ದಾವಣಗೆರೆ: ಮೀಸಲಾತಿ ಬಗ್ಗೆ ಅವರ ಹೋರಾಟ ನ್ಯಾಯಬದ್ದವಾಗಿದೆ ಎಂದು ಮೀಸಲಾತಿ ಹೋರಾಟಗಾರರ ಪರ ಸಿಎಂ ಯಡಿಯೂರಪ್ಪ ಬ್ಯಾಟ್ ಬೀಸಿದ್ದಾರೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಆಯೋಜನೆ ಮಾಡಿರುವ ಸೇವಾಲಾಲ್ ಜಯಂತಿ ಗೆ ಆಗಮಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ, ವಾಲ್ಮೀಕಿ ಸಮಾಜ ಸೇರಿದಂತೆ ಹಲವು ಸಮಾಜದವರು ಮೀಸಲಾತಿ ಕೇಳುತ್ತಿದ್ದಾರೆ. ಇದರ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ನ್ಯಾಯಬದ್ಧವಾಗಿ ಯಾವ ಮಾರ್ಗದಲ್ಲಿ ಮೀಸಲಾತಿ ನೀಡಬೇಕೆಂಬುದನ್ನು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಓದಿ: 'ಟೂಲ್ಕಿಟ್' ಅಪ್ಲೋಡ್ ಆರೋಪ: ದಿಶಾ ರವಿ ಅರೆಸ್ಟ್, ಐದು ದಿನ ಪೊಲೀಸ್ ಕಸ್ಟಡಿಗೆ