ದಾವಣಗೆರೆ: ಉದ್ಯಾನವನದ ಜಾಗ ಒತ್ತುವರಿ ಮಾಡಿಕೊಂಡು ಕಟ್ಟಡಕ್ಕೆ ಅಡಿಪಾಯ ಹಾಕಿದ್ದನ್ನು ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ (DUDA) ಅಧಿಕಾರಿಗಳು ತೆರವುಗೊಳಿಸಿದರು.
ನಗರದ ಎಸ್.ಎಸ್ ಬಡಾವಣೆಯ ಬಿ ಬ್ಲಾಕ್ನಲ್ಲಿ ಉದ್ಯಾನವನದ ಜಾಗ ಒತ್ತುವರಿ ಮಾಡಿ ರಾಜ್ ಮೋಹನ್ ಎಂಬುವರು ಕಟ್ಟಡಕ್ಕೆ ಅಡಿಪಾಯ ಹಾಕಿದ್ದರಂತೆ. ಈ ಬಗ್ಗೆ ಮಾಹಿತಿ ತಿಳಿದು ಉದ್ಯಾನವನದ ದಾಖಲೆ ಪರಿಶೀಲನೆ ನಡೆಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನ ಹಳ್ಳಿ ಶಿವಕುಮಾರ್ ಹಾಗೂ ಆಯುಕ್ತ ಕುಮಾರಸ್ವಾಮಿ, ಉದ್ಯಾನವನ ಜಾಗದಲ್ಲಿ ಹಾಕಿದ್ದ ಅಡಿಪಾಯವನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ.
ಓದಿ : ಉದ್ಘಾಟನೆಗೊಳ್ಳದ ನೂತನ ರಸ್ತೆಯನ್ನೇ ಒಡೆಯಲು ಮುಂದಾದ ಜಲಮಂಡಳಿ
ಒತ್ತುವರಿ ತೆರವುಗೊಳಿಸಲು ಮುಂದಾದ ಮಾಹಿತಿ ತಿಳಿದ ರಾಜ್ ಮೋಹನ್ ಸ್ಥಳಕ್ಕಾಗಮಿಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಪಾಲಿಕೆಯಲ್ಲಿ ಖಾತೆ ಬದಲಾವಣೆ ಮಾಡಿಸುವ ವೇಳೆ ಅಧಿಕಾರಿಗಳು, ಇದು ಪಾರ್ಕ್ ಜಾಗ ಎಂದು ನಮಗೆ ಯಾಕೆ ತಿಳಿಸಿಲ್ಲ ಎಂದು ರಾಜ್ ಮೋಹನ್ ಪ್ರಶ್ನಿಸಿದರು. ಅಲ್ಲದೆ, ಈ ಸಂಬಂಧ ನ್ಯಾಯಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.