ದಾವಣಗೆರೆ: ಮದ್ಯ ಸೇವಿಸಲು ಹಣಕ್ಕಾಗಿ ಪೀಡಿಸುತ್ತಿದ್ದ ತಂದೆಯನ್ನು ಮಗ ಕೊಲೆಗೈದಿರುವ ಘಟನೆ ದಾವಣಗೆರೆ ತಾಲೂಕಿನ ಒಡ್ಡಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರಪ್ಪ (61) ಕೊಲೆಯಾದ ವೃದ್ಧ ತಂದೆ ಎಂದು ಗುರುತಿಸಲಾಗಿದೆ. ಸಿದ್ದೇಶ್ (21) ತಂದೆಯನ್ನು ಕೊಲೆ ಮಾಡಿದ ಮಗ. ಕುಡಿತಕ್ಕೆ ವ್ಯಸನಿಯಾಗಿದ್ದ ರಾಮಚಂದ್ರಪ್ಪ ಹಣಕ್ಕಾಗಿ ಮಗನನ್ನು ಪೀಡಿಸುತ್ತಿದ್ದರಿಂದ ಆರೋಪಿ ಹೊಲದಲ್ಲಿ ದೊಣ್ಣೆಯಿಂದ ತನ್ನ ತಂದೆಯ ತಲೆಗೆ ಹೊಡೆದಿದ್ದಾನೆ.
ಓದಿ: ಕೋಲಾರದ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರಿಂದ ದಾಂಧಲೆ ಪ್ರಕರಣ: 119 ಜನರ ಬಂಧನ
ಹಲ್ಲೆಗೊಳಗಾದ ರಾಮಚಂದ್ರಪ್ಪನನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಲ್ಲೆ ನಡೆಸಿದ ಸಿದ್ದೇಶ್ನ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಸಿದ್ದೇಶ್ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.