ETV Bharat / state

ಹೊರ ರಾಜ್ಯಗಳಿಂದ ಬರುವವರ ಕ್ವಾರಂಟೈನ್​ಗೆ ವಿರೋಧ ಬೇಡ: ದಾವಣಗೆರೆ ಎಸ್ಪಿ ಮನವಿ

ರಾಜ್ಯದಿಂದ ಕೆಲಸಕ್ಕೆಂದು ಹೊರರಾಜ್ಯಗಳಿಗೆ ಹೋದ ಕೆಲವರು ಮರಳಿ ಬರುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರು ಅವರನ್ನು ರೋಗಿಗಳಂತೆ ಕಾಣುತ್ತಿದ್ದಾರೆ. ಅದು ತಪ್ಪು. ಅನ್ಯ ರಾಜ್ಯಗಳಿಂದ ನಮ್ಮ ಜಿಲ್ಲೆ, ಗ್ರಾಮಗಳಿಗೆ ಬಂದವರನ್ನು ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕು ಎಂದು ಜಿಲ್ಲಾ ಎಸ್ಪಿ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ
author img

By

Published : May 22, 2020, 6:16 PM IST

ದಾವಣಗೆರೆ: ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವವರನ್ನು ಕ್ವಾರಂಟೈನ್ ಮಾಡಲು ಯಾರೂ ವಿರೋಧಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಮನವಿ ಮಾಡಿದರು.‌

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ

ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಿಂದ ಕೆಲಸಕ್ಕೆಂದು ಹೊರರಾಜ್ಯಗಳಿಗೆ ಹೋದ ಕೆಲವರು ಮರಳಿ ಬರುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರು ಅವರನ್ನು ರೋಗಿಗಳಂತೆ ಕಾಣುತ್ತಿದ್ದಾರೆ. ಅದು ತಪ್ಪು, ಆ ರೀತಿ ಬಂದವರನ್ನು ನಾವು ಜಿಲ್ಲೆ ಮತ್ತು ಸರ್ಕಾರಿ ಶಾಲೆಗಳಲ್ಲಿ ವೈದ್ಯಕೀಯ ಸೇವೆಯೊಂದಿಗೆ ಕ್ವಾರಂಟೈನ್ ಮಾಡುತ್ತಿದ್ದೇವೆ. ಅವರು ಹೊರ ಹೋಗದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಾನೂನನ್ನು ಎಲ್ಲರೂ ಗೌರವಿಸಬೇಕು. ಅನ್ಯ ರಾಜ್ಯಗಳಿಂದ ನಮ್ಮ ಜಿಲ್ಲೆ, ಗ್ರಾಮಗಳಿಗೆ ಬಂದವರನ್ನು ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು.

ಕೊರೊನಾ ಸೋಂಕಿತರು ಪತ್ತೆಯಾಗಿರುವ ಪ್ರದೇಶಗಳನ್ನು ಕಂಟೇನ್​​ಮೆಂಟ್​​ ಝೋನ್​ಗಳನ್ನಾಗಿ ಮಾಡಿದ್ದು, ಇಲ್ಲಿನ ನಿವಾಸಿಗಳು ಅನಗತ್ಯವಾಗಿ ಓಡಾಡದೇ ಸಹಕರಿಸಬೇಕು. ಆರೋಗ್ಯ, ತುರ್ತು ಸೇವೆಗಳಿಗೆ ಮಾತ್ರ ಹೊರಹೋಗಲು ಅವಕಾಶವಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.