ETV Bharat / state

ದಾವಣಗೆರೆ: ಸಾಲಬಾಧೆ ತಾಳಲಾರದೇ ವಿಷ ಸೇವಿಸಿ ರೈತ ಆತ್ಮಹತ್ಯೆ - Farmer committed suicide due to crop lose

ವಿವಿಧ ಬ್ಯಾಂಕ್​ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ‌ಮಾಡಿದ್ದ ರೈತ ಮಂಜಪ್ಪ ಬೆಳೆ ಕೈಕೊಟ್ಟ ಹಿನ್ನೆಲೆ ಮನನೊಂದು ಆತ್ಮಹತ್ಯೆ‌ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ನಡೆದಿದೆ.

ದಾವಣಗೆರೆ
ದಾವಣಗೆರೆ
author img

By

Published : Jul 19, 2022, 7:09 PM IST

Updated : Jul 19, 2022, 7:15 PM IST

ದಾವಣಗೆರೆ: ವಿಪರೀತ ಮಳೆಯಿಂದಾಗಿ ಟೊಮೇಟೊ, ಬೆಂಡೆಕಾಯಿ, ಜವಳೆಕಾಯಿ ಬೆಳೆ ಹಾಳಾಗಿದ್ದರಿಂದ ಹಾಗೂ ಸಾಲಬಾಧೆ ತಾಳಲಾರದೇ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ವಿಷ ಕುಡಿದು ಒದ್ದಾಡುತ್ತಿರುವ ವಿಡಿಯೋವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಭಾನುವಳ್ಳಿ ಗ್ರಾಮದ ಮಂಜಪ್ಪ (50) ಆತ್ಮಹತ್ಯೆ ಮಾಡಿಕೊಂಡ ರೈತ. ಎರಡು ಎಕರೆಯಲ್ಲಿ ರೈತ ಮಂಜಪ್ಪ ಬೆಳೆದ ಬೆಳೆ ಸಂಪೂರ್ಣ ಹಾಳಾದ ಹಿನ್ನೆಲೆ ಜಮೀನಿನಲ್ಲಿ ವಿಷ ಸೇವನೆ ಮಾಡಿದ್ದರು. ನಂತರ ಅವರು ಒದ್ದಾಡುತ್ತಿದ್ದರಿಂದ ಸ್ಥಳೀಯರು ಟ್ರ್ಯಾಕ್ಟರ್ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ವಿವಿಧ ಬ್ಯಾಂಕ್​ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ‌ಮಾಡಿದ್ದ ರೈತ ಮಂಜಪ್ಪ ಬೆಳೆ ಕೈಕೊಟ್ಟ ಹಿನ್ನೆಲೆ ಮನನೊಂದು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಏಳು ವರ್ಷದ ಹಿಂದಿನ ಕೇಸ್​ಗೆ ಮರುಜೀವ.. ಈಗ ಶವಕ್ಕಾಗಿ ಕೆರೆ ನೀರನ್ನೇ ಖಾಲಿ ಮಾಡುತ್ತಿರುವ ಪೊಲೀಸರು!

Last Updated : Jul 19, 2022, 7:15 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.