ETV Bharat / state

ರೈತರ ನಿರಂತರ ಪ್ರತಿಭಟನೆಗೆ ಮಣಿದ ಸರ್ಕಾರ.. ಭದ್ರಾ ಬಲ ಎಡದಂಡೆ ನಾಲೆಗಳಿಗೆ ನೀರು ಬಿಡುಗಡೆ

ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ರೈತರು ಭತ್ತದ ಬೆಳೆಗೆ ನೀರು ಬಿಡಬೇಕೆಂದು ಪ್ರತಿಭಟನೆ ಕೈಗೊಂಡು ಸರ್ಕಾರದ ಮನಸೆಳೆದಿದ್ದರು. ರೈತರ ಹೋರಾಟಕ್ಕೆ ಮಣಿದ ಸರ್ಕಾರ ಹಾಗೂ ಕಾಡಾ ಇಲಾಖೆಯೂ ಇದೀಗ ರೈತರ ಭತ್ತದ ಬೆಳೆಗೆ ಉಳಿದಿರುವ 43 ದಿನಗಳ ಕಾಲ ನೀರು ಹರಿಸಲು ಆದೇಶಿಸಿದೆ.

Farmers protest demand release water to paddy crop
ಭತ್ತದ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ
author img

By ETV Bharat Karnataka Team

Published : Sep 26, 2023, 9:23 PM IST

ದಾವಣಗೆರೆ: ಭತ್ತದ ಬೆಳೆಗೆ ಭದ್ರಾ ಜಲಾಶಯದ ನೀರು ಕಡಿತಗೊಳಿಸಿದ್ದರಿಂದ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ರೈತರು ನಿರಂತರ ಹೋರಾಟ ಕೈಗೊಂಡು ಸರ್ಕಾರದ ಮನಸೆಳೆದಿದ್ದರು. ರೈತರ ಹೋರಾಟಕ್ಕೆ ಮಣಿದ ಸರ್ಕಾರ ಹಾಗೂ ಕಾಡಾ ಇಲಾಖೆಯು ಇದೀಗ ಭತ್ತದ ಬೆಳೆಗೆ ಉಳಿದಿರುವ 43 ದಿನಗಳ ಕಾಲ ನೀರು ಹರಿಸಲು ಆದೇಶಿಸಿದೆ. ರೈತರ ಹೋರಾಟಕ್ಕೆ ಜಿಲ್ಲೆಯಲ್ಲಿ ಫಲ ಸಿಕ್ಕಂತೆ ಆಗಿದೆ.

ನೀರಿ ಹರಿಸುವಂತೆ ಕಳೆದ ಕೆಲ ದಿನಗಳ ಹಿಂದೆ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ರೈತರು ದಾವಣಗೆರೆ ಬಂದ್​​ಗೆ ಕರೆ ನೀಡಿದ್ದರು. ದಾವಣರೆಗೆ ಬಂದ್​ಗೆ​ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ರೈತರ ಹೋರಾಟ ಸರ್ಕಾರದ ಗಮನಸೆಳೆಯಿತು. ಇದೀಗ ಸರ್ಕಾರ ಭದ್ರಾ ಜಲಾಶಯದಿಂದ ನೀರು ಹರಿಸಿದೆ. 2023-24 ನೇ ಸಾಲಿನಲ್ಲಿ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರನ್ನು ಹರಿಸಲಾಗುವುದು ಎಂದು ಕ.ನಿ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ತಿಳಿಸಿದ್ದಾರೆ.

ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 15 ರ ವರೆಗೆ ಒಟ್ಟು 20 ದಿನಗಳು ಹಾಗೂ ಅಕ್ಟೋಬರ್ 26 ರಿಂದ ನವೆಂಬರ್ 17 ರ ವರೆಗೆ ಒಟ್ಟು 23 ದಿನಗಳು ನೀರನ್ನು ಹರಿಸಲಾಗುವುದೆಂದು ಕಾಡಾದ ಅದೇಶದಲ್ಲಿ ಉಲ್ಲೇಖಿಸಿದೆ. ಇನ್ನು ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಸಲಾಗಿದೆ. ಅಕ್ಟೋಬರ್ 1ರ ವರೆಗೆ ಒಟ್ಟು 15 ದಿನಗಳು ನೀರನ್ನು ಹರಿಸಲಾಗುತ್ತದೆ. ನಂತರ ಅಕ್ಟೋಬರ್ 12 ರಿಂದ 26 ರ ವರೆಗೆ ಒಟ್ಟು 15 ದಿನ ಹಾಗೂ ನವೆಂಬರ್ 6 ರಿಂದ 17 ರ ವರೆಗೆ ಒಟ್ಟು 12 ದಿನಗಳು ನೀರನ್ನು ಹರಿಸಲಾಗುದು ಎಂದು ತಿಳಿಸಿದ್ದಾರೆ.

15 ದಿನಗಳ ಕಾಲ ಜಿಲ್ಲೆಯ ರೈತರಿಂದ ಪ್ರತಿಭಟನೆ: ದಾವಣಗೆರೆ ಹಾಗೂ ಹರಿಹರ ತಾಲೂಕಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೂರು ದಿನಗಳಲ್ಲಿ 40 ದಿನಗಳ ಕಾಲ ನೀರು ಹರಿಸಿ ಕಡಿತಗೊಳಿಸಲಾಗಿತ್ತು. ಇದರಿಂದ ಹೋರಾಟದ ಹಾದಿ ಹಿಡಿದಿದ್ದ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬಂದ್ ಮಾಡಲು ಮುಂದಾಗಿದ್ದಾಗ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದಿದ್ದರು. ಇದನ್ನೂ ವಿರೋಧಿಸಿ ದಾವಣಗೆರೆ ಬಂದ್​​​​ ಗೆ ಕರೆ ನೀಡಿ ಭಾರತೀಯ ರೈತ ಒಕ್ಕೂಟ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಹೋರಾಟಕ್ಕೆ ಮಣಿದ ಸರ್ಕಾರ 43 ದಿನಗಳ ಕಾಲ ನೀರು ಹರಿಸಲು ಆದೇಶ ಹೊರಡಿಸಿದೆ.

ಇದನ್ನೂಓದಿ:ಕಾವೇರಿ ವಿಚಾರವಾಗಿ ಪ್ರಧಾನಿ ಮಧ್ಯಸ್ಥಿಕೆಯಿಂದ ಏನು ಆಗುವುದಿಲ್ಲ: ಸಂಸದ ಬಿ ವೈ ರಾಘವೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.