ದಾವಣಗೆರೆ: ಸಾಲಬಾಧೆ ಹಿನ್ನೆಲೆ ಯುವ ರೈತ ನೇಣಿಗೆ ಶರಣಾಗಿರುವ ಘಟನೆ ಜಗಳೂರು ತಾಲ್ಲೂಕಿನ ಉಜ್ಜಪ್ಪ ವಡೆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.
ರವಿಕುಮಾರ (30) ನೇಣು ಹಾಕಿಕೊಂಡು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಸಿದ್ದಪ್ಪ ಅವರು ಕೃಷಿ ಉದ್ದೇಶಕ್ಕೆ ಬ್ಯಾಂಕ್ ಹಾಗೂ ಖಾಸಗಿಯಾಗಿ 3 ಲಕ್ಷ ಸಾಲ ಮಾಡಿದ್ದರು. ಬಳಿಕ ರವಿಕುಮಾರ ಕೂಡ ಕೃಷಿ ಕಾರ್ಯಕ್ಕೆ ಸಾಲ ಮಾಡಿದ್ದರು ಎನ್ನಲಾಗಿದ್ದು, ತಂದೆ ಇತ್ತೀಚೆಗೆ ಮೃತಪಟ್ಟಿದ್ದರು.
ಇನ್ನು ಕಳೆದ ವರ್ಷ ಮಳೆ ಬಾರದೆ ಬೆಳೆ ನಷ್ಟವಾಗಿತ್ತು. ಈ ಸಲವೂ ಸೈನಿಕ ಹುಳುಬಾಧೆಯಿಂದ ಬೆಳೆಹಾನಿಗೀಡಾಗಿತ್ತು. ಈ ಹಿನ್ನೆಲೆ ತೀವ್ರ ಮನನೊಂದಿದ್ದ ರವಿಕುಮಾರ್ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.