ETV Bharat / state

ವಿಳಂಬವಾಗ್ತಿರೋ ಸೂಳೆಕೆರೆ ಸರ್ವೇ ಕಾರ್ಯ: ಕಾಣದ ಕೈಗಳ ಕೈವಾಡ..?

ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾದ ಚನ್ನಗಿರಿ ತಾಲೂಕಿನ ಸೂಳೆಕೆರೆಯ, ಸುತ್ತಮುತ್ತಲಿನ 900 ಎಕರೆಗೂ ಹೆಚ್ಚು ಪ್ರದೇಶ ಒತ್ತುವರಿಯಾಗಿದೆ.

sulikere-lake
ವಿಳಂಬವಾಗ್ತಿರೋ ಸೂಳೆಕೆರೆ ಸರ್ವೇ ಕಾರ್ಯ
author img

By

Published : Jan 20, 2020, 8:21 PM IST

ದಾವಣಗೆರೆ: ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾದ ಚನ್ನಗಿರಿ ತಾಲೂಕಿನ ಸೂಳೆಕೆರೆಯ, ಸುತ್ತಮುತ್ತಲಿನ 900 ಎಕರೆಗೂ ಹೆಚ್ಚು ಪ್ರದೇಶ ಒತ್ತುವರಿಯಾಗಿದೆ. ಅದರಲ್ಲಿ ತೋಟ ಗದ್ದೆಯನ್ನು ಕೆಲವರು ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸುವುದೇ ದೊಡ್ಡ ಸವಾಲಾಗಿದೆ. ಆದ್ರೆ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ನೇತೃತ್ವದಲ್ಲಿ, ಖಡ್ಗ ಸಂಸ್ಥೆ ಕೆರೆ ಒತ್ತುವರೆ ತೆರವಿಗೆ ನಿರಂತರವಾಗಿ ಹೋರಾಟ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೆರೆ ಸರ್ವೆಗೆ ಸರ್ಕಾರ ಆದೇಶ ನೀಡಿದ್ರು, ಸರ್ವೇ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

ಸೂಳೆಕೆರೆ ಅಂದಾಜು 6,460 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ವಿಶಾಲವಾದ ಕೆರೆ. ಆದರೆ, ವಿಪರ್ಯಾಸ ಅಂದ್ರೆ ಕೆರೆಯ 900 ಎಕರೆಗೂ ಹೆಚ್ಚು ಪ್ರದೇಶ ಒತ್ತುವರಿಯಾಗಿದೆ. ಈ ಬಗ್ಗೆ ನಿಖರ ಮಾಹಿತಿ ಸಂಗ್ರಹಣೆಗೆ ಸೆಪ್ಟೆಂಬರ್ 7ರಂದು ಜಿಯೋ ಮ್ಯಾಪಿಂಗ್ ಉಪಕರಣಗಳನ್ನು ಬಳಸಿ ಸರ್ವೇ ಕಾರ್ಯ ಆರಂಭವಾಗಿತ್ತು. ನಾಲ್ಕಾರು ದಿನಗಳ ಕಾಲ ನಡೆದ ಈ ಸರ್ವೇ ಕಾರ್ಯ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಅಧಿಕಾರಿಗಳು ತಾಂತ್ರಿಕ ದೋಷದ ನೆಪವೊಡ್ಡಿ ನುಣಿಚಿಕೊಳ್ಳಲು ಪ್ರಯತ್ನಿಸಿದ್ರು. ಈ ಕಾರ್ಯಕ್ಕೆ ಪಟ್ಟಭದ್ರರು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

ಈ ಕುರಿತು ಜಿಲ್ಲಾಧಿಕಾರಿಗಳ ಜನಸ್ಪಂದನೆ ಸಭೆಯಲ್ಲಿಯೂ ದೂರು ದಾಖಲಾಗಿತ್ತು. ಈ ಬಗ್ಗೆ ವಿಶೇಷ ಸಭೆಯನ್ನು ಆಯೋಜಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ರು. ಅದರಂತೆ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕೆರೆ ಸರ್ವೆ ಕಾರ್ಯದ ಅಧಿಕಾರಿಗಳು ಹಾಗೂ ಖಡ್ಗ ಸಂಘಟನೆ ಪದಾಧಿಕಾರಿಗಳೊಂದಿಗೆ ಸಭೆ ನಡೆದಿದೆ. ಕೆರೆಯಲ್ಲಿ ನೀರು ಅಥವಾ ಕೆಸರಿದ್ರು ಸರ್ವೇ ಕಾರ್ಯ ನಡೆಸಬಹುದು ಎಂಬುದು ತಂತ್ರಜ್ಞರ ಭರವಸೆಯಾಗಿತ್ತು. ಆದರೂ ಸರ್ವೇ ಕಾರ್ಯ ವಿಳಂಬವಾಗಿರುವುದು, ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬ ಆರೋಪ ಖಡ್ಗ ಸಂಘಟನೆಯದ್ದು.

ವಿಳಂಬವಾಗ್ತಿರೋ ಸೂಳೆಕೆರೆ ಸರ್ವೇ ಕಾರ್ಯ

ಸೂಳೆಕೆರೆ ತುಂಬಿ ಕೋಡಿ ಬಿದ್ದ ಸಂದರ್ಭದಲ್ಲಿ ಕೆರೆಯ ವಿಸ್ತಾರತೆ ಹಾಗೂ ವ್ಯಾಪ್ತಿ ಪ್ರಕಟಗೊಂಡಿತ್ತು. ಅದನ್ನೇ ಕೆರೆಯ ಹದ್ದಬಸ್ತು ಎಂಬುದನ್ನು ಗುರುತಿಸುವುದು ಸರಳವಾದ ಸಂಗತಿ. ಆದರು ಸರ್ವೇ ಕಾರ್ಯದ ಮೂಲಕ ಇದನ್ನು ಗುರುತಿಸಿದರೆ ದಾಖಲೆಗೆ ಅನುಕೂಲವಾಗುತ್ತದೆ ಎಂಬುದು ಜಿಲ್ಲಾಧಿಕಾರಿಗಳ ಅಭಿಪ್ರಾಯ.

ಕೆರೆ ನೀರು ಕೊಂಚ ಕಡಿಮೆಯಾದ ನಂತರ ವಿಸ್ತರಣೆ ಮಾಡಬಹುದು ಎಂದು ಸರ್ವೇ ಸಂಸ್ಥೆಯವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಫೆಬ್ರವರಿ 29ವರೆಗೆ ಅವರಿಗೆ ಕಾಲಾವಕಾಶ ನೀಡಿದ್ದಾರೆ. ಇದನ್ನು ಮೀರಿದರೆ ವಿಳಂಬ ದಂಡ ವಿಧಿಸುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ಸರ್ವೇ ಕಾರ್ಯದ ಸಂಪೂರ್ಣ ಮಾಹಿತಿ ದೊರೆತು, ಒತ್ತುವರಿ ಪ್ರಮಾಣವೆಷ್ಟು ಎಂಬುದು ಬಹಿರಂಗವಾಗಲಿದೆ. ಏಷ್ಯಾ ಖಂಡದ ಅತಿ ದೊಡ್ಡ ಕೆರೆಯ ಒತ್ತುವರಿ ತೆರವಾದರೆ ಸಾಕು ಎಂಬ ಮಾತು ರೈತರದ್ದು ಹಾಗೂ ಖಡ್ಗ ಸಂಘಟನೆಯದ್ದು.

Intro:KN_DVG_01_20_THERAVU_PBL_SCRIPT_7203307

REPORTER : YOGARAJ

ಸೂಳೆಕೆರೆ ಸರ್ವೇ ವಿಳಂಬವಾಗ್ತಿರೋದೇಕೆ...? ಮಾರ್ಚ್ ತಿಂಗಳೊಳಗೆ ಸರ್ವೇ ಆಗದಿದ್ದರೆ ಜಿಲ್ಲಾಡಳಿತ ಏನು ಮಾಡುತ್ತೆ ಗೊತ್ತಾ...?

ದಾವಣಗೆರೆ : ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯ ಸುತ್ತಮುತ್ತಲಿನ ೯೦೦ ಎಕರೆಗೂ ಹೆಚ್ಚು ಪ್ರದೇಶ ಒತ್ತುವರಿಯಾಗಿದೆ. ಅದರಲ್ಲಿ ತೋಟ, ಗದ್ದೆಯನ್ನು ಕೆಲವರು ಮಾಡಿಕೊಂಡಿದ್ದು, ಇದನ್ನು
ತೆರವುಗೊಳಿಸುವುದೇ ದೊಡ್ಡ ಸವಾಲಾಗಿದೆ. ಆದ್ರೆ, ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ನೇತೃತ್ವದಲ್ಲಿ ಖಡ್ಗ ಸಂಸ್ಥೆ ಕೆರೆ ಒತ್ತುವರೆ ತೆರವಿಗೆ ನಿರಂತರವಾಗಿ ಹೋರಾಟ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಕೆರೆ ಸರ್ವೆಗೆ ಸರ್ಕಾರ ಆದೇಶ ನೀಡಿದ್ರು, ಸರ್ವೇ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಅಂದಾಜು 6,460 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ವಿಶಾಲ ಕೆರೆ. ಆದ್ರೆ, ವಿಪರ್ಯಾಸ ಅಂದ್ರೆ ಕೆರೆಯ ೯೦೦ ಎಕರೆಗೂ ಹೆಚ್ಚು
ಪ್ರದೇಶ ಒತ್ತುವರಿಯಾಗಿದೆ. ಈ ಬಗ್ಗೆ ನಿಖರ ಮಾಹಿತಿ ಸಂಗ್ರಹಣೆಗೆ ಸೆ. 7ರಂದು ಜಿಯೋಮ್ಯಾಪಿಂಗ್ ಉಪಕರಣಗಳನ್ನು ಬಳಸಿ ಸರ್ವೇ ಕಾರ್ಯ ಆರಂಭವಾಗಿತ್ತು. ನಾಲ್ಕಾರು ದಿನಗಳ ಕಾಲ
ನಡೆದ ಈ ಸರ್ವೇ ಕಾರ್ಯ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಅಧಿಕಾರಿಗಳು ತಾಂತ್ರಿಕ ದೋಷದ ನೆಪವೊಡ್ಡಿ ನುಣಿಚಿಕೊಳ್ಳಲು ಪ್ರಯತ್ನಿಸಿದ್ರು. ಈ ಕಾರ್ಯಕ್ಕೆ ಪಟ್ಟಭದ್ರರು ಅಡ್ಡಿಪಡಿಸುತ್ತಿದ್ದಾರೆ
ಎಂಬ ಆರೋಪವೂ ಕೇಳಿ ಬಂದಿತ್ತು.

ಈ ಸಂಬಂಧ ಜಿಲ್ಲಾಧಿಕಾರಿಗಳ ಜನಸ್ಪಂದನೆ ಸಭೆಯಲ್ಲೂ ದೂರಾಗಿ ದಾಖಲಾಗಿತ್ತು. ಈ ಬಗ್ಗೆ ವಿಶೇಷ ಸಭೆಯನ್ನು ಆಯೋಜಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ರು. ಅದರಂತೆ,
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕೆರೆ ಸರ್ವೇ ಕಾರ್ಯದ ಅಧಿಕಾರಿಗಳು ಹಾಗೂ ಖಡ್ಗ ಸಂಘಟನೆ ಪದಾಧಿಕಾರಿಗಳೊಂದಿಗೆ ಸಭೆ ನಡೆದಿದೆ. ಕೆರೆಯಲ್ಲಿ ನೀರಿದ್ರು, ಕೆಸರಿದ್ರು ಸರ್ವೇ ಕಾರ್ಯ ನಡೆಸಬಹುದು
ಎಂಬುದು ತಂತ್ರಜ್ಞರ ಭರವಸೆಯಾಗಿತ್ತು. ಆದ್ರೂ, ಸರ್ವೇ ಕಾರ್ಯ ವಿಳಂಬವಾಗಿರುವುದು, ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬ ಆರೋಪ ಖಡ್ಗ
ಸಂಘಟನೆಯದ್ದು.

ಸೂಳೆಕೆರೆ ತುಂಬಿ ಕೋಡಿ ಬಿದ್ದ ಸಂದರ್ಭದಲ್ಲಿ ಕೆರೆಯ ವಿಸ್ತಾರತೆ ಹಾಗೂ ವ್ಯಾಪ್ತಿ ಪ್ರಕಟಗೊಂಡಿತ್ತು. ಅದನ್ನೇ, ಕೆರೆಯ ಹದ್ದಬಸ್ತು ಎಂಬುದನ್ನು ಗುರುತಿಸುವುದು ಸರಳವಾದ ಸಂಗತಿ. ಅದ್ರೂ,
ಸರ್ವೇ ಕಾರ್ಯದ ಮೂಲಕ ಇದನ್ನು ಗುರುತಿಸಿದರೆ ದಾಖಲೆಗೆ ಅನುಕೂಲವಾಗುತ್ತದೆ ಎಂಬುದು ಜಿಲ್ಲಾಧಿಕಾರಿಗಳ ಅಭಿಪ್ರಾಯ.

ಕೆರೆ ನೀರು ಕೊಂಚ ಕಡಿಮೆಯಾದ ನಂತರ ವಿಸ್ತರಣೆ ಮಾಡಬಹುದು ಎಂದು ಸರ್ವೇ ಸಂಸ್ಥೆಯವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಫೆ. ೨೯ ವರೆಗೆ ಅವರಿಗೆ ಕಾಲಾವಕಾಶ ನೀಡಿದ್ದಾರೆ. ಇದನ್ನು
ಮೀರಿದರೆ ವಿಳಂಬ ದಂಡ ವಿಧಿಸುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ಸರ್ವೇ ಕಾರ್ಯದ ಸಂಪೂರ್ಣ ಮಾಹಿತಿ ದೊರೆತು, ಒತ್ತುವರಿ ಪ್ರಮಾಣವೆಷ್ಟು ಎಂಬುದು ಬಹಿರಂಗವಾಗಲಿದೆ.
ಒಟ್ಟಿನಲ್ಲಿ ಏಷ್ಯಾ ಖಂಡದ ಅತಿ ದೊಡ್ಡ ಕೆರೆಯ ಒತ್ತುವರಿ ತೆರವಾದರೆ ಸಾಕು ಎಂಬ ಮಾತು ರೈತರದ್ದು ಹಾಗೂ ಖಡ್ಗ ಸಂಘಟನೆಯದ್ದು.

ಬೈಟ್ 1:
ಗುರುಬಸವ ಸ್ವಾಮೀಜಿ, ವಿರಕ್ತಮಠ, ಪಾಂಡೋಮಟ್ಟಿ

ಬೈಟ್ 2

ಮಹಾಂತೇಶ್ ಬೀಳಗಿ, ದಾವಣಗೆರೆ ಜಿಲ್ಲಾಧಿಕಾರಿ
Body:KN_DVG_01_20_THERAVU_PBL_SCRIPT_7203307

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.