ETV Bharat / state

ಎಇಇ ಸೇರಿ ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಎಫ್​ಐಆರ್ ದಾಖಲು

author img

By

Published : Feb 16, 2023, 9:36 PM IST

Updated : Feb 16, 2023, 9:49 PM IST

ಲೋಕೋಪಯೋಗಿ ಇಲಾಖೆಯ ಎಇಇ ಸೇರಿ ಮೂವರು ಅಧಿಕಾರಿಗಳ ವಿರುದ್ದ ದಾವಣಗೆರೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀರಾಮ ಸೇನೆ ಅಧ್ಯಕ್ಷ  ಮಣಿ ಸರ್ಕಾರ
ಶ್ರೀರಾಮ ಸೇನೆ ಅಧ್ಯಕ್ಷ ಮಣಿ ಸರ್ಕಾರ
ಶ್ರೀರಾಮ ಸೇನೆ ಅಧ್ಯಕ್ಷ ಮಣಿ ಸರ್ಕಾರ ಮಾತನಾಡಿದರು

ದಾವಣಗೆರೆ : "ನಾನು ಈ ಕುರ್ಚಿಗೆ ಬರಲು ಲಕ್ಷ ಲಕ್ಷ ದುಡ್ಡು ಕೊಟ್ಟಿದ್ದೇನೆ, ದುಡ್ಡು ಕೊಡಲೇಬೇಕು" ಎಂದು ಬಹಿರಂಗವಾಗಿ ಗುತ್ತಿಗೆದಾರರ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆಯ ಎಇಇ ಸೇರಿದಂತೆ ಮೂವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಎಫ್​ಐಆರ್ ದಾಖಲಾಗಿದೆ. ಲೋಕೋಪಯೋಗಿ ಇಲಾಖೆ ಎಇಇ ನರೇಂದ್ರ ಬಾಬು, ಎಇ ವೀರಪ್ಪ, ಇಇ ವಿಜಯಕುಮಾರ್​ ಹಾಗೂ ಶಿವಮೊಗ್ಗದಲ್ಲಿರುವ ಎಸ್ ಇ ಜಗದೀಶ್ ವಿರುದ್ಧ ಶ್ರೀರಾಮಸೇನೆ ಕಾರ್ಯಕರ್ತರು ದೂರು ದಾಖಲಿಸಿದ್ದರು.

ಶ್ರೀರಾಮ ಸೇನೆ ಅಧ್ಯಕ್ಷ ಮಣಿ ಮಾತನಾಡಿ, ಅಧಿಕಾರಿಗಳು ಗುತ್ತಿಗೆದಾರರಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ನರೇಂದ್ರಬಾಬು ಹಣ ಪಡೆದಿರುವ ವಿಡಿಯೋ ಲಭ್ಯವಾಗಿದೆ. ಸಂಬಂಧಪಟ್ಟ ಸಚಿವರು ತಕ್ಷಣ ಈ ನಾಲ್ಕು ಅಧಿಕಾರಿಗಳನ್ನು ಅಮಾನತು ಮಾಡ್ಬೇಕು ಎಂದು ಆಗ್ರಹಿಸಿದರು.

ಕಳೆದ ಹಲವು ದಿನಗಳಿಂದ ನರೇಂದ್ರ ಬಾಬು ಇಲ್ಲಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಕಾಮಗಾರಿ ನಡೆಯುತ್ತಿವೆ. 115ಕ್ಕೂ ಹೆಚ್ಚು ಗುತ್ತಿಗೆದಾರರು ಕೆಲಸ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಕೆಲವರು ಸರ್ಕಾರಿ ಹಾಸ್ಟೆಲ್​ಗಳಿಗೆ ಕಟ್ಟಡಗಳನ್ನು ಬಾಡಿಗೆ ಕೊಡುತ್ತಾರೆ. ಹೀಗೆ ಬಾಡಿಗೆ ಕೊಡಬೇಕಾದ್ರೆ ನರೇಂದ್ರಬಾಬು ಅವರು ಪರಿಶೀಲನೆ ಮಾಡಿ ಅದು ಯೋಗ್ಯವಿದೆಯಾ? ಅಲ್ಲಿ ಮಕ್ಕಳಿಗೆ ವಾಸಿಸಲು ಗಾಳಿ ಬೆಳಕು ಅಗತ್ಯಕ್ಕೆ ತಕ್ಕಂತೆ ಬರುತ್ತಿದೆಯೇ ಎಂಬಿತ್ಯಾದಿ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ಕೊಡಬೇಕು. ಇಂತಹ ಪ್ರಮಾಣ ಪತ್ರಕೊಡಲು ಲಂಚ ಕೇಳಿದ್ದು ವಿಡಿಯೋದಿಂದ ಸ್ಪಷ್ಟವಾಗುತ್ತದೆ ಎಂದರು.

ಇದನ್ನೂ ಓದಿ: ಹೆಚ್ಎಎಲ್​ನ 833 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಲೀಸ್‌ಗೆ ಕೊಟ್ಟಿದ್ರು!

Last Updated : Feb 16, 2023, 9:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.