ದಾವಣಗೆರೆ: ಕೃಷಿ ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ದೇಶವ್ಯಾಪಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ದಾವಣಗೆರೆಯಲ್ಲಿ "ಕರ ನಿರಾಕರಣೆ ಚಳವಳಿ'' ನಡೆಸಲಾಗುತ್ತಿದೆ.
ಹೆಬ್ಬಾಳ ಟೋಲ್ ನಲ್ಲಿ ಟೋಲ್ ಕಟ್ಟದೇ ವಾಹನಗಳನ್ನು ಉಚಿತವಾಗಿ ಬಿಡಿಸುವ ಮೂಲಕ ಪ್ರತಿಭಟನಾ ನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು. ಟೋಲ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದ ಪ್ರತಿಭಟನಾಕಾರರು, ವಾಹನಗಳಿಂದ ತೆರಿಗೆ ತೆಗೆದುಕೊಳ್ಳದೇ ಹೋಗಲು ಬಿಟ್ಟು ಕರ ನಿರಾಕರಣೆ ಚಳವಳಿ ನಡೆಸಿದರು.
ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಸೇರಿದಂತೆ ಹೊಸ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಕೇಂದ್ರ ಸರ್ಕಾರ ರೈತರ ಬದುಕಿಗೆ ಕೊಡಲಿ ಪೆಟ್ಟು ನೀಡುವುದನ್ನು ಬಿಟ್ಟು ಅವರ ಹಿತ ಕಾಪಾಡಲು ಮುಂದಾಗಬೇಕು. ತನ್ನ ಹಠಮಾರಿ ಧೋರಣೆ ಬಿಟ್ಟು ರೈತರ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.