ದಾವಣಗೆರೆ : ವಚನಾನಂದ ಶ್ರೀ ಪಿಹೆಚ್‌ಡಿ, ಫಿಲಾಸಫಿ ಮಾಡಿದ್ದಾರಾ, ಕಾಶಿಯಲ್ಲಿ ಪಾಂಡಿತ್ಯ ಪಡೆದಿದ್ದಾರಾ, ಸುಮ್ಮನೆ ಇದ್ದು ಬಿಡಿ ನನ್ನನು ಸಂಘರ್ಷಕ್ಕೆ ಇಳಿಸಬೇಡಿ, ನಾನು ಒಳ್ಳೆಯವರಿಗೆ ಒಳ್ಳೆಯವನು ಎಂದು ಮಾಜಿ ಶಾಸಕ ಶಿವಶಂಕರ್ ಹರಿಹರ ಪಂಚಮಸಾಲಿ ಸಮಾಜದ ವಚನಾನಂದ ಸ್ವಾಮೀಜಿಗೆ ಎಚ್ಚರಿಕೆ ನೀಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇದೀಗ ಕೂಡಲ ಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ 2ಎ ಮೀಸಲಾತಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಇದಕ್ಕೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಕೈಜೋಡಿಸದ ಹಿನ್ನೆಲೆ ಇದು ಮಾಜಿ ಶಾಸಕರು ಹಾಗೂ ವಚನಾನಂದ ಶ್ರೀಗಳ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣ ಆಗಿದೆ.
ಪಂಚಮಸಾಲಿ ಸಮಾಜದ ಎಲ್ಲಾ ಶಾಸಕರನ್ನ, ಯತ್ನಾಳ್ ಹಾಗೂ ಮಾಜಿ ಸಚಿವರು ಸೇರಿದಂತೆ ಎಲ್ಲಾ ಸಮಾಜದವರನ್ನ ಒಗ್ಗೂಡಿಸಿಕೊಂಡು ಹರಿಹರದಲ್ಲಿ ಪರ್ಯಾಯ ಪೀಠ ಸ್ಥಾಪನೆ ಮಾಡುತ್ತೇನೆ, ಇಲ್ಲವೇ ಕಾಲವೇ ನಿರ್ಣಯ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಚನಾನಂದ ಸ್ವಾಮೀಜಿಗಳು ಭವಿಷ್ಯದಲ್ಲಿ ಸರಿಯಾಗಿ ನಡೆದುಕೊಂಡರೆ ಸರಿ, ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಹರಿದ್ವಾರಕ್ಕೆ ಹೋಗಿ ನೀವು ಏನು ಮಾಡಿದ್ರಿ ಅಂತಾ ನಂಗೆ ಗೊತ್ತು, ಡಿಜೆ ಹಾಕಿ ಕುಣಿದಿದ್ದು ಕೂಡ ನಾಚಿಗೆ ಸಂಗತಿ.
ನಿಮ್ಮ ಇತಿಹಾಸ ಕೆದಕಿದ್ರೆ ನಿಮ್ಮ ಕಾಲ ಮೇಲೆ ಚಪ್ಪಡಿ ಎಳೆದುಕೊಂಡಂತೆ ನನ್ನನ್ನ ಮುಟ್ಟಬೇಡಿ ಎಂದು ಶಿವಶಂಕರ್, ಶ್ರೀಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ: ಭಾರತದ 15 ಯೋಧರಿಗೆ ಗಾಯ!