನೀಡಿದರು.

ಸಿದ್ದರಾಮಯ್ಯಗೆ ಬಿಎಸ್​ವೈ ಟಾಂಗ್

ಇದನ್ನೂ ಓದಿ: ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ಹೊಣೆ ನನ್ನದು ಮಾಜಿ ಸಿಎಂ ಬಿಎಸ್​ವೈ

ಎಸ್ ವಿ ರಾಮಚಂದ್ರಪ್ಪಗೆ ಟಿಕೆಟ್ ಫಿಕ್ಸ್?: ನೀವು 50 ಸಾವಿರ ಮತಗಳ ಅಂತರದಿಂದ ಎಸ್​ ವಿ ರಾಮಚಂದ್ರಪ್ಪ ಅವರನ್ನು ಗೆಲ್ಲಿಸಬೇಕೆಂದು ಹೇಳುವ ಮೂಲಕ, ಅವರಿಗೆ ಟಿಕೆಟ್ ಕೊಡ್ತೀವಿ ಎಂಬ ಸಂದೇಶವನ್ನು ಕ್ಷೇತ್ರದ ಜನರಿಗೆ ಬಿಎಸ್​ವೈ ರವಾನಿಸಿದರು.

ತುರ್ತು ಕೆಲಸ ನಿಮಿತ್ತ ನನ್ನ ಹುಟ್ಟೂರು ಬೂಕನಕೆರೆಯಲ್ಲಿ ಪೂಜೆ ಇದೆ. ಆದ್ದರಿಂದ ಹೋಗಬೇಕಿದೆ. ಆದರೆ ಆತ್ಮೀಯ ರಾಮಚಂದ್ರನ ಮೇಲಿನ ಪ್ರೀತಿಯಿಂದ ಇಲ್ಲಿಗೆ ಬಂದಿದ್ದೇನೆ. ರಾಮಚಂದ್ರ 3,500 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ನನ್ನ ಶಿಕಾರಿಪುರದಲ್ಲಿ ಕೂಡ ಇಷ್ಟೊಂದು ದೊಡ್ಡಮಟ್ಟದ ಕೆಲಸ ಆಗಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.