ETV Bharat / state

ಬೇಡಿದ ವರ ಕರುಣಿಸುತ್ತಾಳಂತೆ ಉಚ್ಚೆಂಗಮ್ಮ... ದೇವಿಗೆ ತರಹೇವಾರಿ ಬೇಡಿಕೆಗಳ ಪತ್ರ! - ಪುಣ್ಯ ಕ್ಷೇತ್ರ

ಕನ್ನಡದಲ್ಲಿ 98, ಇಂಗ್ಲಿಷ್ 78, ಸಮಾಜಶಾಸ್ತ್ರ 95, ರಾಜ್ಯಶಾಸ್ತ್ರ 95, ಇತಿಹಾಸ 95, ಅರ್ಥ ಶಾಸ್ತ್ರ 80 ಸೇರಿ ಒಟ್ಟು 541 ಅಂಕಗಳು ಬರುವಂತೆ ಮಾಡು ದೇವಿ ಎಂದು ವಿದ್ಯಾರ್ಥಿ ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾನೆ.

ದೇವತೆಗೆ ಲೆಟರ್​ ಬರೆದ ಭಕ್ತರು
author img

By

Published : Mar 26, 2019, 4:57 PM IST

ದಾವಣಗೆರೆ: ಮಧ್ಯ ಕರ್ನಾಟಕದ ಪುಣ್ಯ ಕ್ಷೇತ್ರ ಉಚ್ಚೆಂಗೆಮ್ಮ ದೇವಿ ಇಲ್ಲಿನ ಜನಗಳ ಆರಾಧ್ಯ ದೇವತೆ. ಹರಪನಹಳ್ಳಿ ತಾಲೂಕಿನ ಈ ದೇವಿಯನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈ ಹಿನ್ನೆಲೆ ಇಲ್ಲಿನ ಕಾಣಿಕೆ ಹುಂಡಿಗೆ ಲಕ್ಷಾಂತರ ಹಣ ಹರಿದು ಬರುತ್ತದೆ. ವಿಶೇಷ ಅಂದರೆ ಹುಂಡಿಯಲ್ಲಿ ಹಣವಷ್ಟೇ ಅಲ್ಲಾ ದೇವರಿಗೆ ಬರೆದ ಲೆಟರ್​ ಕೂಡ ಸಿಕ್ಕಿವೆ.

ಹರಪನಹಳ್ಳಿ ತಾಲೂಕಿನ ಉಚ್ಚೆಂಗೆಮ್ಮ ಕೇಳಿದ ವರ ಕರುಣಿಸುವ ದೇವತೆ ಎಂದೇ ಪ್ರಸಿದ್ಧಿ. ಹೀಗಾಗಿ ಈ ದೇವತೆಗೆ ಲಕ್ಷಾಂತರ ಭಕ್ತರು ಇದ್ದಾರೆ. ಮುಖ್ಯವಾಗಿ ಅಮವಾಸ್ಯೆ, ಹುಣ್ಣೆಮೆ ದಿನದಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಭಕ್ತರು ಹಲವು ಬೇಡಿಕೆ ಈಡೇರಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ.

ದೇವತೆಗೆ ಲೆಟರ್​ ಬರೆದ ಭಕ್ತರು

ಕಾಣಿಕೆ ಹುಂಡಿಯಲ್ಲಿ ಸಿಕ್ಕ ಪತ್ರ:
ದೇವಿಗೆ ಭಕ್ತನೊಬ್ಬ ಪತ್ರ ಬರೆದಿದ್ದು, ಪಿಯುಸಿ ಪರೀಕ್ಷೆ ಬರೆಯಲು ಹೋಗುತ್ತಿರುವುದರಿಂದ ಸನ್ನಿಧಾನಕ್ಕೆ ಬರಲಾಗುತ್ತಿಲ್ಲ. ಪರೀಕ್ಷೆಯಲ್ಲಿ ಆಯ್ಕೆಗೆ ತೆಗೆದುಕೊಂಡ ವಿಷಯವಾರು 541 ಅಂಕಗಳು ಬರುವಂತೆ ಅನುಗ್ರಹಿಸಿದರೆ ಮುಂದಿನ ಯುಗಾದಿ ಜಾತ್ರೆಗೆ ದರ್ಶನ ಪಡೆದು ಹರಕೆ ಸಲ್ಲಿಸುತ್ತೇನೆ ಎಂದು ಪತ್ರದ ಮೂಲಕ ಹರಕೆ ಕಟ್ಟಿಕೊಂಡಿದ್ದಾನೆ.

ಕನ್ನಡದಲ್ಲಿ 98, ಇಂಗ್ಲಿಷ್ 78, ಸಮಾಜಶಾಸ್ತ್ರ 95, ರಾಜ್ಯಶಾಸ್ತ್ರ 95, ಇತಿಹಾಸ 95, ಅರ್ಥ ಶಾಸ್ತ್ರ 80 ಸೇರಿ ಒಟ್ಟು 541 ಅಂಕಗಳು ಬರುವಂತೆ ಮಾಡು ದೇವಿ ಎಂದು ವಿದ್ಯಾರ್ಥಿ ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾನೆ.

ಇದಲ್ಲದೆ, ರೈತರೊಬ್ಬರು ಪತ್ರ ಬರೆದಿದ್ದು, ಸಾಲ ಮಾಡಿ ಅಡಿಕೆ ತೋಟ ಮಾಡಿದ್ದೇನೆ. ಅಡಿಕೆಗೆ ನೀರಿನ ಕೊರತೆ ಆಗುತ್ತಿದೆ. ನಿನ್ನ ಅನುಗ್ರಹದಿಂದ ಫಸಲು ಬಂದಿದೆ. 10 ಕ್ವಿಂಟಾಲ್​ ರಾಶಿ ಅಡಿಕೆ ಬರುವಂತೆ ಮಾಡು ಎಂದು ಕೋರಿಕೊಂಡಿದ್ದಾರೆ.

ಇನ್ನು ಮಹಿಳೆಯೊಬ್ಬರು ಪತ್ರ ಬರೆದಿದ್ದು, ಪತಿಯ ಮನೆಯಲ್ಲಿ ನೆಮ್ಮದಿ ನೆಲೆಸಲಿ. ಅಪ್ಪ, ತಂಗಿ‌ ಮನೆ ಚೆನ್ನಾಗಿ ಇರಲಿ. ದುಡಿದ ಹಣ ಕೈ ಸಿಗುವಂತಾಗಲಿ ಎಂದು ಪತ್ರ ಬರೆದು ಕೋರಿಕೊಂಡಿದ್ದಾರೆ.

ಐತಿಹಾಸಿಕ ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮ ದೇವಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ನಡೆಯಿತು. ಎರಡು ತಿಂಗಳಿನಲ್ಲಿ ಬರೋಬ್ಬರಿ 15.70 ಲಕ್ಷ ರೂಪಾಯಿ ಸಂಗ್ರಹವಾಗಿದೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.