ETV Bharat / state

ಮಾಸ್ಕ್ ಧರಿಸದೇ ಹೊರ ಬಂದ್ರೆ, ಉಗುಳಿದರೆ ಬೀಳುತ್ತೆ ದಂಡ.. - ದಂಡ

ಎಲ್ಲರೂ ತಪ್ಪದೇ ಮಾಸ್ಕ್ ಧರಿಸಬೇಕು. ಜಿಲ್ಲೆಯಲ್ಲಿ ಕಳೆದ 3 ದಿನಗಳಲ್ಲಿ 8 ಕೋವಿಡ್-19 ಪ್ರಕರಣ ದೃಢಪಟ್ಟಿವೆ. ಇಂತಹ ವೇಳೆಯಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ಈ ಹೋರಾಟಕ್ಕೆ ಜನರು ಕೈಜೋಡಿಸಬೇಕಿದೆ.

ಮಹಾಂತೇಶ್ ಆರ್. ಬೀಳಗಿ
DC Mahanthesh beelagi
author img

By

Published : May 1, 2020, 8:58 PM IST

ದಾವಣಗೆರೆ: ಜಿಲ್ಲೆಯಲ್ಲಿ 8 ಕೊರೊನಾ ಪಾಸಿಟಿವ್​ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು, ಯಾರೂ ಕೂಡ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ, ಕೇವಲ ತುರ್ತು ಸಂದರ್ಭದ ವೇಳೆಯಲ್ಲಿ ಮಾತ್ರ ಮನೆಯಿಂದ ಹೊರಬನ್ನಿ, ಆ ವೇಳೆ ಕಡ್ಡಾಯವಾಗಿ ಮಾಸ್ಕ್​ ಧರಿಸಿ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ..

ಸಾರ್ವಜನಿಕರು ಎಲ್ಲೆಂದರಲ್ಲಿ ಉಗುಳುವಂತಿಲ್ಲ. ಮಾಸ್ಕ್ ಹಾಕದಿದ್ದರೆ, ಉಗುಳಿದರೆ ಮೊದಲ ಬಾರಿ ₹500 ದಂಡ ಹಾಗೂ 2ನೇ ಬಾರಿಯೂ ಉಲ್ಲಂಘಿಸಿದರೆ 1,000 ರೂಪಾಯಿ ದಂಡ ವಿಧಿಸಲಾಗುವುದು. ಇದಕ್ಕೆ ದಯವಿಟ್ಟು ಅವಕಾಶ ಮಾಡಿಕೊಡಬೇಡಿ.‌ ಎಲ್ಲರೂ ತಪ್ಪದೇ ಮಾಸ್ಕ್ ಧರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 8 ಕೋವಿಡ್-19 ಪ್ರಕರಣ ದೃಢಪಟ್ಟಿವೆ. ಇಂತಹ ವೇಳೆಯಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ಈ ಹೋರಾಟಕ್ಕೆ ಜನರು ಕೈಜೋಡಿಸಬೇಕು ಎಂದರು.

ಈಗಾಗಲೇ ಒಂದೇ ದಿನ 6 ಕೊರೊನಾ ಪಾಸಿಟಿವ್ ಬಂದಿವೆ, ಇದು ಎಂಟಕ್ಕೇರಿದೆ. ಇಬ್ಬರು ಸೋಂಕಿತರ ಪ್ರಾಥಮಿಕ ಹಾಗೂ 2ನೇ ಹಂತದ ಸಂಪರ್ಕ ಹೊಂದಿದ್ದ 89 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.