ದಾವಣಗೆರೆ: ಸಾಲ ಬಾಧೆ ಹಿನ್ನೆಲೆ ಕೆರೆಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ನಡೆದಿದೆ.
ದಾವಣಗೆರೆಯ ವಿನೋಬನಗರದ ನಿವಾಸಿ 50 ವರ್ಷದ ಹೆಚ್. ಜಿ. ಪ್ರಕಾಶ್ ಆತ್ಮಹತ್ಯೆಗೆ ಶರಣಾದವರು. ನಗರದ ಆರ್ಟಿಒ ಕಚೇರಿಯ ಬಳಿ ಟೀ ಅಂಗಡಿ ನಡೆಸುತ್ತಿದ್ದ ಅವರು ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿ ಗ್ರಾಮದ ಜಮೀನಿನಲ್ಲಿ 4 ಲಕ್ಷ ರೂಪಾಯಿಗೂ ಅಧಿಕ ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಆದರೆ, ನಷ್ಟಕ್ಕೀಡಾಗಿದ್ದರು.
ಕೃಷಿಗಾಗಿ 4 ಲಕ್ಷದವರೆಗೂ ಸಾಲ ಮಾಡಿದ್ದ ಇವರು ಸಾಲ ಬಾಧೆಯಿಂದ ನೊಂದು ಸೂಳೆಕೆರೆಯ ದಡದಲ್ಲಿ ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಮೃತದೇಹದ ಹುಡುಕಾಟ ಮುಂದುವರಿದಿದೆ. ಸಾಗರಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.