ETV Bharat / state

ದಾವಣಗೆರೆ: ಶವಾಗಾರದ ಮುಂಭಾಗ ಎರಡು ಗುಂಪುಗಳ ನಡುವೆ ಮಾರಾಮಾರಿ - ದಾವಣಗೆರೆ ಜಿಲ್ಲಾಸ್ಪತ್ರೆ ಎದುರು ಗಲಾಟೆ

ದೀಪಾವಳಿ ಹಬ್ಬಕ್ಕೆ ಮಕ್ಕಳು ಹಾಗೂ ಹೆಂಡತಿಯನ್ನು ಕರೆತರಲು ಶಿವನಾಯ್ಕ್​​ ನಾಗರಕಟ್ಟೆ ಗ್ರಾಮಕ್ಕೆ ತೆರಳಿದ್ದಾನೆ. ಆದರೆ, ಪತ್ನಿ ಮನೆಯಲ್ಲಿಯೂ ಗಲಾಟೆಯಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದು ವಿಷ ಕುಡಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

fighting-between-two-groups-in-davanagere
ಶವಗಾರದ ಮುಂಭಾಗ ಎರಡು ಗುಂಪುಗಳ ನಡುವೆ ಮಾರಾಮಾರಿ
author img

By

Published : Nov 3, 2021, 6:07 PM IST

Updated : Nov 4, 2021, 3:15 PM IST

ದಾವಣಗೆರೆ: ಶವಾಗಾರದ ಮುಂಭಾಗ ಎರಡು ಗುಂಪುಗಳು ಹೊಡೆದಾಡಿಕೊಂಡಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದಿದೆ.

ಜಿಲ್ಲೆಯ ನಾಗರಕಟ್ಟೆ ಹಾಗೂ ಹಳವುದರ ಲಂಬಾಣಿಹಟ್ಟಿ ಗ್ರಾಮಸ್ಥರ ನಡುವೆ ಜಗಳ ನಡೆದಿದೆ. ಲಂಬಾಣಿಹಟ್ಟಿ ಗ್ರಾಮದ ಶಿವನಾಯ್ಕ್ ಹಾಗೂ ಪತ್ನಿ ರೂಪಾಬಾಯಿ ನಡುವೆ ಜಗಳ ನಡೆದಿತ್ತು. ಹೀಗಾಗಿ, ಆಕೆ ಗಂಡನನ್ನು ಬಿಟ್ಟು ನಾಗರಕಟ್ಟೆಯ ತನ್ನ ತವರು ಮನೆಗೆ ಸೇರಿದ್ದಳು.

ದೀಪಾವಳಿ ಹಬ್ಬಕ್ಕೆ ಮಕ್ಕಳು ಹಾಗೂ ಹೆಂಡತಿಯನ್ನ ಕರೆತರಲು ಶಿವನಾಯ್ಕ್​​ ನಾಗರಕಟ್ಟೆ ಗ್ರಾಮಕ್ಕೆ ತೆರಳಿದ್ದಾನೆ. ಆದರೆ, ಪತ್ನಿ ಮನೆಯಲ್ಲಿಯೂ ಗಲಾಟೆಯಾಗಿದೆ. ಈ ಹಿನ್ನೆಲೆಯಲ್ಲಿ ಆತ ಮನನೊಂದು ವಿಷ ಕುಡಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಎರಡು ಗುಂಪುಗಳ ನಡುವೆ ಮಾರಾಮಾರಿ

ಆದರೆ, ಮೃತ ವ್ಯಕ್ತಿಯನ್ನು ಹೊಡೆದು ಕೊಲೆ‌ಮಾಡಿದ್ದಾರೆ ಎಂದು ಶಿವನಾಯ್ಕ್ ಕುಟುಂಬಸ್ಥರು ಆರೋಪ ಮಾಡಿದ್ದರು. ಅಲ್ಲದೇ, ರೂಪಬಾಯಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದರು ಎನ್ನಲಾಗಿದೆ. ಹೀಗಾಗಿ, ಶಿವನಾಯ್ಕ್ ಕುಟುಂಬದವರ ಮೇಲೆ ರೂಪಾಬಾಯಿ ಕುಟುಂಬಸ್ಥರು ಹಲ್ಲೆ‌ ನಡೆಸಿದ್ದಾರೆ. ಶವಾಗಾರದ ಮುಂದೆಯೇ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಡಾವಣೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಅಕ್ರಮ ಸಂಬಂಧ ಗ್ರಾಮದಲ್ಲಿ ಬಹಿರಂಗ: ಕೋಲಾರದಲ್ಲಿ ಕತ್ತು ಕೊಯ್ದು ವ್ಯಕ್ತಿಯ ಕೊಲೆ

Last Updated : Nov 4, 2021, 3:15 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.