ದಾವಣಗೆರೆ: ದೇಶದಲ್ಲಿ ಸಮಾನತೆ ಸಾರಿದ ಮಹಾನಾಯಕ ಡಾ.ಅಂಬೇಡ್ಕರ್ ಅವರ 130 ನೇ ಜಯಂತಿಯನ್ನು ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯನ್ನು ಮಾಜಿ ಸಚಿವ ಶಾಸಕ ಎಸ್.ಎ ರವೀಂದ್ರನಾಥ್ ಹಾಗೂ ಮಾಯಕೊಂಡ ಶಾಸಕ ಪ್ರೋ. ನಿಂಗಣ್ಣ ಪುಷ್ಪಾರ್ಚನೆ ಮಾಡುವ ಮೂಲಕ ಅವರ ಆದರ್ಶಗಳನ್ನು ನೆನೆಸಿದರು.
ಇದರೊಂದಿಗೆ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ ಜಯಂತಿ ನಿಮಿತ್ತ ಅವರ ಭಾವ ಚಿತ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಜಂಟಿಯಾಗಿ ಪುಷ್ಟಾರ್ಚನೆ ಮಾಡುವ ಮೂಲಕ ಅವರ ಜಯಂತಿ ಕೂಡ ಆಚರಿಸಲಾಯಿತು.
ಈ ವೇಳೆ ಸಾಕಷ್ಟು ದಲಿತ ಪರ ಸಂಘಟನೆಯ ಮುಖಂಡರು ಹಾಗೂ ಅಧಿಕಾರಿಗಳು ಜಿಪಂ ಅಧ್ಯಕ್ಷರಾದ ಶಾಂತಕುಮಾರಿ ಭಾಗಿಯಾಗಿದ್ದರು.