ETV Bharat / state

ಯಾವ ಪಕ್ಷಕ್ಕೆ ಗೆಲುವಿನ ಬೆಣ್ಣೆ: ಎಸ್​ ಎಸ್​ ಮಲ್ಲಿಕಾರ್ಜುನ್​ಗೆ ಯಾರಾಗಲಿದ್ದಾರೆ ಎದುರಾಳಿ?

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್​- ಬಿಜೆಪಿ ನಡುವಿನ ಜಿದ್ದಾಜಿದ್ದಿಗೆ ಕಣ ಒದಗಿಸಲಿದೆ. ಇಲ್ಲಿ ಉಭಯ ಪಕ್ಷಗಳು ಸರಿಸಮನಾಗಿ ಟಕ್ಕರ್​ ನೀಡುತ್ತಿದ್ದು, ಈ ಬಾರಿಯ ವಿಜಯ ಮಾಲೆ ಯಾರ ಕೊರಳಿಗೆ ಎಂಬುದು ಕುತೂಹಲ ಮೂಡಿಸಿದೆ.

ಯಾವ ಪಕ್ಷದ ದೋಸೆಗೆ ಗೆಲುವಿನ ಬೆಣ್ಣೆ
ಯಾವ ಪಕ್ಷದ ದೋಸೆಗೆ ಗೆಲುವಿನ ಬೆಣ್ಣೆ
author img

By

Published : Mar 16, 2023, 12:27 PM IST

Updated : Mar 16, 2023, 1:05 PM IST

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಕೇಂದ್ರ ಬಿಂದುವಾದ ಉತ್ತರ ವಿಧಾನಸಭಾ ಕ್ಷೇತ್ರ ಈ ಬಾರಿ ಕಣ ಕುತೂಹಲ ಮೂಡಿಸಿದೆ. ಇಲ್ಲಿ ಮೊದಲಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಬಿಜೆಪಿಯ ಎಸ್ ​ಎ ರವೀಂದ್ರನಾಥ್ ಅವರು ಮೂರು ಬಾರಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್​ನ ಮಾಜಿ ಸಚಿವ ಎಸ್ ​ಎಸ್ ಮಲ್ಲಿಕಾರ್ಜುನ್ ಅವರು ಅಭಿವೃದ್ಧಿ ಕೆಲಸಗಳ ಮೂಲಕ ಮತದಾರರ ಗಮನ ಸೆಳೆದಿದ್ದಾರೆ.

ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಅವರು ಕೇವಲ 4 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರು. ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಭಾರಿ ಪೈಪೋಟಿ ಇರುವ ಕಾರಣ ಯಾವ ಪಕ್ಷ ಗೆಲ್ಲುತ್ತೆ ಅನ್ನೋದು ಸಸ್ಪೆನ್ಸ್​ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಮಲ್ಲಿಕಾರ್ಜುನ್ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಬಿಜೆಪಿ ಅಭ್ಯರ್ಥಿ ಇನ್ನೂ ನಿರ್ಧಾರವಾಗಿಲ್ಲ.

ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಮಾಜಿ ಸಚಿವ ಮಲ್ಲಿಕಾರ್ಜುನ್ ಸಿದ್ಧರಾಗಿದ್ದಾರೆ. ಶಾಮನೂರು ಕುಟುಂಬ ಹಾಗೂ ಬಿಜೆಪಿಯ ಎಸ್​ಎ ರವೀಂದ್ರನಾಥ್ ಕುಟುಂಬ ಚುನಾವಣೆಯಲ್ಲಿ ಮೊದಲಿನಿಂದಲೂ ಎದುರಾಳಿಗಳು. ಈ ಬಾರಿಯ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ರವೀಂದ್ರನಾಥ್​ ಘೋಷಿಸಿರುವುದು ಮಲ್ಲಿಕಾರ್ಜುನ್​ ಅವರಿಗೆ ಪ್ಲಸ್​ ಪಾಯಿಂಟ್​ ಆಗುವ ಸಾಧ್ಯತೆ ಇದೆ.

ದಾವಣಗೆರೆ ಉತ್ತರ ಮತ ಕ್ಷೇತ್ರದ ವಿವರ
ದಾವಣಗೆರೆ ಉತ್ತರ ಮತ ಕ್ಷೇತ್ರದ ವಿವರ

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಲ್ಲಿಕಾರ್ಜುನ್ ಅವರು, ರವೀಂದ್ರನಾಥ್ ವಿರುದ್ಧ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಅಭಿವೃದ್ಧಿ ಕೆಲಸಗಳ ಮೂಲಕ ಮಲ್ಲಿಕಾರ್ಜುನ್ ಗಮನ ಸೆಳೆದಿದ್ದರು. ಆದರೆ, 2018 ರಲ್ಲಿ ಫಲಿತಾಂಶ ಉಲ್ಟಾ ಆಗಿತ್ತು. ಮಲ್ಲಿಕಾರ್ಜುನ್ ಅವರು ರವೀಂದ್ರನಾಥ್​ ವಿರುದ್ಧ 4 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಆದರೀಗ ಕಣ ಲೆಕ್ಕಾಚಾರ ಬದಲಾಗಿದೆ. ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ್ ಸ್ಪರ್ಧೆ ಪಕ್ಕಾ ಆಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕರೆದು ತಮ್ಮ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದಾರೆ. ಶಾಮನೂರಿನಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್​ಗಳನ್ನು ಮನೆ ಮನೆಗಳಿಗೆ ಹಂಚಿ ಮಹಿಳೆಯರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

ಮೂರು ಚುನಾವಣೆಗಳ ಇತಿಹಾಸ: 2008 ರ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿ ವಶವಾಗಿತ್ತು. ಬಿಜೆಪಿ ಅಭ್ಯರ್ಥಿ ಎಸ್​ ಎ ರವೀಂದ್ರನಾಥ್ 75,798 ಮತಗಳನ್ನು ಪಡೆದು ಜೆಡಿಎಸ್ ಅಭ್ಯರ್ಥಿ ಬಿಎಂ ಸತೀಶ್ ವಿರುದ್ಧ ಜಯಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿ ಬಿ ಎಂ ಸತೀಶ್ ಅವರು 21,888 ಮತಗಳನ್ನು ಪಡೆದು ಸೋಲುಂಡಿದ್ದರು. ಇನ್ನು ಕಾಂಗ್ರೆಸ್​ ಅಭ್ಯರ್ಥಿ ಎಸ್​ ಎಸ್ ಮಲ್ಲಿಕಾರ್ಜುನ್ ಬಿ ಫಾರ್ಮ್ ಎಡವಟ್ಟಿನಿಂದ ಚುನಾವಣೆ ತಪ್ಪಿಸಿಕೊಂಡಿದ್ದರು.

2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಮಲ್ಲಿಕಾರ್ಜುನ್ ಅವರು 88,101 ಮತಗಳನ್ನು ಪಡೆದು ಗೆದ್ದಿದ್ದರು. ಬಿಜೆಪಿಯ ಎಸ್ ಎ ರವೀಂದ್ರನಾಥ್ 30,821 ಮತಗಳಿಂದ ಸೋಲುಂಡಿದ್ದರು. ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿರಲಿಲ್ಲ. 2018 ರ ಚುನಾವಣೆಯಲ್ಲಿ ಫಲಿತಾಂಶ ಬದಲಾಗಿ ಬಿಜೆಪಿ ಅಭ್ಯರ್ಥಿ ಎಸ್ ​ಎ ರವೀಂದ್ರನಾಥ್ ಅವರು 76,540 ಮತಗಳನ್ನು ಪಡೆದು ಕಾಂಗ್ರೆಸ್​ನ ಮಲ್ಲಿಕಾರ್ಜುನ್ ಅವರನ್ನು ಸೋಲಿಸಿದ್ದರು.

ದಾವಣಗೆರೆ ಉತ್ತರ ಕ್ಷೇತ್ರದ ಮತದಾರದ ವಿವರ: ದಾವಣಗೆರೆ ಉತ್ತರ ಮತ ಕ್ಷೇತ್ರದಲ್ಲಿ ಒಟ್ಟು 230386 ಮತದಾರರು ಇದ್ದಾರೆ. ಇದರಲ್ಲಿ ಪುರುಷರು 114432, ಮಹಿಳೆಯರು 115869, ಇತರೆ 85 ಜನರಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ಹೆಚ್ಚಿದ್ದು, ಅವರೇ ಗೆಲುವಿನ ರೂವಾರಿಗಳಾಗಿದ್ದಾರೆ.

ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು: 2023 ರ ಚುನಾವಣೆಯಲ್ಲಿ ಅನಾರೋಗ್ಯ ಹಾಗೂ ವಯಸ್ಸಿನ ಕಾರಣ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರು ಘೋಷಿಸಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಮತ್ತೆ ಕಣಕ್ಕೆ ಧುಮಿಕಿದರೂ ಅಚ್ಚರಿ ಇಲ್ಲ. ಇದಲ್ಲದೇ, ಸಂಸದ ಜಿಎಂ ಸಿದ್ದೇಶ್ವರ್, ಲೋಕಿಕೆರೆ ನಾಗರಾಜ್, ಬಿಎಸ್ ಜಗದೀಶ್, ಎಸ್ ಟಿ ವೀರೇಶ್, ಶಿವಯೋಗಿಸ್ವಾಮಿ, ಕೊಂಡಜ್ಜಿ ಜಯಪ್ರಕಾಶ್, ಎಂ ಆನಂದ್ ಸೇರಿದಂತೆ 8 ಸ್ಪರ್ಧಾಕಾಂಕ್ಷೆ ಹೊಂದಿದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮಾತ್ರ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್​ನಿಂದ ಆನಂದ್ ಎಂಬುವವರು ಸ್ಪರ್ಧೆಗೆ ಇಳಿಯಲಿದ್ದಾರೆ.

ಕ್ಷೇತ್ರದ ನಾಡಿಮಿಡಿತ ಹೇಗಿದೆ: ಲಿಂಗಾಯತ ಮತದಾರರೇ ಹೆಚ್ಚಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಅನುಕೂಲಕರವಾಗಿದೆ. ಬಿಜೆಪಿಗೆ ನಿಷ್ಠಾವಂತ ಕಾರ್ಯಕರ್ತರ ಬಲವಿದೆ. ಆದರೆ, ಹಾಲಿ ಶಾಸಕ ಎಸ್ ​ಎ ರವೀಂದ್ರನಾಥ್ ಅವರು ಜನಸಂಪರ್ಕಕ್ಕೆ ಸಿಗದೇ ಇರುವುದು ಮೈನಸ್​ ಪಾಯಿಂಟ್​. ರವೀಂದ್ರ ನಾಥ್ ಗೆದ್ದ ಬಳಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಕೊರೊನಾ ವೇಳೆ ಶಾಸಕರು ಜನರ ಸಮಸ್ಯೆ ಕೇಳದೆ ಇರುವುದು ಮತದಾರರಲ್ಲಿ ಅಸಮಾಧಾನ ಮೂಡಿಸಿದೆ.

ಸಂಸದ ಜಿಎಂ ಸಿದ್ದೇಶ್ವರ್ ಅವರು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರು ಸ್ಪರ್ಧೆ ಮಾಡಿದರೆ ಬಿಜೆಪಿ, ಕಾಂಗ್ರೆಸ್​ಗೆ ಟಕ್ಕರ್​​ ನೀಡಬಹುದು. ಇನ್ನು, ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ್​ ಅವರು ಸ್ಪರ್ಧಿಸಲಿದ್ದು, ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಸಚಿವರಾಗಿದ್ದಾಗ ಉತ್ತಮ ಕೆಲಸ ಮಾಡಿದ್ದರು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಇದು ಅವರಿಗೆ ಪ್ಲಸ್​ ಪಾಯಿಂಟ್​. ಈಗಾಗಲೇ ಕ್ಷೇತ್ರದಾದ್ಯಂತ ತಿರುಗಾಡಿ ಮತಬೇಟೆ ಆರಂಭಿಸಿದ್ದಾರೆ.

ಒಟ್ಟಾರೆ, ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಯಾವ ಪಕ್ಷದಿಂದಲೂ ಈವರೆಗೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲವಾದರೂ, ಕಾಂಗ್ರೆಸ್- ಬಿಜೆಪಿ ನಡುವೆ ಹೈವೋಲ್ಟೇಜ್ ಕದನ ಏರ್ಪಡೋದು ಪಕ್ಕಾ.

ಓದಿ: ಪುತ್ತೂರು ಬಿಜೆಪಿ ಟಿಕೆಟ್‌ ಯಾರಿಗೆ? ಕೈ ಪಕ್ಷದಿಂದ ಯಾರು ನಿಲ್ತಾರೆ?

Last Updated : Mar 16, 2023, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.