ETV Bharat / state

ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿ ತಾಕೀತು

ಮಾಸ್ಕ್ ಇಲ್ಲದೆ ಸಂಚರಿಸುತ್ತಿರುವ ಜನರಿಗೆ ಮಾಸ್ಕ್ ಹಾಕಿಸಿ ತಿಳುವಳಿಕೆ ಹೇಳಿ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಆರ್​. ಬೀಳಿಗಿ, ಕೆಲವರಿಗೆ ದಂಡ ವಿಧಿಸಿದರು.

Everyone must use a mask: DC Mahantesh Bilagi
ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಿಗಿ
author img

By

Published : Jun 18, 2020, 6:23 PM IST

Updated : Jun 18, 2020, 11:21 PM IST

ಹರಿಹರ: ಕೊರೊನಾ ನಿಯಂತ್ರಿಸುವ ಸಲುವಾಗಿ ಮನೆಯಿಂದ ಹೊರ ಬರುವ ಸಮಯದಲ್ಲಿ ಜನರು ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದು ತಾಕೀತು ಮಾಡಿದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್​. ಬೀಳಿಗಿ, ಸ್ಥಳದಲ್ಲೇ ಕೆಲವರಿಗೆ 200 ರೂ. ದಂಡ ವಿಧಿಸುವ ಮೂಲಕ ಮಾಸ್ಕ್ ದಿನಾಚರಣೆ ಆಚರಿಸಲಾಯಿತು.

ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಿಗಿ

ಸರ್ಕಾರದ ಆದೇಶದಂತೆ ಗುರುವಾರ ಮಾಸ್ಕ್ ದಿನಾಚರಣೆಯ ಅಂಗವಾಗಿ ನಗರದ ಮಾರುಕಟ್ಟೆಗಳಲ್ಲಿ ಸಂಚರಿಸಿದ ಅವರು, ಅಂಗಡಿಗಳಿಗೆ ತೆರಳಿ ಪರೀಶಿಲಿಸಿ ಮಾಸ್ಕ್ ಹಾಕದೇ ಇರುವ ಮಾಲೀಕರಿಗೆ ಮತ್ತು ಗ್ರಾಹಕರಿಗೆ ತರಾಟೆ ತೆಗೆದುಕೊಂಡರು. ಅಲ್ಲದೇ ಸ್ಥಳದಲ್ಲೇ ಕೆಲವರಿಗೆ ದಂಡ ಹಾಕಿ, ಮಾಸ್ಕ್​ಗಳನ್ನು ನೀಡಿದರು.

ಮಾಲೀಕರೇ ಮಾಸ್ಕ್ ಹಾಕದಿದ್ದಾಗ ಬಂದತಹ ಗ್ರಾಹಕರಿಗೆ ನೀವು ಏನು ತಿಳಿ ಹೇಳುತ್ತೀರಿ ಎಂದು ಪ್ರಶ್ನಿಸಿದ ಅವರು, ನೀವು ಹಾಗೂ ನಿಮ್ಮ ಕೆಲಸಗಾರರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಜೊತೆಗೆ ಗ್ರಾಹಕರಿಗಾಗಿ ಸ್ಯಾನಿಟೈಸರ್ ವ್ಯವಸ್ಥೆ ಮಾಡುವಂತೆ ಆದೇಶಿಸಿದರು. ನಗರದಲ್ಲಿನ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿ ಪರೀಶಿಲಿಸಿ ಡಿ ಗ್ರೂಪ್ ನೌಕರರಿಗೆ ಮಾಸ್ಕ್ ಹಾಗೂ ಚವನ್ ಪ್ರಶ್ ನೀಡಿದರು.

Last Updated : Jun 18, 2020, 11:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.