ದಾವಣಗೆರೆ: ಸಿಎಂ ಸಿದ್ದರಾಮಯ್ಯನವರು ಕೂಡು ಕೃಷಿ ಕಾಯ್ದೆ ವಾಪಸ್ ಪಡೆಯಲು ಚರ್ಚೆ ಮಾಡಿದ್ದರು. ಅವರ ಚುನಾವಣ ಪ್ರಣಾಳಿಕೆಯಲ್ಲೂ ಇದನ್ನು ಹಿಂಪಡೆಯುವ ಬಗ್ಗೆ ಘೋಷಣೆ ಮಾಡಲಾಗಿತ್ತು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆ ಹಾಗು ಭೂಸುಧಾರಣಾ ಕಾಯ್ದೆ ಅತ್ಯಂತ ಅಪಾಯಕಾರಿ. ಅದನ್ನು ವಾಪಸ್ ಪಡೆಯಲು ಸಿಎಂ ಸಿದ್ದರಾಮಯ್ಯನವರು ಏಕೆ ಸದನದಲ್ಲಿ ಮುಂದಾಗಲಿಲ್ಲ, ರದ್ದುಪಡಿಸಲು ಈಗಾಗಲೇ ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ ಎಂದರು.
ಇದನ್ನು ತಕ್ಷಣ ವಾಪಸ್ ಪಡೆಯಬೇಕೆಂಬ ಬೇಡಿಕೆ ಇಟ್ಟಿದ್ದೇವೆ. 1961 ಭೂಸುಧಾರಣಾ ಕಾಯ್ದೆ ಏನಿದೆಯೋ ಇದಕ್ಕೆ ವಿಚಾರ ನಿಬಂಧನೆಗಳನ್ನು ಇಟ್ಟು ಅಂದು ಮುಂದುವರೆಸಿದ್ದರು. ಇದನ್ನು ವಾಪಸ್ ಪಡೆಯಲು ಸಿದ್ದರಾಮಯ್ಯನವರು ಪ್ರಯತ್ನಪಡಬೇಕು. ಇದು ವ್ಯಾಪಾರೀಕರಣ ಆಗಬಾರದು. ಕೃಷಿ ಭೂಮಿ ಕೃಷಿ ಭೂಮಿಯಾಗಿರಬೇಕು, ಮುಖ್ಯಮಂತ್ರಿಗಳು ಜರೂರ್ ಆಗಿ ಕಾಯ್ದೆಗಳನ್ನು ರದ್ದು ಮಾಡಿ ಆದೇಶ ಹೊರಡಿಸುತ್ತಾರೆಂದು ನಂಬಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಈ ಕಾಯ್ದೆಗಳನ್ನು ರದ್ದು ಪಡಿಸಲು ಪರಿಶೀಲನೆ ಮಾಡ್ತಿದ್ದೇವೆ ಎಂದು ಸಿಎಂ ಹೇಳಿದ್ದರು. ಆದರೆ ಪರಿಶೀಲನೆ ಎಂಬ ಪದ ಕೈಬಿಟ್ಟು ಮೋದಿಯವರು ಹೇಗೆ ಯಾರಿಗೆ ಹೇಳದೆ, ಕೇಳದೆ ಕಾಯ್ದೆಗಳನ್ನು ಜಾರಿಗೆ ತಂದರೋ ಹಾಗೇ ಈ ಕಾಯ್ದೆಗಳನ್ನು ರದ್ದುಪಡಿಸಿ ಎಂದು ಒತ್ತಾಯಿಸಿದರು.
ಮೊದಲು ಎಂಎಸ್ಪಿಯನ್ನು ವೈಜ್ಞಾನಿಕವಾಗಿ ಸರಿಯಾಗಿರಬೇಕು. ಮೋದಿಯವರು 2013 ರಲ್ಲಿ ಪ್ರಧಾನಿಯಾಗುವ ಮುನ್ನ ದೇಶದಲ್ಲಿ 300 ರ‍್ಯಾಲಿಗಳಲ್ಲಿ ನನ್ನ ಸರ್ಕಾರ ಬಂದರೆ ರೈತರಿಗೆ ಎಂಎಸ್ಪಿ ಕುರಿತಂತೆ ಸ್ವಾಮಿನಾಥನ್ ವರದಿ ಪ್ರಕಾರ ಬೆಲೆ ನಿಗದಿ ಮಾಡುತ್ತೇವೆ. ರೈತನ ಆದಾಯ ದುಪ್ಪಟ್ಡು ಮಾಡುತ್ತೇವೆ ಎಂದಿದ್ದರು. ಆದರೆ ಅದು ಆಗಲೇ ಇಲ್ಲ, ಎಂಎಸ್ಪಿ ಕುರಿತ ಸ್ವಾಮಿನಾಥನ್ ವರದಿ ಮಾನದಂಡ ಆಗಬೇಕು ಎಂದು ಸರ್ಕಾರಕ್ಕೆ ಕೋಡಿಹಳ್ಳಿ ಮನವಿ ಮಾಡಿದರು.
ಕೃಷಿ ಭೂಮಿ ಸಾವಿರಾರು ವರ್ಷಗಳಿಂದ ಜನರ ಊಟದ ಬಟ್ಟಲು: ಕೃಷಿ ಭೂಮಿ ನಮಗೆ ಊಟ ಕೊಡುತ್ತದೆ. ಇದೇ ಕೃಷಿ ಭೂಮಿ ನಮ್ಮ ಮಕ್ಕಳಿಗೂ ಊಟ ನೀಡುತ್ತದೆ. ಇದು ಸಾವಿರಾರು ವರ್ಷಗಳಿಂದ ಜನರ ಊಟದ ಬಟ್ಟಲು. ಇದನ್ನು ಜೋಪಾನ ಮಾಡೋದು ನಮ್ಮ ನಿಮ್ಮ ಜವಾಬ್ದಾರಿ. ಹಿಂದಿನ ಸರ್ಕಾರಗಳು ಕಾರ್ಪೋರೆಟ್ ಕಂಪನಿಗಳು ಎಂಎನ್ಸಿ ಕಂಪನಿಗಳು ಬಂದು ಕೃಷಿ ಮಾಡಲಿ ಎಂದು ಹೇಳಿದ್ದವು. ಆ ರೀತಿ ಕೃಷಿ ಮಾಡಲು ಇದು ಅಮೆರಿಕ, ಜಪಾನ್, ಕೊರಿಯಾ, ಬ್ರಿಟನ್ ದೇಶವಲ್ಲ.
ಇದು 140 ಜನ ಕೋಟಿ ಇರುವ ದೇಶ, ಆಹಾರ ಭದ್ರತೆಯಲ್ಲಿ ಏರುಪೇರಾದರೆ ನೂರಾರು ಕೋಟಿ ಜನ ದಿನ ಸಾಯುವ ಪರಿಸ್ಥಿತಿ ನಿರ್ಮಾಣ ಆಗಲಿದೆ. ಈ ಜವಾಬ್ದಾರಿಯನ್ನು ಎಂಎನ್ಸಿ, ಕಾರ್ಪೋರೇಟ್ ಕಂಪನಿಗಳ ಕೈಗೆ ಹೋಗಬಾರದು. ಅವರು ಕಮರ್ಷಿಯಲ್ ಜನಗಳು, ಲಾಭಕ್ಕಾಗಿ ಮಾಡುವವರು. ಆದರೆ, ರೈತರು ಲಾಭ ಇಲ್ಲದೆ ನಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:ಅಮರನಾಥ ಯಾತ್ರೆಗೆ ತೆರಳಿದ್ದವರು ಸುರಕ್ಷಿತ: ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ ಶಾಸಕ ಬಸವರಾಜು ವಿ ಶಿವಗಂಗಾ