ETV Bharat / state

ಕೊನೆಗೂ ದುರ್ಗಾಂಬಿಕಾ ದೇವಿಗೆ ಕೋಣ ಬಲಿಕೊಟ್ಟ ಭಕ್ತಗಣ..! - ಕೋಣ ಬಲಿ

ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಹದ್ದಿನ ಕಣ್ಗಾವಲಿನ ನಡುವೆಯೂ ಕೋಣ ಬಲಿ ಕೊಡಲಾಗಿದೆ. ಸದ್ಯ ಬಲಿ ಕೊಡುವ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

devotees sacrifice buffalo to Goddess Durga
ದೇವಿಗೆ ಕೋಣ ಬಲಿ
author img

By

Published : Mar 4, 2020, 11:59 AM IST

ದಾವಣಗೆರೆ: ನಗರದ ದುರ್ಗಾಂಬಿಕೆ ದೇವಿ ಜಾತ್ರೆಯಲ್ಲಿ ಹದ್ದಿನ ಕಣ್ಗಾವಲಿನ ನಡುವೆಯೂ ಪ್ರಾಣಿ ಬಲಿ ಕೊಡಲಾಗಿದೆ. ಭಕ್ತರು ದೇವರ ಹೆಸರಲ್ಲಿ ಕೋಣವನ್ನ ಬಲಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲಾಡಳಿತ ದೇವಸ್ಥಾನದ ಆವರಣದಲ್ಲಿ ಪ್ರಾಣಿ ಬಲಿ ನಿಷೇಧ ಮಾಡಿತ್ತು. ರಾತ್ರಿ ಇಡೀ ಅಧಿಕಾರಿಗಳು ಪ್ರಾಣಿ ಬಲಿ ನೀಡದಂತೆ ತಡೆದಿದ್ದರು. ಕೋಣದ ರಕ್ತವನ್ನ ಸಿರಿಂಜ್ ಮೂಲಕ ತೆಗೆದು ದೇವಿಗೆ ಅರ್ಪಿಸಲಾಗಿತ್ತು.

ಆದ್ರೆ ಭಕ್ತರು ಅಜ್ಞಾತ ಸ್ಥಳದಲ್ಲಿ ಕೋಣ ಬಲಿ ಕೊಟ್ಟಿದ್ದಾರೆ ಎಂಬ ಮಾಹಿತಿ ಈಗ ಹರಿದಾಡುತ್ತಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಬಂದೋಬಸ್ತ್ ನಡುವೆಯೂ ಕೋಣ ಬಲಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಕೋಣ ಬಲಿ ಕೊಡುವ ವಿಡಿಯೋ ಹಾಗೂ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಕ್ತರು ದೇವರ ಹೆಸರಲ್ಲಿ ಕೊಣವನ್ನ ಬಲಿ ಕೊಟ್ಟಿದ್ದಾರೆ ಎನ್ನಲಾದ ವಿಡಿಯೋ ಮೊಬೈಲ್​ಗಳ ಸ್ಟೇಟಸ್​ನಲ್ಲಿ ರಾರಾಜಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.