ETV Bharat / state

ರೈತರು ಕೊನೆಯ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಿ: ಜಿಲ್ಲಾಧಿಕಾರಿ - ದಾವಣಗೆರೆ ಜಿಲ್ಲಾಧಿಕಾರಿ ಸಭೆ

ದಾವಣಗೆರೆ ಜಿಲ್ಲಾಡಳಿತ ಕಚೇರಿ ಸಭಾಂಗಣಲ್ಲಿ ನಡೆದ ರೈತ ಉತ್ಪಾದಕ ಸಂಸ್ಥೆಗಳ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ಹಾಗೂ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನ ಕುರಿತ ಸಭೆ ನಡೆಯಿತು.

farmers-insure-crop-by-last-date-district-collector
ಜಿಲ್ಲಾಧಿಕಾರಿ
author img

By

Published : Nov 20, 2020, 3:31 AM IST

ದಾವಣಗೆರೆ: 2020-21ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸುವ ಸಂಬಂಧ ಹೆಚ್ಚಿನ ಪ್ರಚಾರ ನೀಡಿ, ವಿಮೆ ಮಾಡಿಸಬೇಕೆಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣಲ್ಲಿ ನಡೆದ ರೈತ ಉತ್ಪಾದಕ ಸಂಸ್ಥೆಗಳ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ಹಾಗೂ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ದಾವಣಗೆರೆ, ಹರಿಹರ, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿಗೆ ಹೊಸದಾಗಿ 4 ರೈತ ಉತ್ಪಾದಕ ಸಂಸ್ಥೆಗಳ ರಚನೆ ಮಾಡುವ ಗುರಿ ಹೊಂದಲಾಗಿದೆ. ದಾವಣಗೆರೆ ತಾಲೂಕಿನಲ್ಲಿ ತೆಂಗು, ಹರಿಹರದಲ್ಲಿ ವೀಳ್ಯದೆಲೆ, ಹೊನ್ನಾಳಿಯಲ್ಲಿ ಬಾಳೆ ಮತ್ತು ತರಕಾರಿ, ನ್ಯಾಮತಿ ತಾಲೂಕಿನಲ್ಲಿ ಶೇಂಗಾ ಬೆಳೆಯಲ್ಲಿ ಮೌಲ್ಯವರ್ಧನೆಗಾಗಿ ರೈತ ಉತ್ಪಾದಕ ಸಂಸ್ಥೆಯನ್ನು ರಚಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.

ಕೊನೆಯ ದಿನಾಂಕದೊಳಗೆ ರೈತರು ತಮ್ಮ ಬೆಳೆ ವಿಮೆಯನ್ನು ನೋಂದಣೆ ಮಾಡಿಕೊಳ್ಳಲು ಕೋರಿದ ಅವರು 2019-20ನೇ ಸಾಲಿನಲ್ಲಿ 25,734 ರೈತರು ರೂ. 385.98 ಲಕ್ಷ ಪ್ರೀಮಿಯಂನ್ನು ಪಾವತಿಸಿ ನೋಂದಣಿ ಮಾಡಿಕೊಂಡಿದ್ದು, ರೂ. 1,536.14 ಲಕ್ಷ ಬೆಳೆ ವಿಮಾ ಮೊತ್ತ ರೈತರ ಖಾತೆಗೆ ಜಮಾವಣೆ ಮಾಡಿರುವುದಾಗಿ ತಿಳಿಸಿದರು.

ತೋಟಗಾರಿಕೆ ಬೆಳೆಗಳಲ್ಲಿ 6,563 ರೈತರು ಬೆಳೆ ವಿಮೆ ಮಾಡಿಸಿದ್ದು, ಒಟ್ಟು ರೂ. 346.93 ಲಕ್ಷ ಪ್ರೀಮಿಯಂ ಮೊತ್ತ ಪಾವತಿಸಿದ್ದು, ರೂ. 1,257.42 ಲಕ್ಷ ಬೆಳೆ ವಿಮೆ ರೈತರ ಖಾತೆಗೆ ಜಮೆ ಆಗಿರುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.