ETV Bharat / state

ಗಲಭೆಕೋರರನ್ನ ಎನ್​ಕೌಂಟರ್ ಮಾಡಿ ಬಿಸಾಕಿ: ಭೀಮಾಶಂಕರ್ ಪಾಟೀಲ್​ - bengaluru riots

ಬೆಂಗಳೂರಿನಲ್ಲಿ ಗಲಭೆ ಮಾಡಿದ ಆರೋಪಿಗಳನ್ನು ಯಾವುದೇ ಮುಲಾಜಿರಲ್ಲದೇ ಎನ್​ಕೌಂಟರ್ ಮಾಡಿ ಬಿಸಾಕಬೇಕೆಂದು ಬಿಜೆಪಿ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಒತ್ತಾಯಿಸಿದ್ದಾರೆ.

Bhimashankar Patil
ಭೀಮಾಶಂಕರ್ ಪಾಟೀಲ್
author img

By

Published : Aug 14, 2020, 6:48 PM IST

ದಾವಣಗೆರೆ: ಬೆಂಗಳೂರಿನ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಗಲಭೆ ಪ್ರಕರಣದ ಆರೋಪಿಗಳನ್ನು ಉತ್ತರ ಪ್ರದೇಶದ ಮಾದರಿಯಲ್ಲಿ ಎನ್​ಕೌಂಟರ್ ಮಾಡಬೇಕು ಎಂದು ಬಿಜೆಪಿ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಒತ್ತಾಯಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ, ಗೃಹ ಸಚಿವರು ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಬೇಕು. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ 110 ಜನರನ್ನ ಬಂಧಿಸಲಾಗಿದೆ.‌ ಆದ್ರೆ ಅವರಿಗೆ ರಾಜ್ಯಾಧಿತ್ಯ ನೀಡುವ ಅವಶ್ಯಕತೆ ಇಲ್ಲ. ಅವರನ್ನು ಯುಪಿ ಮಾದರಿಯಲ್ಲಿ ಎನ್​ಕೌಂಟರ್ ಮಾಡಿ ಬಿಸಾಕಿ. ಪಿಎಫ್​ಐ, ಎಸ್​ಡಿಪಿಐ ಸಂಘಟನೆಗಳನ್ನ ನಿಷೇಧಿಸಬೇಕು. ಈ ಸಂಘಟನೆಗಳಿಗೆ ಪಾಕಿಸ್ತಾನದಿಂದ ಹಣ ಬರುತ್ತೆ. ಗಲಭೆ ಎಬ್ಬಿಸೋದೆ ಇವರ ಕೆಲಸ. ಹೀಗಾಗಿ ಈ ಎರಡು ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇಂಥ ಪುಂಡರನ್ನು ಬೆಳೆಸಿದ್ದಾರೆ.‌ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬೆಂಬಲಿಸಿದ್ದರಿಂದ ಈಗ ಅನುಭವಿಸುವಂತಾಗಿದೆ. ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ಈ ಕೃತ್ಯವನ್ನು ಆರೋಪಿಗಳು ಎಸಗಿದ್ದಾರೆ ಎಂದು ಭೀಮಾಶಂಕರ್ ಪಾಟೀಲ್ ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.